ಮಡಿಕೇರಿ, ಮೇ 12: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ 4ನೇ ವರ್ಷದ ಗೌಡ ಫುಟ್ಬಾಲ್ ಪಂದ್ಯಾಟದಲ್ಲಿ ಪೊನ್ನಚ್ಚನ, ಬೊಳ್ಳೂರು, ಕೈಕೇರಿ, ಮುಕ್ಕಾಟಿ ಹಾಗೂ ಪೂಳಕಂಡ್ರ ತಂಡಗಳು ಮುನ್ನಡೆ ಸಾಧಿಸಿವೆ.