ನಾಪೆÉÇೀಕ್ಲು, ಮೇ 6 : ಕೊಡವ ಭಾಷೆ ಅವನತಿಯತ್ತ ಸಾಗಲು ಕೊಡವರೇ ಕಾರಣ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜ್ಜಿರ ಅಯ್ಯಪ್ಪ ವಿಷಾದ ವ್ಯಕ್ತಪಡಿಸಿದರು.
ನಾಪೆÉÇೀಕ್ಲು ಭಗವತಿ ದೇವಳದ ಸಮುದಾಯ ಭವನದಲ್ಲಿ ಕೊಡವ ಮಕ್ಕಡ ಕೂಟದಿಂದ ಏರ್ಪಡಿಸಲಾಗಿದ್ದ ಆಟ್, ಪಾಟ್, ಪಡಿಪು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ವಾಗಿ ಅವರು ಮಾತನಾಡಿದರು. ಕೊಡವ ಭಾಷೆಯನ್ನು ಕೊಡವರೇ ಮಾತನಾಡದಿದ್ದರೆ ಭಾಷೆ ಉಳಿಯಲು ಹೇಗೆ ಸಾಧ್ಯ? ಕೊಡವ ಭಾಷೆ, ಆಚಾರ -ವಿಚಾರ, ಪದ್ಧತಿ, ಸಂಪ್ರದಾಯವನ್ನು ಉಳಿಸಿ ಬೆಳೆಸಲು ಹಲವಾರು ಕೊಡವ ಸಂಘಟನೆಗಳು ಅವಿರತವಾಗಿ ಶ್ರಮಿಸುತ್ತಿದ್ದರೂ, ಕೊಡವರೇ ಇಂಗ್ಲೀಷ್ ಮಾತನಾಡಿದರೆ ನಮ್ಮ ಭಾಷೆ, ಸಂಸ್ಕøತಿ ಉಳಿಯಲು ಸಾಧ್ಯವಿಲ್ಲ ಎಂದ ಅವರು ಪ್ರತಿಯೊಬ್ಬ ಕೊಡವರು ಕೊಡವಾಮೆಯ ಉದ್ದಾರಕ್ಕಾಗಿ ಮಕ್ಕಳಿಗೂ, ತಮ್ಮ ಸ್ನೇಹಿತರಿಗೂ ಕೊಡವ ಭಾಷೆಯನ್ನು ಕಲಿಸಬೇಕು ಎಂದು ಹೇಳಿದರು.
ಮುಖ್ಯ ಅಥಿತಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಸೇನಾಧಿಕಾರಿ ಕೊಂಡೀರ ನಾಣಯ್ಯ ಮಾತನಾಡಿ ಕೊಡವ ಮಕ್ಕಡ ಕೂಟ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವದು ಸಂತಸ ತಂದಿದೆ. ಕೊಡವರು ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಉಳುವಂಗಡ ಕಾವೇರಿ ಉದಯ ಬರೆದಿರುವ ಪುಣ್ಯ ಕ್ಷೇತ್ರ ಪರಿಚಯ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಪೆÇೀಕ್ಲು ಭಗವತಿ ದೇವಳದ ಅಧ್ಯಕ್ಷ ಕುಲ್ಲೇಟಿರ ಮಾದಪ್ಪ ವಹಿಸಿದ್ದರು. ವೇದಿಕೆಯಲ್ಲಿ ಅರೆಯಡ ಡಿ.ಸೋಮಪ್ಪ, ನಿವೃತ್ತ ಶಿಕ್ಷಕ ಕುಲ್ಲೇಟಿರ ಗುರುವಪ್ಪ ಇದ್ದರು.