ಮಡಿಕೇರಿ, ಮೇ 13: ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ನಾಲ್ಕನೇ ವರ್ಷದ ಗೌಡ ಫುಟ್ಬಾಲ್ ಪಂದ್ಯಾಟದಲ್ಲಿ ಇಂದು ನಡೆದ ಪಂದ್ಯಾಟದಲ್ಲಿ ಕಾಂಗೀರ, ಜೈನೀರ, ಮಂಞಂಡ್ರ, ಕಾನಡ್ಕ ,ಕೊಂಪುಳೀರ , ಬೊಳ್ಳುರು ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ. ತಾ. 14 ರಂದು (ಇಂದು) ಉಳುವಾರನ , ಕಲ್ಲುಮುಟ್ಲು , ಪಾಣತ್ತಲೆ (ಎ) , ಎಡಿಕೇರಿ, ಪರ್ಲಕೋಟಿ, ಮರದಾಳು, ಪಟ್ಟೆಮನೆ , ಹಾಗೂ ಪಾಣತ್ತಲೆ (ಬಿ) ಹಾಗೂ ಕೊಂಪುಳಿ, ಚೋಂಡಿರ ತಂಡಗಳ ನಡುವೆ ಪಂದ್ಯಾಟ ನಡೆಯಲಿದೆ.