ಮಡಿಕೇರಿ, ಮೇ 13: ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ 427 ಸಂತ್ರಸ್ತರ ಪೈಕಿ ಅವರ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಇಚ್ಚಿಸಿದ 54 ಫಲಾನುಭವಿಗಳಿಗೆ ಅವರ ಕೋರಿಕೆಯಂತೆ ಅವರ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಗ್ರಾಮಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ಮತ್ತು ತಹಶೀಲ್ದಾರರ ವರದಿಯಂತೆ ವಾಸಕ್ಕೆ ಯೋಗ್ಯವಾದ ಹಾಗೂ ಸುರಕ್ಷಿತವಾಗಿರುವ ನಿವೇಶನಗಳನ್ನು ಹೊಂದಿರುವ ಸಂತ್ರಸ್ತರಿಗೆ ಮುಂಗಡ, ಅಡಿಪಾಯ, ಲಿಂಟಲ್ ಮತ್ತು ಛಾವಣಿ ನಾಲ್ಕು ಹಂತಗಳಲ್ಲಿ ಮನೆ ನಿರ್ಮಿಸಲು ಅನುದಾನ ನೀಡಲಾಗುತ್ತಿದ್ದು, ಈ ಬಾಬ್ತು ಮೊದಲನೇ ಹಂತದಲ್ಲಿ ಮುಂಗಡ ಹಣವಾಗಿ ತಲಾ ರೂ. 2 ಲಕ್ಷಗಳನ್ನು 54 ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಹೆಚ್ಚಿನ ವಿವರಗಳಿಗೆ ಕೊಡಗು ಜಿಲ್ಲಾ ವೆಬ್‍ಸೈಟ್ hಣಣಠಿs//ಞoಜಚಿgu.ಟಿiಛಿ.iಟಿನ್ನು ಪರಿಶೀಲಿಸಬಹುದಾಗಿ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.