ಗೋಣಿಕೊಪ್ಪ ವರದಿ, ಮೇ 7: ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘದ ಉದ್ಘಾಟನಾ ಕಾರ್ಯಕ್ರಮ ತಾ. 15 ರಂದು ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಜೆ. ಎ. ಲಕ್ಷ್ಮಿನಾರಾಯಣ ಮುಂದಾಳತ್ವದಲ್ಲಿ ನಡೆಯಲಿದೆ ಎಂದು ಕೊಡಗು ರೈತ ಸಂಘ ಅಧ್ಯಕ್ಷ ಚಿಮ್ಮಂಗಡ ಗಣೇಶ್ ತಿಳಿಸಿದ್ದಾರೆ. ಅಂದು ಸದಸ್ಯರಿಗೆ ಶಾಲು ಹೊದಿಸುವ ಮೂಲಕ ಸಂಘಕ್ಕೆ ಬರ ಮಾಡಿಕೊಳ್ಳಲಾಗು ವದು. ಸದಸ್ಯರನ್ನು ಒಂದುಗೂಡಿಸಿ ರೈತಪರ ಹೋರಾಟದ ಮೂಲಕ ನ್ಯಾಯ ದಕ್ಕಿಸಿಕೊಳ್ಳುವ ಪ್ರಯತ್ನ ನಡೆಯಲಿದೆ ಎಂದರು. ಈಗಾಗಲೇ ನಮ್ಮ ಸಂಘದಿಂದ ಕಾಯಿಮಾನಿಯಲ್ಲಿ ಕಾಡಾನೆಗೆ ಬಲಿಯಾದ ಸುಧಾ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ದಿಡೀರ್ ಕೈಗೊಂಡ ಪ್ರತಿಭಟನೆಯಿಂದ ಅರಣ್ಯ ಇಲಾಖೆ ಅಧಿಕಾರಿಗಳಿಂದ ಹೆಚ್ಚು ಭರವಸೆ ದೊರೆಯುವಂತಾಗಿದೆ ಎಂದರು. ಗೋಷ್ಠಿಯಲ್ಲಿ ರೈತ ಸಂಘ ಪ್ರಮುಖರುಗಳಾದ ಕಳ್ಳಿಚಂಡ ಧನು, ಬಾದುಮಂಡ ಮಹೇಶ್, ಚಂಗುಲಂಡ ರಾಜಪ್ಪ ಉಪಸ್ಥಿತರಿದ್ದರು.