ವೀರಾಜಪೇಟೆ, ಮೇ 10: ಕಾಕೋಟುಪರಂಬು ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ವತಿಯಿಂದ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವೆ ಚಾಂಪಿಂiÀiನ್ಸ್ ಟ್ರೋಫಿ ಹಾಕಿ ಫೈನಲ್ಸ್ ಪಂದ್ಯದಲ್ಲಿ ಪುದಿಯೊಕ್ಕಡ ಹಾಗೂ ಪರದಂಡ ತಂಡಗಳು ಚೊಚ್ಚಲ ಚಾಂಪಿಯನ್ಸ್ ಪಟ್ಟ ಪಡೆದುಕೊಂಡಿವೆ.

ಪುದಿಯೊಕ್ಕಡ ತಂಡ ಟ್ರೋಫಿ ಹಾಗೂ 50 ಸಾವಿರ ನಗದು ಬಹುಮಾನ, ಪರದಂಡ ತಂಡ ಆಕರ್ಷಕ ಟ್ರೋಫಿ ಹಾಗೂ 60 ಸಾವಿರ ನಗದು ಬಹುಮಾನ ಪಡೆದುಕೊಂಡವು ಚಾಂಪಿಂiÀiನ್ಸ್ ಟ್ರೋಫಿ ಪೈನಲ್ಸ್‍ನಲ್ಲಿ ಪುದಿಯೊಕ್ಕಡ ತಂಡ ಕಾಳೇಂಗಡ ತಂಡವನ್ನು 5-1 ಗೋಲುಗಳಿಂದ ನಿರಾಯಾಸವಾಗಿ ಮಣಿಸಿತು. ಆರಂಭದಿಂದಲೇ ಸಂಘಟಿತ ಹೋರಾಟಕ್ಕೆ ಒತ್ತು ನೀಡಿದ ಪುದಿಯೊಕ್ಕಡ ತಂಡ ಪ್ರಥಮಾರ್ಧದ 10 ಹಾಗೂ 23 ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರನ್ನು ಅಂತರಾಷ್ಟ್ರೀಯ ಆಟಗಾರ ಪ್ರಧಾನ್ ಸೋಮಣ್ಣ ಸದುಪಯೋಗಪಡಿಸಿಕೊಂಡು ಗೋಲಾಗಿ ಪರಿವರ್ತಿಸಿದರು. 28 ನಿಮಿಷದಲ್ಲಿ ಎಂ.ಇ.ಜಿ. ತಂಡದ ಕೋಚ್ ಪೊನ್ನಣ್ಣ ಮತ್ತೊಂದು ಗೋಲು ಬಾರಿಸಿದರು. ದ್ವಿತೀಯಾರ್ಧದ 38 ನಿಮಿಷದದಲ್ಲಿ ಪ್ರಧಾನ್ ಸೋಮಣ್ಣ ಮತ್ತೊಂದು ಗೋಲು ಬಾರಿಸಿ ತಂಡಕ್ಕೆ ಸಂಪೂರ್ಣ ಮುನ್ನಡೆ ತಂದು ಕೊಟ್ಟರು. 50 ನೇ ನಿಮಿಷದಲ್ಲಿ ಬೋಪಣ್ಣ ಮತ್ತೊಂದು ಗೋಲು ಬಾರಿಸಿದರು. ಪುದಿಯೊಕ್ಕಡ ತಂಡಕ್ಕೆ 7 ಪೆನಾಲ್ಟಿ ಕಾರ್ನರ್ ಲಭಿಸಿತು. 2 ಗೋಲಾಗಿ ಪರಿವರ್ತನೆ ಗೊಂಡಿತು.ಕಾಳೇಂಗಡ ತಂಡವು ಆರಂಭದಿಂದಲೇ ಮಂದಗತಿಯ ಆಟಕ್ಕೆ ಶರಣಾಯಿತು. ಎದುರಾಳಿ ತಂಡದ ಸಂಘಟಿತ ಮತ್ತು ಬಿರುಸಿನ ಹೊಡೆತಗಳನ್ನು ತಡೆದುಕೊಳ್ಳಲು ಸಾಧ್ಯವಾಗದೆ ಸೋಲಿಗೆ ಶರಣಾಯಿತು. (ಮೊದಲ ಪುಟದಿಂದ) 56ನೇ ನಿಮಿಷದಲ್ಲಿ ಸೌತ್ ಸೆಂಟರ್ ರೈಲ್ವೆ ಆಟಗಾರ ಚಂಗಪ್ಪÀ ಲಭಿಸಿದ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿ ಏಕೈಕ ಗೋಲಿನಿಂದ ಹೊರ ನಡೆಯಬೇಕಾಯಿತು. ಕಾಳೇಂಗಡ ತಂಡಕ್ಕೆ 3 ಪೆನಾಲ್ಟಿ ಕಾರ್ನರ್ ಲಭಿಸಿದರೂ ಯಾವದೇ ಗೋಲಾಗಲಿಲ್ಲ.

ಕೊಡವ ಚಾಂಪಿಯನ್ಸ್ ಲೀಗ್ ಫೈನಲ್ಸ್‍ನಲ್ಲಿ ಪರದಂಡ ತಂಡ 5-2 ಗೋಲುಗಳಿಂದ ಹಿಂದಿನ ಚಾಂಪಿ ಯನ್ಸ್ ಮಂಡೆಪಂಡ ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ ಪರಾಭವ ಗೊಳಿಸಿತು. ನಿಗದಿತ ಅವದಿಯಲ್ಲಿ ಎರಡು ತಂಡಗಳು 2-2 ಗೋಲುಗಳ ಸಮಬಲ ಸಾಧಿಸಿದವು. ಎರಡೂ ತಂಡಗಳಲ್ಲಿ ಉತ್ತಮ ಆಟಗಾರರನ್ನು ಹೊಂದಿದ್ದು, ಕೊನೆ ಘಳಿಗೆಯವರೆಗೂ ಯಾರು ಗೆಲ್ಲುತ್ತಾರೆ ಎಂಬ ಕೂತುಹಲ ಮೂಡಿಸಿತ್ತು. ಪರದಂಡ ಪರ ಪ್ರಥಮಾರ್ಧದ 24ನೇ ನಿಮಿಷದಲ್ಲಿ ಕೀರ್ತನ್ ಮೊಣ್ಣಪ್ಪ ಗೋಲು ಬಾರಿಸಿದರು. ದ್ವಿತಿಯಾರ್ಧದ 40ನೇ ನಿಮಿಷದಲ್ಲಿ ಮಂಡೆಪಂಡ ದಿಲನ್ ದೇವಯ್ಯ ಗೋಲು ಬಾರಿಸಿ ಸಮನಾಗಿಸಿದರು. ಮಂಡೇಪಂಡ ತಂಡಕ್ಕೆ 54ನೆ ನಿಮಿಷÀದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರನ್ನು ಬೋಪಣ್ಣ ಗೋಲಾಗಿಸಿದರು. ಇದರ ಬೆನ್ನತ್ತಿದ ಪರದಂಡ ತಂಡ 58ನೇ ನಿಮಿಷದಲ್ಲಿ ಕಿರ್ತನ್ ಮೊಣ್ಣಪ್ಪ ಮತ್ತೊಂದು ಗೋಲು ಬಾರಿಸಿ ಸಮನಾಗಿಸಿದರು.

ಪೆನಾಲ್ಟಿ ಶೂಟೌಟ್‍ನಲ್ಲಿ ಪರದಂಡ ಪರ ಕೀರ್ತಿ ಮೊಣ್ಣಪ್ಪ, ಚಶ್ವಿನ್, ಪ್ರಜ್ವಲ್ ಗೋಲು ದಾಖಲಿಸಿ ದರು. ಮಂಡೆಪಂಡ ಪರ ದಿಲನ್, ಅಚ್ಚಯ್ಯ ಚೆಂಡನ್ನು ಹೊರತಳ್ಳಿದರು.

ತೀರ್ಪುಗಾರರಾಗಿ ಚೋಯ ಮಾಡಂಡ ಚಂಗಪ್ಪ, ಕುಪ್ಪಂಡ ದಿಲನ್, ಚಂದಪಂಡ ಆಕಾಶ್, ನೆಲ್ಲಮಕ್ಕಡ ಪವನ್, ತಾಂತ್ರಿಕ ಸಮಿತಿಯಲ್ಲಿ ಮಲ್ಲಮಾಡ ಸಂತೋಷ್, ಕರವಂಡ ಅಪ್ಪಣ್ಣ, ಚ್ಯೆಯ್ಯಂಡ ಅಪ್ಪಚ್ಚು, ಮೇಕತಂಡ ಟೀಸಾ ಬೋಪಯ್ಯ ಕಾರ್ಯ ನಿರ್ವಹಿಸಿದರು. ಚೆಪ್ಪುಡಿರ ಕಾರ್ಯಪ್ಪ ಪಂದ್ಯಾಟದ ವೀಕ್ಷಕ ವಿವರಣೆ ನೀಡಿದರು.