ಗೋಣಿಕೊಪ್ಪಲು.ಮೇ.13: ಗೋಣಿಕೊಪ್ಪಲುವಿನ ಬೈಪಾಸ್ ರಸ್ತೆಯ ಅರುವತ್ತೊಕ್ಕಲು ಗದ್ದೆ ಮೈದಾನದಲ್ಲಿ ಚೆಲ್ಸಿ ಸ್ಪೋಟ್ರ್ಸ್ ಕ್ಲಬ್‍ನ ವತಿಯಿಂದ 7ನೇ ವರ್ಷದ ಹೊನಲು ಬೆಳಕಿನ ಪ್ರೀಮಿಯರ್ ಲೀಗ್ ಫುಟ್‍ಬಾಲ್ ಪಂದ್ಯಾಟಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಗೋಣಿಕೊಪ್ಪಲುವಿನ ಉತ್ಸಾಹಿ ಯುವಕರ ತಂಡ ಮುಂಜಾನೆ ಉಮಾಮಹೇಶ್ವರಿ ದೇವಸ್ಥಾನದ ಬಳಿ ಸಮಾಗಮಗೊಂಡು 12 ತಂಡಗಳ ಕ್ರೀಡಾಪಟುಗಳೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಸಾಗಿ ನಂತರ ಮೈದಾನಕ್ಕೆ ಆಗಮಿಸಿದರು.ಮೊದಲ ಬಾರಿಗೆ ನಗರದಲ್ಲಿ ಆಯೋಜನೆಗೊಂಡಿದ್ದ ಹೊನಲು ಬೆಳಕಿನ ಫ್ರೀಮಿಯರ್ ಫುಟ್‍ಬಾಲ್ ಪಂದ್ಯಾಟಕ್ಕೆ ದಾನಿಗಳು, ಸಮಾಜ ಸೇವಕರಾದ ಮೀನು ಉಂಬಯಿ ಟೇಪ್ ಕತ್ತರಿಸುವ ಮೂಲಕ ಮೈದಾನ ಪ್ರವೇಶಿಸಿದರು. ಐಪಿಎಲ್ ಮಾದರಿಯಲ್ಲಿ ನಡೆಯುವ ಪಂದ್ಯಾಟದಲ್ಲಿ 12 ತಂಡಗಳು ಪಾಲ್ಗೊಂಡಿದ್ದು ವಿವಿಧ ಭಾಗದಿಂದ ಅನುಭವಿ ಆಟಗಾರರು ಭಾಗವಹಿಸಿದ್ದರು.

ಚೆಲ್ಸಿ ಸ್ಪೋಟ್ರ್ಸ್‍ಕ್ಲಬ್, ಸೇರಿದಂತೆ ಹಿಂದೂಸ್ಥಾನ್, ಮಡ್ ಹಂಟರ್ಸ್,ಸೈಕ್ಲೋನ್ ಎಫ್‍ಸಿ,ರಾಮ ಫ್ರೆಂಡ್ಸ್, ಭಗತ್‍ಸಿಂಗ್, ಎಸ್.ಬಿ. ರಾಕರ್ಸ್, ಉಂಬಯಿ ಎಫ್‍ಸಿ,ಫ್ರೆಂಡ್ಸ್ ಎಫ್‍ಸಿ,ನೆಹರು ಎಫ್‍ಸಿ, ಟೀಮ್ 3 ಎಸ್‍ಕೆ ಅರುವತೋಕ್ಲು ಹಾಗೂ ಅನುಗ್ರಹ ಎಫ್‍ಸಿ ತಂಡಗಳು ಸೆಣಸಾಟ ನಡೆಸಿದವು.

ಮೊದಲ ಪಂದ್ಯವನ್ನುದಾನಿ ಗಳಾದ ಮೀನು ಉಂಬಯಿ ಉದ್ಘಾಟಿಸಿದರು.ಈ ಸಂದರ್ಭ ‘ಕೊಡಗುದ್ವನಿ’ಪತ್ರಿಕೆಯ ಸಂಪಾದಕ ಹೆಚ್.ಕೆ.ಜಗದೀಶ್,ಭಗತ್ ಸಿಂಗ್ ಯುವಕ ಸಂಘದಅಧ್ಯಕ್ಷರಾದ ಸಿಂಗಿ ಸತೀಶ್, ಉಪಸ್ಥಿತರಿದ್ದರು. ಚೆಲ್ಸಿ ಸ್ಪೋಟ್ರ್ಸ್‍ಕ್ಲಬ್‍ನ ಹರೀಶ್, ಷಂಶುದ್ಧೀನ್, ಸುಧೀಶ್, ಕೀರ್ತಿ, ಶರತ್, ಹಂಸ, ರಾಘು, ರಂಶಾದ್, ಅಚ್ಚು, ಸುಹೈಲ್, ಶಂಷೀರ್ ತೀರ್ಪುಗಾರರಾಗಿ ರಾಜರೈ ಹಾಗೂ ಶಶಿ ಭಾಗವಹಿಸಿದ್ದರು.