ಮಡಿಕೇರಿ, ಮೇ 13: ಮಡಿಕೇರಿಯ ಪ್ರವಾಸಿ ತಾಣ ರಾಜಾಸೀಟ್ ಉದ್ಯಾನವನದೊಳಗೆ ಸೂಕ್ತ ನಿಯಂತ್ರಣವಿಲ್ಲದೆ ಪ್ರವಾಸಿಗರು ತಮಗಿಷ್ಟಬಂದಂತೆ ವರ್ತಿಸುತ್ತಿದ್ದಾರೆ. ಇಲ್ಲಿನ ಹುಲ್ಲುಹಾಸು, ಗಿಡಗಳನ್ನು ರಕ್ಷಿಸಲು ಕೆಲವು ಜಾಗಗಳಿಗೆ ಹಗ್ಗದ ಬೇಲಿಯೊಂದಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅದೂ ಪ್ರಸ್ತುತ ಬಿಸಿಲಿನ ಧಗೆಯಿಂದ ಹುಲ್ಲು - ಹೂ ಗಿಡಗಳು ಹಾನಿಗೀಡಾಗುವದು ಸಹಜ. ಆದರೆ ಕೆಲವು ಪ್ರವಾಸಿಗರು ಇದಕ್ಕೆ ‘ಕ್ಯಾರೇ’ ಅನ್ನದೆ ಇಂತಹ ಜಾಗಕ್ಕೇ ತೆರಳಿ ಮಕ್ಕಳ ಸಹಿತವಾಗಿ ಆಡುವದು, ಫೋಟೋ ಕ್ಲಿಕ್ಕಿಸುವದು ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಉದ್ಯಾನವನಕ್ಕೆ ತೊಂದರೆಯಾಗುತ್ತಿದೆ. ಈ ವರ್ತನೆಯನ್ನು ಇಲ್ಲಿ ಸೂಕ್ತವಾಗಿ ನಿಯಂತ್ರಿಸಿ ಉದ್ಯಾನವನದ ಕಳೆ ಹೆಚ್ಚಿಸಲು ಸಂಬಂಧಿಸಿದವರು ಗಮನ ಹರಿಸಬೇಕಿದೆ. - ಪ್ರಮೀಳಾ, ಮಡಿಕೇರಿ.