ಮಡಿಕೇರಿ, ಮೇ 12: ಬಿ. ಬಾಡಗ ಗ್ರಾಮದ ಶ್ರೀ ಭಗವತಿ ದೇವರ ಆದಿಸ್ಥಾನದ (ಚೋತ) ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ತಾ. 16 ಮತ್ತು 17 ರಂದು ನಡೆಯಲಿದೆ.
ತಾ. 16 ರಂದು ಸಂಜೆ 5.30 ರಿಂದ 10 ಗಂಟೆಯವರೆಗೆ ಪ್ರಾರ್ಥನೆ, ಪ್ರಸಾದ ಶುದ್ಧಿ, ಪುಣ್ಯಾಃವಾಚನ, ವಾಸ್ತುಪೂಜೆ, ರಾಕ್ಷೋಘ್ನ ಹೋಮ, ಬಿಂಬ ಶುದ್ಧಿ, ಆದಿವಾಸ. ತಾ. 17 ರಂದು ಬೆಳಿಗ್ಗೆ 6 ಗಂಟೆಯಿಂದ ಗಣಪತಿ ಹೋಮ, ಪ್ರತಿಷ್ಠಾ ಪ್ರಧಾನ ಹೋಮ, ಬ್ರಹ್ಮಕಲಶ ಪ್ರತಿಷ್ಠೆ, ಬ್ರಹ್ಮಕಲಶ ಪೂಜೆ, ದೇವತಾ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ಹಾಗೂ ಪ್ರತಿಷ್ಠಾ ಮುಹೂರ್ತ ಬೆಳಿಗ್ಗೆ 8 ಗಂಟೆಗೆ ವೃಷಭ ಲಗ್ನದಲ್ಲಿ ನಡೆಯಲಿದೆ.