ಮಡಿಕೇರಿ, ಮೇ 8: ಟೀಮ್ 53 ರೇಸಿಂಗ್ ಕಮ್ಯೂನಿಟಿ ವತಿಯಿಂದ ತಾ.26 ರಂದು ಸಿದ್ದಾಪುರದಲ್ಲಿ, ಪೇರಿಯನ ಜುಗುನ್ ಕಾರ್ಯಪ್ಪ ಜ್ಞಾಪಕಾರ್ಥ 3ನೇ ವರ್ಷದ ಚತುಷ್ಚಕ್ರ ವಾಹನಗಳ ಮುಕ್ತ ‘ಆಟೋ ಕ್ರಾಸ್’ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರೇಸಿಂಗ್ ಕಮ್ಯೂನಿಟಿ ಅಧ್ಯಕ್ಷ ಚೇಂದಂಡ ಚುಮ್ಮಿ ಪೂವಯ್ಯ, ಆಟೋ ಕ್ರಾಸ್ ತಾ. 26 ರಂದು ಸಿದ್ದಾಪುರದ ತಮ್ಮ ರಿವರ್ ಸೈಡ್ ಎಸ್ಟೇಟ್ ಗದ್ದೆ ಬಯಲಿನಲ್ಲಿ ಸಜ್ಜುಗೊಳಿಸಿರುವ, ಮೂರು ಪ್ರಮುಖ ಅಡೆತಡೆಗಳನ್ನು ಹೊಂದಿರುವ 2ಕಿ.ಮೀ. ಟ್ರ್ಯಾಕ್‍ನಲ್ಲಿ ನಡೆಯಲಿದೆ. ಆಟೋ ಕ್ರಾಸ್‍ನಲ್ಲಿ 60 ಕ್ಕೂ ಹೆಚ್ಚಿನ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಹೊಂದಿರುವದಾಗಿ ತಿಳಿಸಿದರು.

ಆಟೋಕ್ರಾಸ್ 800 ಸಿ.ಸಿ., 1100 ಸಿ.ಸಿ., 1400 ಸಿ.ಸಿ., 1600 ಸಿ.ಸಿ., ಕೂರ್ಗ್ ಓಪನ್ ಕ್ಲಾಸ್, ನೋವಿಸ್ ಕ್ಲಾಸ್, ಇಂಡಿಯನ್ ಓಪನ್ ಕ್ಲಾಸ್, ಜಿಪ್ಸಿ ಓಪನ್ ಕ್ಲಾಸ್, ಡೀಸೆಲ್ ಓಪನ್ ಕ್ಲಾಸ್, ಲೇಡಿಸ್ ಕ್ಲಾಸ್, ಎಸ್‍ಯುವಿ ಕ್ಲಾಸ್, ರೋಲ್‍ಕೇಜ್ ಕ್ಲಾಸ್, ಅನ್‍ರಿಸ್ಟ್ರಿಕ್ಟೆಡ್ ಓಪನ್ ಕ್ಲಾಸ್, ಸ್ಟ್ರೋಕ್ ಕ್ಲಾಸ್ ಸೇರಿದಂತೆ 14 ವಿಭಾಗಗಳಲ್ಲಿ ನಡೆಯಲಿದೆಯೆಂದು ಮಾಹಿತಿ ನೀಡಿದರು. ಆಟೋ ಕ್ರಾಸ್‍ನಲ್ಲಿ ಪಾಲ್ಗೊಳ್ಳುವವರಿಗೆ ಸ್ಥಳದಲ್ಲೆ ನೋಂದಾವಣೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಯಾವದೇ ಸ್ಪರ್ಧೆ ಗಳಲ್ಲಿ ‘ರೀ ಎಂಟ್ರಿ’ಗೆ ಅವಕಾಶ ಇರುವದಿಲ್ಲವೆಂದು ಸ್ಪಷ್ಟಪಡಿಸಿದ ಅವರು, ಹೆಚ್ಚಿನ ವಿವರಗಳಿಗೆ ರೇಸಿಂಗ್ ಕಮ್ಯೂನಿಟಿ ಸದಸ್ಯರು ಗಳಾದ ದೀಲ್‍ರೂಪ್ ಮೊ. 9741917873, ಸಂಜಯ್ ಮೊ. 9845010290 ಅನ್ನು ಸಂಪರ್ಕಿಸ ಬಹುದೆಂದು ತಿಳಿಸಿದರು ಪ್ರತಿ ವಿಭಾಗದ ವಿಜೇತರಿಗೆ ನಗದು ಸೇರಿದಂತೆ ಆಕರ್ಷಕ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸದಸ್ಯರುಗಳಾದ ಟಿ.ಎಸ್.ಸುನಿಲ್, ಬಿ.ವಿ.ಸಂಜಯ್, ಕೆ.ಆರ್.ಮುನ್ನ ಹಾಗೂ ಎಂ.ಎಂ. ದೀಲ್‍ರೂಪ್ ಉಪಸ್ಥಿತರಿದ್ದರು.