ಕುಶಾಲನಗರ, ಮೇ 7: ಜಿಲ್ಲಾ ಪೊಲೀಸ್, ಸೋಮವಾರಪೇಟೆ ಉಪ ವಿಭಾಗ ಮತ್ತು ಕುಶಾಲನಗರ ವೃತ್ತದ ವತಿಯಿಂದ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಗುಡ್ಡೆಹೊಸೂರು ಗ್ರಾಮದಲ್ಲಿ ಆರಂಭಗೊಂಡ ಜಾಥಾಗೆ ಡಿವೈಎಸ್ಪಿ ದಿನಕರ ಶೆಟ್ಟಿ ಚಾಲನೆ ನೀಡಿದರು. ಕಾಲ್ನಡಿಗೆ ಮೂಲಕ ಜಾಥಾ ತೆರಳಿ, ಸಂಚಾರಿ ನಿಯಮಗಳನ್ನು ಪಾಲಿಸಿ, ಕಡ್ಡಾಯವಾಗಿ ಹೆಲ್ಮೆಟ್ ಬಳಸಿ ಎಂಬ ಘೋಷಣೆಯುಳ್ಳ ಬ್ಯಾನರ್ ಹಿಡಿದು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಈ ಸಂದರ್ಭ ಮಾತನಾಡಿದ ಡಿವೈಎಸ್ಪಿ ದಿನಕರ ಶೆಟ್ಟಿ, ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಅರಿವು ಮೂಡಿಸ ಲಾಗುತ್ತಿದೆ ಎಂದರು. ಪೊಲೀಸ್ ವೃತ್ತ ನಿರೀಕ್ಷಕ ಬಿ.ಎಸ್.ದಿನೇಶ್ಕುಮಾರ್, ಗ್ರಾಮಾಂತರ ಠಾಣಾಧಿಕಾರಿ ನಂದೀಶ್, ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಇದ್ದರು. ಕುಶಾಲನಗರನಗರ, ಗ್ರಾಮಾಂತರ, ಸಂಚಾರಿ ಠಾಣೆಗಳು ಮತ್ತು ಸುಂಟಿಕೊಪ್ಪ ಠಾಣೆಯ 50 ಕ್ಕೂ ಅಧಿಕ ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.