ಮಡಿಕೇರಿ, ಮೇ 11 : ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿ ಬಿಡುಗಡೆ ಮಾಡಿರುವ 15 ಕೊಟಿ ರೂ. ಅನುದಾನದ ನೆರವಿನಿಂದ ಬಾಳುಗೋಡುವಿನಲ್ಲಿ ವ್ಯವಸ್ಥಿತವಾದ ಹಾಕಿ ಸ್ಟೇಡಿಯಂ ನಿರ್ಮಾಣ ಮಾಡುವ ಮೂಲಕ, ಮುಂಬರುವ ವರ್ಷಗಳಲ್ಲಿ ಕೊಡವ ಕುಟುಂಬಗಳ ಹಾಕಿ ಉತ್ಸವವನ್ನು ಅಲ್ಲೇ ನಡೆಸುವ ಕುರಿತಾಗಿ ಕೊಡವ ಸಮಾಜಗಳ ಮಡಿಕೇರಿ, ಮೇ 11 : ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿ ಬಿಡುಗಡೆ ಮಾಡಿರುವ 15 ಕೊಟಿ ರೂ. ಅನುದಾನದ ನೆರವಿನಿಂದ ಬಾಳುಗೋಡುವಿನಲ್ಲಿ ವ್ಯವಸ್ಥಿತವಾದ ಹಾಕಿ ಸ್ಟೇಡಿಯಂ ನಿರ್ಮಾಣ ಮಾಡುವ ಮೂಲಕ, ಮುಂಬರುವ ವರ್ಷಗಳಲ್ಲಿ ಕೊಡವ ಕುಟುಂಬಗಳ ಹಾಕಿ ಉತ್ಸವವನ್ನು ಅಲ್ಲೇ ನಡೆಸುವ ಕುರಿತಾಗಿ ಕೊಡವ ಸಮಾಜಗಳ ಹೊರಬಂದ ಸಲಹೆ ಸೂಚನೆಗಳನ್ನು ಕ್ರೋಢೀಕರಿಸಿ, ಕೊಡವ ಹಾಕಿ ಅಕಾಡೆಮಿಯ ಮುಂದಿನ ಜುಲೈ ತಿಂಗಳಿನ ವಿಶೇಷ ಮಹಾ ಸಭೆಯಲ್ಲಿ ಎಲ್ಲಾ ಕೊಡವ ಕುಟುಂಬಗಳ ಪ್ರತಿನಿಧಿಗಳನ್ನು, ತೀರ್ಪುಗಾರರ ಸಂಘದ ಪ್ರತಿನಿಧಿಗಳನ್ನು ಸೇರಿಸಿ ಚರ್ಚಿಸಿ ನಿರ್ಣಯವನ್ನು ಕೈಗೊಳ್ಳಲು ನಿರ್ಧರಿಸಲಾಯಿತು.ವಿಷ್ಣು ಕಾರ್ಯಪ್ಪ ಮಾತನಾಡಿ, ಸರ್ಕಾರದಿಂದ ಲಭ್ಯ 15 ಕೋಟಿ ಅನುದಾನಕ್ಕೆ ಅನುಗುಣವಾಗಿ ಕ್ರಿಯಾಯೋಜನೆ ರೂಪಿಸಿ, ಬಾಳುಗೋಡುವಿನಲ್ಲಿ ಹಾಕಿ ಸ್ಟೇಡಿಯಂ ಮತ್ತು ಫೆವಿಲಿಯನ್ ಪೂರ್ಣಗೊಳಿಸಿ, 2020ರಲ್ಲಿ ಹಾಕಿ ಉತ್ಸವದ ಆತಿಥ್ಯ ವಹಿಸಿರುವ ಹರಿಹರ ಮುಕ್ಕಾಟಿರ ಕುಟುಂಬಸ್ಥರಿಗೆ ಕೌಟುಂಬಿಕ ಹಾಕಿ ಉತ್ಸವ ನಡೆಸಲು ಅನುವು ಮಾಡಿಕೊಡಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದರು.

(ಮೊದಲ ಪುಟದಿಂದ) ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕಲಿಯಂಡ ನಾಣಯ್ಯ ಮಾತನಾಡಿ, ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಬಾಳುಗೋಡುವಿನಲ್ಲಿ ನಡೆಸಲು ಅಕಾಡೆಮಿ ಇಚ್ಛಿಸುತ್ತದೆ. ಆದರೆ, ಈ ವಿಚಾರವನ್ನು ಮುಂದಿನ ವರ್ಷಗಳಲ್ಲಿ ಉತ್ಸವವನ್ನು ನಡೆಸುವ ಕುಟುಂಬಗಳ ಜೊತೆ ಚರ್ಚಿಸಿ ಹಾಗೂ ಅಕಾಡೆಮಿಯ ವಿಶೇಷ ಮಹಾಸಭೆಯನ್ನು ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡವ ಸಮಾಜಗಳ ಒಕ್ಕೂಟದ ಸ್ಥಾಪಕರು, ಮಾಜಿ ಮಂತ್ರಿ ಮೇರಿಯಂಡ ಸಿ. ನಾಣಯ್ಯ ಮಾತನಾಡಿ, ಕೊಡವ ಯುವ ಸಮೂಹದಲ್ಲಿನ ಕ್ರೀಡೆ, ಕಲೆ, ಸಾಂಸ್ಕøತಿಕ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಮತ್ತು ಅವರ ಸರ್ವಾಂಗೀಣ ಏಳಿಗೆಗೆ ಶ್ರಮಿಸುವ ಕೇಂದ್ರವಾಗಿ ಒಕ್ಕೂಟವನ್ನು ಸ್ಥಾಪನೆ ಮಾಡಲಾಗಿದೆ ಎಂದರು.

ಒಕ್ಕೂಟದ ಪದಾಧಿಕಾರಿಗಳು ಕಳೆದ ಸಾಲಿನಲ್ಲಿ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡರನ್ನು ಭೇಟಿಯಾಗಿ, ಹಣಕಾಸಿನ ಕೊರತೆಯಿಂದಾಗಿ ಬಾಳುಗೋಡಿನ ಒಕ್ಕೂಟದ ಆವರಣದಲ್ಲಿ ಕ್ರೀಡೆ ಮತ್ತು ಕಲಾ ಚಟುವಟಿಕೆಗಳ ಆಯೋಜನೆಗೆ ಸುಸಜ್ಜಿತವಾದ ಕ್ರೀಡಾಂಗಣ ಇಲ್ಲದಿರುವುದರಿಂದ ವರ್ಷಂಪ್ರತಿ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ವಿವಿಧೆಡೆಗಳಲ್ಲಿ ನಡೆಸಬೇಕಾದ ಅನಿವಾರ್ಯತೆ ಮತ್ತು ಸಂಕಷ್ಟಗಳನ್ನು ಮನವರಿಕೆ ಮಾಡಿಕೊಟ್ಟು, ಸೂಕ್ತ ಅನುದಾನಕ್ಕೆ ಕೋರಿಕೆಯನ್ನು ಸಲ್ಲಿಸಿದ್ದರು. ಇದರ ಫಲವಾಗಿ ಬಿಡುಗಡೆಯಾಗಿರುವ ಸರ್ಕಾರದ 15 ಕೊಟಿ ಅನುದಾನವನ್ನು ಬಳಸಿಕೊಂಡು ಬಾಳುಗೋಡಿನಲ್ಲಿ ಸ್ಟೇಡಿಯಂ ಮತ್ತು ಫೆವಿಲಿಯನ್‍ನ್ನು ಮುಂದಿನ ಮಾರ್ಚ್ ಒಳಗೆ ನಿರ್ಮಿಸುವಂತಾಗಬೇಕು. ಆ ಮೂಲಕ ಮುಂಬರುವ ಎಲ್ಲಾ ಕೌಟುಂಬಿಕ ಹಾಗೂ ಒಕ್ಕೂಟದ ಉತ್ಸವವನ್ನು ಇಲ್ಲೆ ವ್ಯವಸ್ಥಿತವಾಗಿ ನಡೆಸುವಂತಾಗಬೇಕೆಂದರು.

ಸಭೆಯಲ್ಲಿ ಒಕ್ಕೂಟದ ಕಾರ್ಯಕಾರಿ ಮಂಡಳಿಯವರು, ಕೊಡವ ಸಮಾಜದ ಎಲ್ಲಾ ಅಧ್ಯಕ್ಷರುಗಳು, ಕೊಡವ ಹಾಕಿ ಅಕಾಡೆಮಿಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.