ಮಡಿಕೇರಿ, ಮೇ 12: ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಏಕಲವ್ಯ ಮಾದರಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜಿನ 2019-20ನೇ ಸಾಲಿನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳು ಮತ್ತು ಕೈ ಬರಹ ಅರ್ಜಿಯನ್ನು ಪಾಂಶುಪಾಲರ ಕಚೇರಿಗೆ ತಾ. 15 ರೊಳಗೆ ಸಲ್ಲಿಸಬಹುದಾಗಿದೆ.

ಶಾಲಾ ವಿಭಾಗ ಸಹ ಶಿಕ್ಷಕರು ಗಣಿತಕ್ಕೆ ವಿದ್ಯಾರ್ಹತೆ ಬಿಎಸ್‍ಸಿ ಬಿಇಡಿ, ಆಂಗ್ಲ ಮಾಧ್ಯಮ ಹುದ್ದೆ 1, ವಿಜಾÐನ ವಿಷಯಕ್ಕೆ ಬಿಎಸ್‍ಸಿ, ಬಿ.ಇಡಿ ಆಂಗ್ಲ ಮಾಧ್ಯಮ ಹುದ್ದೆ 1, ಸಮಾಜ ವಿಜ್ಞಾನ ವಿಷಯಕ್ಕೆ ಬಿಎ, ಬಿ.ಇಡಿ ಆಂಗ್ಲ ಮಾಧ್ಯಮ ಹುದ್ದೆ 1, ದೈಹಿಕ ಶಿಕ್ಷಣ ಸಹ ಶಿಕ್ಷಕರು ಬಿಎ, ಬಿಪಿ.ಇಡಿ ಹುದ್ದೆ 1, ಸ್ಟಾಫ್ ನರ್ಸ್‍ಗೆ ಪಿ.ಯು.ಸಿ. ಮತ್ತು ನರ್ಸಿಂಗ್ ಹುದ್ದೆ 1. ಏಕಲವ್ಯ ಮಾದರಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜು ವಿಭಾಗಕ್ಕೆ ರಸಾಯನಶಾಸ್ತ್ರ ವಿಷಯಕ್ಕೆ ರಸಾಯನಶಾಸ್ತ್ರ ಸ್ನಾತಕೋತ್ತರ ಪದವಿ ಆಂಗ್ಲ ಮಾಧ್ಯಮ ಹುದ್ದೆ 1, ಜೀವಶಾಸ್ತ್ರ ವಿಷಯಕ್ಕೆ ಜೀವಶಾಸ್ತ್ರ ಸ್ನಾತಕೋತ್ತರ ಪದವಿ ಆಂಗ್ಲ ಮಾಧ್ಯಮ ಹುದ್ದೆ 1.

ಅರ್ಜಿಯನ್ನು ಪ್ರಾಂಶುಪಾಲರ ಕಚೇರಿ, ಏಕಲವ್ಯ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಾಳುಗೋಡು ವೀರಾಜಪೇಟೆ ತಾಲೂಕು ಇಲ್ಲಿಗೆ ಸಲ್ಲಿಸಬಹುದಾಗಿದೆ. ದೂರವಾಣಿ ಸಂಖ್ಯೆ 9483162466, 9902499269 ನ್ನು ಸಂಪರ್ಕಿಸಬಹುದು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಶಿವಕುಮಾರ ತಿಳಿಸಿದ್ದಾರೆ.