*ಸಿದ್ದಾಪುರ, ಮೇ 11: ಸಲಗವೊಂದು ಶನಿವಾರ ಮುಂಜಾನೆ ಬೆಳೆಗಾರ ರೋರ್ವರ ಮನೆಯ ಆವರಣಕ್ಕೆ ನುಗ್ಗಿ ಅಟ್ಟಹಾಸ ಮೆರೆದ ಕಳವಳಕಾರಿ ಘಟನೆ ನಡೆದಿದೆ.

ವಾಲ್ನೂರು- ತ್ಯಾಗತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮ್ಮಂಗಾಲ ಗ್ರಾಮದ ಬೆಳೆಗಾರÀ ಚೇಂದಂಡ ಜತ್ತ ವಿಜಯ ಎಂಬವರ ಕಾಫಿ ತೋಟದ ಸನಿಹ ಇರುವ ಮನೆಯ ಆವರಣಕ್ಕೆ ಪ್ರವೇಶಿಸಿದ ಒಂಟಿ ಸಲಗ ನೂತನ ಮಾರುತಿ ಇಗ್ನೀಸ್ ಕಾರಿಗೆ ದಂತದಿಂದ ತಿವಿದು ಹಾನಿಗೊಳಿಸಿದೆ.