ಮಡಿಕೇರಿ, ಮೇ 13: ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಯಿಕೇರಿಯಲ್ಲಿ ಕುಡಿಯುವ ನೀರಿನ ಬವಣೆ ಎದುರಾಗಿದ್ದು, ಗ್ರಾ.ಪಂ. ಹಾಗೂ ಸಂಬಂಧಿಸಿದ ಅಧಿಕಾರಿಗಳು ತುರ್ತು ಗಮನ ಹರಿಸಬೇಕೆಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ನೀಡಿರುವ ಹೇಳಿಕೆಯಲ್ಲಿ ಗ್ರಾಮಸ್ಥರು, ಕುಡಿಯುವ ನೀರಿಗಾಗಿ ಸಾಲು ಗಟ್ಟಲೆ ಕಾದುನಿಂತರೂ ಸಮರ್ಪಕವಾಗಿ ನೀರು ಸಿಗದೆ, ಬೊಯಿಕೇರಿ ನಿವಾಸಿಗಳು ನಿತ್ಯ ಪರದಾಡುವಂತಾಗಿದೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.