ಕುಶಾಲನಗರ, ಮೇ 13: ಕುಶಾಲನಗರ ಮಾರುಕಟ್ಟೆ ಬಳಿ ಕಾವೇರಿ ನದಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಮೃತದೇಹ ಕಂಡುಬಂದಿದೆ. ಅಂದಾಜು 45 ವರ್ಷ ಪ್ರಾಯದ ವ್ಯಕ್ತಿ ಕೇಸರಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಚಡ್ಡಿ ಧರಿಸಿದ್ದು ಈತನ ಚಹರೆ ಪತ್ತೆಯಾದಲ್ಲಿ ಕುಶಾಲನಗರ ಪೊಲೀಸ್ ಠಾಣೆ ಸಂಖ್ಯೆ 08276-274333 ಗೆ ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ಕೋರಿದೆ.