ವೀರಾಜಪೇಟೆ, ಮೇ 12: ವೀರಾಜಪೇಟೆ ದೇವಣಗೇರಿ ಪ್ಲಾಂಟರ್ಸ್ ಕ್ಲಬ್ ವತಿಯಿಂದ ಕಳೆದ 5 ದಿನಗಳಿಂದ ನಡೆದ ಕೊಡಗು ಜಮ್ಮಾ ಫೈವ್ ಸೈಡರ್ಸ್ ಫುಟ್‍ಬಾಲ್‍ನ ಫೈನಲ್ಸ್‍ನಲ್ಲಿ ಒಂಟಿಯಂಗಡಿ ಒಕ್ಕಲಿಗರ ಸಂಘದ ತಂಡ 4-0 ಗೋಲುಗಳಿಂದ ಅಯ್ಯಮ್ಮಂಡ ತಂಡವನ್ನು ಮಣಿಸಿ ರೂ.30,000 ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ರನ್ನರ್ಸ್ ಪ್ರಶಸ್ತಿ ಪಡೆದ ಅಯ್ಯಮ್ಮಂಡ ತಂಡ ರೂ. 20,000 ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡಿತು.

ಇಂದು ಅಪರಾಹ್ನ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಚೆಂಡು ತಳ್ಳುವದರ ಮೂಲಕ ಅಂತಿಮ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯು ನಿತ್ಯ ಜಂಜಾಟದಲ್ಲಿರುವ ಮನುಷ್ಯನಿಗೆ ಮನರಂಜನೆ, ಶಾಂತಿ ನೆಮ್ಮದಿಯನ್ನು ನೀಡುತ್ತದೆ ಎಂದರು. ಸಭೆಯನ್ನುದ್ದೇಶಿಸಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಮಾತನಾಡಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಶಶಿ ಸುಬ್ರಮಣಿ ಮಾತನಾಡಿ, ಜಮ್ಮಾ ಮನೆ ಹೆಸರು ಹೊಂದಿರುವ ಎಲ್ಲಾ ಜನಾಂಗದವರ ವಿಶ್ವಾಸ ಒಗ್ಗಟ್ಟನ್ನು ಸಾಧಿಸಲು ಈ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.

ವೇದಿಕೆಯಲ್ಲಿ ಕುಂದ ಗ್ರಾಮದ ಪ್ಲಾಂಟರ್ ಕಡೇಮಾಡ ದೇವಯ್ಯ, ಉಮ್ಮತ್ತಾಟ್ ಕಲೆಯಲ್ಲಿ ವಿಶಿಷ್ಟತೆಗೆ ಶ್ರಮಿಸಿದ ಕಡೇಮಾಡ ಗೌರಮ್ಮ ನಂಜಪ್ಪ, ಹಾಕಿ ಅಂತರಾಷ್ಟ್ರೀಯ ಆಟಗಾರ

(ಮೊದಲ ಪುಟದಿಂದ) ಕರಿನೆರವಂಡ ಸೋಮಣ್ಣ, ಕೊಡವ ಅಕಾಡೆಮಿಯ ಮಾಜಿ ಸದಸ್ಯ ಬೀನಂಡ ಪೂಣಚ್ಚ ಉಪಸ್ಥಿತರಿದ್ದರು. ಪ್ಲಾಂಟರ್ಸ್ ಕ್ಲಬ್‍ನ ಪದಾಧಿಕಾರಿಗಳು ಹಾಜರಿದ್ದರು. ಪುಗ್ಗೇರ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ತಾ. 7ರಂದು ಆಯೋಜಿಸಿದ್ದ ತೆಂಗಿನಕಾಯಿ ಗುಂಡು ಹೊಡೆಯುವÀ ಮಣವಟ್ಟಿರ ಬೋಪಣ್ಣ ಪ್ರಥಮ ಬಹುಮಾನ ಹಾಗೂ ದ್ವಿತೀಯ ಸ್ಥಾನ ಪಡೆದ ಎಂ.ರಾಜಾ ಬೋಪಣ್ಣ ಅವರುಗಳಿಗೆ ಬಹುಮಾನ ವಿತರಿಸಲಾಯಿತು.