ಮಡಿಕೇರಿ, ಮೇ 10: ಹರಿದ ಚೀಲಗಳಿಂದ ಹೊರಹೊಮ್ಮುತ್ತಿರುವ ಮರಳು ಹಾಗೂ ಸೀಮೆಂಟ್, ಇವೆಲ್ಲದರ ಮೇಲೆ ಹೊದಿಸಿರುವ ಜಿಯೋ-ಟೆಕ್ಸ್‍ಟೈಲ್‍ನ ಹೊದಿಕೆ, ಹೊಸದಾಗಿ ಡಾಂಬರು ಹಾಕಿರುವ ರಸ್ತೆಯ ಮೇಲೆ ನೆಗೆಯಲು ಕಾಯುತ್ತಿರುವ ಸಡಿಲವಾದ ಮಣ್ಣಿನ ಬೆಟ್ಟಗಳು - ಇದು ಮಡಿಕೇರಿ-ಮಂಗಳೂರು, ರಾಷ್ಟ್ರೀಯ ಹೆದ್ದಾರಿ 275ರ ಇಂದಿನ ಸ್ಥಿತಿ. ಈ ಹೆದ್ದಾರಿಯಲ್ಲಿ ತಾತ್ಕಾಲಿಕ ಪರಿಹಾರ ಕಾರ್ಯ ನಡೆದಿದೆ ಯಾದರೂ ಬರುವ ಮಳೆಗಾಲದಲ್ಲಿ ಕೊಡಗು ಹೆಚ್ಚು ಮಳೆ ಅನುಭವಿಸಿದರೆ ಈ ಕಾಂiÀರ್iವೆಲ್ಲವೂ ನೀರಿಗೆ ಹೋಮಮಾಡಿದಂತಾಗುತ್ತದೆ ಯಲ್ಲದೆ, ಮಡಿಕೇರಿಯಿಂದ ಜೋಡುಪಾಲ ದವರೆಗೆ ಹ¯ವಷ್ಟು ಕಡೆ ಬರೆಕುಸಿತ ವಾಗುವದು ಖಂಡಿತಾ ಎಂಬಂತೆ ಗೋಚರಿಸುತ್ತದೆ. ಇನ್ನು, ಈ ಹೆದ್ದಾರಿಯ ಅನೇಕ ದುರ್ಬಲ ಪ್ರದೇಶಗಳಲ್ಲಿ ಹೊಸದಾಗಿ ಲೈಟ್

(ಮೊದಲ ಪುಟದಿಂದ) ಕಂಬಗಳನ್ನು ಅಳವಡಿಸಿದ್ದು, ಇವೆಲ್ಲವು ಬರೆ ಕುಸಿತವಾದಲ್ಲಿ ಕೊಚ್ಚಿಹೋಗುವ ಸಾಧ್ಯತೆ ಇದೆ. ಕೊಡಗು ಜಿಲ್ಲಾಡಳಿತ ಅನೇಕ ಬಾರಿ ಈ ಹೆದ್ದಾರಿಯ ಶಾಶ್ವತಕಾರ್ಯದೆಡೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನ ಸೆಳೆದಿದ್ದರೂ, ಯಾವದೂ ಫಲಕಾರಿಯಾಗದಿರುವದು ವಿಪರ್ಯಾಸವೇ ಸರಿ. ‘ರಾಷ್ಟ್ರೀಯ ಹೆದ್ದಾರಿಯ ಕೆಲಸ ಜಿಲ್ಲಾಡಳಿತದಡಿಗೆ ಬರುವದಿಲ್ಲ. ಆದರೂ ಈ ವಿಷಯದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಇನ್ನು ತಾಳತ್‍ಮನೆ ಹತ್ತಿರದ ರಸ್ತೆ ಕುಸಿತದ ಜಾಗದಲ್ಲಿ ಗುತ್ತಿಗೆದಾರ ಸುಭಾಷ್‍ರವರು ತಾತ್ಕಾಲಿಕ ಪರಿಹಾರ ಕಾರ್ಯ ನಿರ್ವಹಿಸುತ್ತಿದ್ದು, ಶಾಶ್ವತ ಪರಿಹಾರ ಕಾರ್ಯ ಮೇ 23ರ ನಂತರ ನಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ. ‘ಹೆದ್ದಾರಿಯ ತಾತ್ಕಾಲಿಕ ಕಾರ್ಯವನ್ನು ಬೇರೆ ಬೇರೆ ಗುತ್ತಿಗೆದಾರರಿಗೆ ನೀಡಲಾಗಿದೆ. ನಾವು ಈಗಷ್ಟೇ ತಡೆಗೋಡೆ ನಿರ್ಮಿಸುತ್ತಿದ್ದೇವೆ. ಶಾಶ್ವತ ಪರಿಹಾರ ಕಾರ್ಯ ಇನ್ನೂ ಅನುಮೋದಿಸಿಲ್ಲ’ ಎಂದು ಸುಭಾಷ್ ಹೇಳುತ್ತಾರೆ.ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ವಿವರಣೆ ನೀಡಿದರು. ‘ಈ ರೀತಿಯ ರಸ್ತೆ ದುರಸ್ತಿ ಕೆಲಸಕ್ಕೆ ವಿಶೇಷ ತಜ್ಞರ ಅವಶ್ಯಕತೆ ಇದೆ’ ಎಂದು ಅಭಿಪ್ರಾಯಪಟ್ಟರು.ಆದರೆ, ಯಾವ ರೀತಿಯ ಕೆಲಸ ಹೆದ್ದಾರಿಗೆ ಅನುಮೋದಿಸಲಾಗಿದೆ ಹಾಗೂ ಎಷ್ಟು ಹಣ ಈ ನಿಟ್ಟಿನಲ್ಲಿ ಬಿಡುಗಡೆಯಾಗಿದೆ ಎಂಬ ಪ್ರಶ್ನೆಗಳಿಗೆ ಯಾವದೇ ಸೂಕ್ತ ಮಾಹಿತಿ ನೀಡಲಿಲ್ಲ ಈ ಅಧಿಕಾರಿ.

-ಪ್ರಜ್ಞಾ ಜಿ.ಆರ್.