ಕುಶಾಲನಗರ, ಮೇ 13: ಕುಶಾಲನಗರ ಪಟ್ಟಣದ ಸಮರ್ಪಕ ವಾಹನಗಳ ಸಂಚಾರ ವ್ಯವಸ್ಥೆಗೆ ಪರಿಣಾಮಕಾರಿ ಯೋಜನೆ ರೂಪಿಸಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ.ಸುಮನ್ ಹೇಳಿದರು.

ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ ಕೊಡುಗೆಯಾಗಿ ನೀಡಿರುವ ಟ್ರಾಫಿಕ್ ಬೂತ್‍ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ, ಸುವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಸಂಘಸಂಸ್ಥೆಗಳು ಕೂಡ ಇಲಾಖೆಯೊಂದಿಗೆ ಕೈಜೋಡಿಸಿದಲ್ಲಿ ಹಲವು ಸುಧಾರಣೆಗಳನ್ನು ಕಾಣಲು ಸಾಧ್ಯ ಎಂದರು. ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಕರೆ ನೀಡಿದರು.

ಈ ಸಂದರ್ಭ ರೋಟರಿ ಅಧ್ಯಕ್ಷ ಜೇಕಬ್, ಡಿವೈಎಸ್ಪಿ ದಿನಕರ ಶೆಟ್ಟಿ, ವೃತ್ತ ನಿರೀಕ್ಷಕ ಬಿ.ಎಸ್.ದಿನೇಶ್ ಕುಮಾರ್, ರೋಟರಿ ಸಂಸ್ಥೆ ಪ್ರಮುಖರಾದ ಮಹೇಶ್ ನಾಲ್ವಡೆ, ಪ್ರೇಮ್‍ಚಂದ್ರನ್, ಎಸ್.ಕೆ.ಸತೀಶ್, ಡಾ.ಹರಿಶೆಟ್ಟಿ, ಕ್ರಿಜ್ವಲ್ ಕೋಟ್ಸ್, ಜಾನ್ ಪುಲಿಕಲ್, ನವೀನ್, ಸುನಿತಾ ಮಹೇಶ್, ಆರತಿ ಹರಿಶೆಟ್ಟಿ, ಗಂಗಾಧರ್, ರಾಜಶೇಖರ್ ಮತ್ತಿತರರು ಇದ್ದರು.