ವೀರಾಜಪೇಟೆ, ಮೇ 12: ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ಅಗ್ನಿ ಚಾಮುಂಡಿ ದೇವಿಯ ಉತ್ಸವ ವಿವಿಧ ತೆರೆಗಳು ಮತ್ತು ಪೂಜಾ ಕೈಂಕರ್ಯಗಳಿಂದ ಸಂಪನ್ನಗೊಂಡಿತು.

ವೀರಾಜಪೇಟೆ-ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಾಳುಗೋಡು ಗ್ರಾಮದ ಆದಿ ದೇವತೆಯಾದ ಶ್ರೀ ಅಗ್ನಿ ಚಾಮುಂಡಿ ದೇವಿಯ ವಾರ್ಷಿಕ ಮಹೋತ್ಸವ ಬಸುರಿ ಮಾಲ ತೆರೆಯೊಂದಿಗೆ ಜರುಗಿತು.

ಗಣಪತಿಹೊಮ, ತಕ್ಕರ ಮನೆಯಿಂದ ಭಂಡಾರ ತರುವದು ಕಲಶಪೂಜೆ ದೇವಿಗೆ ಮಹಾಪೂಜೆ ಶ್ರೀ ಚಾಮುಂಡಿ ದೇವಿ ದರ್ಶನ, ಕುಟ್ಟಿಚಾತ ಕಾಳ ಭೈರವ ಮತ್ತು ವಿವಿಧ ಕೋಲಗಳು ಜರುಗಿದವು. ಮೇಲೇರಿ ಚಾಮುಂಡಿ ತೆರೆ, ಪೂರ್ವಾಹ್ನ ಬಸುರಿ ತೆರೆ ಸುತ್ತಲ ಗ್ರಾಮವಲ್ಲದೆ ಸ್ಥಳೀಯ ಗ್ರಾಮಗಳಿಂದ ಅಧಿಕ ಸಂಖ್ಯೆಯ ಭಕ್ತರು ಆಗಮಿಸಿ, ಶ್ರೀ ದೇವಿಯ ದರ್ಶನ ಪಡೆದು ಪುನೀತರಾದರು. ಆಡಳಿತ ಮಂಡಳಿ ಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ಎರಡು ದಿನಗಳ ಕಾಲ ಅನ್ನಸಂತರ್ಪಣೆ ಏರ್ಪಡಿಸಿತ್ತು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕಬ್ಬಚ್ಚೀರ ಕಾವೇರಿಯಪ್ಪ, ಕಾರ್ಯದರ್ಶಿ ಬಿ.ಎಸ್. ರವೀಂದ್ರ ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.