ವೀರಾಜಪೇಟೆ, ಮೇ 10: ಹಾಕಿಗೆ ಕೊಡಗು ಜಿಲ್ಲೆ ನಿರಂತರವಾಗಿ ಪ್ರೋತ್ಸಾಹ ಹಾಗೂ ಉತ್ತೇಜನ ನೀಡುತ್ತಿದ್ದು ಹಲವಾರು ಪ್ರತಿಭೆಗಳನ್ನು ರಾಷ್ಟ್ರ ಅಂತರಾಷ್ಟ್ರ ಮಟ್ಟಕ್ಕೆ ನೀಡಿದೆ ಎಂದು ಒಲಂಪಿಯನ್ ಮನಿಯಪಂಡ ಸೋಮಯ್ಯ ಹೇಳಿದರು.

ಕಾಕೋಟುಪರಂಬು ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ವತಿಯಿಂದ ನಡೆಯು ತ್ತಿರುವ ಕೊಡವ ಕುಟುಂಬಗಳ ನಡುವಿನ ಚಾಂಪಿಂiÀiನ್ಸ್ ಟ್ರೋಫಿ ಅಂತಿಮ ಪಂದ್ಯಾಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ; ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿ ಮುಂದಿದೆ. ನಮ್ಮಲ್ಲಿ ಎಲ್ಲಾ ತರದ ಕ್ರೀಡಾಪಟುಗಳಿದ್ದಾರೆ. ಹಾಕಿಯಲ್ಲಿ ಮಾಡಿರುವ ಸಾಧನೆಗಳು ಶ್ಲಾಘನೀಯ ಎಂದು ಹೇಳಿ ಹಾಕಿ ಕೊಡಗು ಸಂಸ್ಥೆ ಇನ್ನಷ್ಟು ಕ್ರೀಡಾಪಟುಗಳನ್ನು ರಾಷ್ಟ್ರ ಹಾಗೂ ಅಂತರ್ರಾಷ್ಟ್ರಕ್ಕೆ ನೀಡುವಂತಾಗಲಿ ಎಂದು ಆಗ್ರಹಿಸಿದರು.

ಮತ್ತೋರ್ವ ಅತಿಥಿ ರಾಷ್ಟ್ರೀಯ ಹಾಕಿ ಆಟಗಾರ ಕೋದಂಡ ಅಪ್ಪಣ್ಣ ಮಾತನಾಡಿ ಜಿಲ್ಲೆಯ ಪ್ರತಿಯೊಬ್ಬ ಹಾಕಿಪಟು ರಾಷ್ಟ್ರವನ್ನು ಪ್ರತಿನಿಧಿಸು ವಂತಾಗಬೇಕು. ಹಾಕಿ ಕೂರ್ಗ್ ಸಂಸ್ಥೆ ರಾಷ್ಟ್ರ ಮಟ್ಟದಲ್ಲಿ ತಮ್ಮ ತಂಡವನ್ನು ಕಳುಹಿಸುತ್ತಿದ್ದು ಇನ್ನಷ್ಟು ಪ್ರತಿಭೆಗಳು ಹೊರಹೊಮ್ಮಬೇಕು. ಪೋಷಕರು ತಮ್ಮ ಮಕ್ಕಳಿಗೆ ಹಾಕಿಸ್ಟೀಕ್ ಹಿಡಿಯುವಂತೆ ಮಾಡಿದರೆ ಹಾಕಿ ಇನ್ನಷ್ಟು ಪ್ರಗತಿ ಕಾಣಲು ಸಾಧ್ಯವಾಗುತ್ತದೆ. ಜಿಲ್ಲೆಯ ಹಾಕಿಗೆ ಕೋಚ್ ದಿವಂಗತÀ ಸಿ.ವಿ ಶಂಕರ್‍ಸ್ವಾಮಿ ಅವರ ಕೊಡುಗೆ ಅಪಾರ. ಅವರ ಅದೆಷ್ಟೋ ಶಿಷ್ಯರು ರಾಷ್ಟ್ರ ಹಾಗೂ ಅಂತರಾಷ್ಟ್ರಿಯ ಮಟ್ಟದಲ್ಲಿ ಜಿಲ್ಲೆಗೆ ಹಾಗೂ ಕೊಡವರಿಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.

ಹಾಕಿ ಕೂರ್ಗ್ ಸಂಸ್ಥೆಯ ಅಧ್ಯಕ್ಷ ಪೈಕೇರ ಕಾಳಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ಮೊಳ್ಳೆರ ಸುಬ್ಬಯ್ಯ, ಕಳ್ಳಿಚಂಡ ಪ್ರಸಾದ್, ಕಾರ್ಯದರ್ಶಿ ಬಲ್ಯಾಟಂಡ ಪಾರ್ಥಚಂಗಪ್ಪ, ಕಾಕೋಟುಪರಂಬು ಸ್ಪೋಟ್ರ್ಸ್ ಅಂಡ್ ರಿಕ್ರೀಯೇಷನ್ ಕ್ಲಬ್ ಅಧ್ಯಕ್ಷ ಮೇವಡ ಚಿಣ್ಣಪ್ಪ, ಹಾಕಿ ಕೂರ್ಗ್ ಕಾರ್ಯದರ್ಶಿ ಬುಟ್ಟಿಯಂಡ ಚಂಗಪ್ಪ, ಬೆಂಗಳೂರು ಕೊಡವ ಸಮಾಜ ಮಾಜಿ ಅಧ್ಯಕ್ಷ ಮಂಡೇಡ ರವಿ, ಖಜಾಂಜಿ ಐನಂಡ ಲಾಲ ಅಯ್ಯಣ್ಣ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಾಕಿ ಕೂರ್ಗ್‍ನ ಲೋಗೋ ಬಿಡುಗಡೆ ಗೊಳಿಸಿದರು.

ಮಾಪಂಗಡ ಯಮುನಾ ಚಂಗಪ್ಪ ಸ್ವಾಗತಿಸಿದರು. ಅಜ್ಜಾಮಾಡ ಪೊನ್ನಪ್ಪ ಕಾರ್ಯಕ್ರಮ ನಿರೂಪಿಸಿದರು. ತಾತಂಡ ಜ್ಯೋತಿ ಪ್ರಕಾಶ್ ವಂದಿಸಿದರು.

ಸಹಾಯಧನ ಚೆಕ್ ವಿತರಣೆ : ಕಳೆದ ವರ್ಷ ಪ್ರಕೃತಿ ವಿಕೋಪಕ್ಕೆ ತುತ್ತಾದ ಎಮ್ಮೆತ್ತಾಳು ಗ್ರಾಮದ ತಂಬುಕುತ್ತಿರ ಅಯ್ಯಣ್ಣ, ಐಮುಡಿಯಂಡ ಸಿಂಚನಾ, ಸಂತೃಸ್ತರಿಗೆ, ಕುಡೆಕಲ್ ಸುರಕ್ಷಾ, ಅವರುಗಳಿಗೆ ತಲಾ 25 ಸಾವಿರದಂತೆ ವಿಧ್ಯಾರ್ಥಿ ಸಹಾಯಧನ ವಿತರಿಸಿದರು.

ತಾಂತ್ರಿಕ ಸಮಿತಿ :ಇಪ್ಪತ್ತು ದಿನಗಳ ಕಾಲ ನಡೆದ ಹಾಕಿ ಪಂದ್ಯಾಟದಲ್ಲಿ ನೆಲ್ಲಮಕ್ಕಡ ಪವನ್ , ಕೊಕ್ಕಂಡ ರೋಷನ್, ಕೋಡಿರ ಕೀರ್ತಿ ಮುತ್ತಪ್ಪ, ಬೊಳ್ಳಚಂಡ ನಾಣಯ್ಯ, ಚೀಯಕ್‍ಪೂವಂಡ ಚಂಗಪ್ಪ, ಕುಪ್ಪಂಡ ದಿಲನ್, ಚಂದಪಂಡ ಆಕಾಶ್, ಮೂಕಚಂಡ ನಾಚಪ್ಪ, ಸಣ್ಣುವಂಡ ಲೋಕೇಶ್, ಪಳಂಗಪ್ಪ, ಅಯ್ಯಪ್ಪ, ಕರವಂಡ ಅಪ್ಪಣ್ಣ, ಕೋಡಿಮಣಿಯಂಡ ಗಣಪತಿ, ಕುಮ್ಮಂಡ ಬೋಸ್ ಚಂಗಪ್ಪ, ಮೇಕತಂಡ ಟೀಸಾ ಬೋಪಯ್ಯ, ಮುತ್ತಪ್ಪ, ವಿನೋದ್ ಜೆಸಿಬಿ, ಬಿದ್ದಪ್ಪ, ಮಲ್ಲಮಾಡ ಸಂತೋಷ್, ದರ್ಶನ್, ಪೊನ್ನಣ್ಣ ತಾಂತ್ರಿಕ ಸಮಿತಿ ನಿರ್ದೇಶಕರಾಗಿ ಬುಟ್ಟಿಯಂಡ ಚಂಗಪ್ಪ, ಶಿಸ್ತು ಸಮಿತಿ ಅಧ್ಯಕ್ಷರಾಗಿ ಐನಂಡ ಲಾಲ ಅಯ್ಯಣ್ಣ ಕಾರ್ಯನಿರ್ವಹಿಸಿದರು.

ಹಾಕಿ ಕೂರ್ಗ್ ಸಂಸ್ಥೆಯ ಮೂಲಕ ಇಂಡಿಯನ್ ಕ್ಯಾಂಪ್‍ನಲ್ಲಿ ಸ್ಥಾನ ಪಡೆದುಕೊಂಡ ಮಲ್ಲಮಾಡ ಲೀಲಾವತಿ, ರಿಶ್ಚಿಕಾ ತಿಮ್ಮಯ್ಯ, ಕೃತಿಕಾ, ಸಂದ್ಯಾ, ಪದ್ಮಲತಾ, ಐನಂಡ ಆಕಾಶ್ ಪೂವಣ್ಣ, ಮಂಡಲ್, ಚೇತನ್, ಸೂರ್ಯ, ಚಂದುರ ಪೊನ್ನಣ್ಣ, ಕುಪ್ಪಂಡ ಸೋಮಯ್ಯ ಅವರುಗಳನ್ನು ಸನ್ಮಾನಿಸಲಾಯಿತು.

ಚಾಂಪಿಂiÀiನ್ಸ್ ಟ್ರೋಫಿಯಲ್ಲಿ ಬೆಸ್ಟ್ ಗೋಲ್ ಕೀಪರ್ ಕುಲ್ಲೇಟ್ಟಿರ ವಚನ್ ಕಾಳಪ್ಪ, ಬೆಸ್ಟ್ ಫುಲ್ ಬ್ಯಾಕ್ ಚೇಂದಂಡ ಸೋನು ಪೊನ್ನಣ್ಣ, ಬೆಸ್ಟ್‍ಮಿಡ್ ಫೀಲ್ಡರ್ ಚೆಪ್ಪುಡಿ ನರೈನ್ ಕಾರ್ಯಪ್ಪ, ಗೆಸ್ಟ್ ಫಾರ್ವರ್ಡ್ ಮಂಡೆಪಂಡ ದಿಲನ್, ಮ್ಯಾ ಆಫ್ ದ ಟೂರ್ನಮೆಂಟ್ ಮಂಡೆಪಂಡ ಸಜನ್ ಅಚ್ಚಯ್ಯ.

ಚಾಂಪಿಯನ್ಸ್ ಟ್ರೋಫಿ ಲೀಗ್‍ನಲ್ಲಿ ಬೆಸ್ಟ್ ಗೋಲ್ ತೀತಮಾಡ ಸುಗುಣ, ಬೆಸ್ಟ್‍ಫುಲ್ ಬ್ಯಾಕ್ ಕಾಳೇಂಗಡ ಯಶಶ್ವಿನಿ ಬೆಸ್ಟ್‍ಮಿಡ್ ಫೀಲ್ಡರ್ ಕಾಳೇಂಗಡ ಚಂಗಪ್ಪ, ಬೆಸ್ಟ್ ವುಮನ್ ಪ್ಲೇಯರ್ ಕಾಳೇಂಗಡ ಮೋನಿಷಾ, ಮ್ಯಾನ್ ಆಫ್ ದ ಟೂರ್ನ್‍ಮೆಂಟ್ ಪುದಿಯೊಕ್ಕಡ ಪ್ರಧಾನ್ ಸೋಮಣ್ಣ. ಉತ್ತಮ್ಮ ತಂಡ ಚಂದುರ.

ಕಳೆದ 21 ವರ್ಷಗಳಿಂದ ನಡೆಯುತ್ತಿರುವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ಕಾಳೇಂಗಡ ಮೋನೀಷಾ ಹಾಗೂ ಯಶಶ್ವಿನಿ ಸಹೋದರಿಯರು ಫೈನಲ್ಸ್‍ನಲ್ಲಿ ತಮ್ಮ ತಂಡದ ಪರ ಆಡಿ ನೂತನ ದಾಖಲೆ ನಿರ್ಮಿಸಿದರು.