ವೀರಾಜಪೇಟೆ, ಮೇ 6: ಸಂವಿದಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 128ನೇ ಜನ್ಮ ದಿನವನ್ನು ನಗರದ ಹರಿಕೇರಿಯಲ್ಲಿ ಆಚರಿಸಲಾಯಿತು.

ವೀರಾಜಪೇಟೆ ನಗರದ ಹರಿಕೇರಿ ಸಮುದಾಯ ಭವನದಲ್ಲಿ ದಲಿತ ಸಂಘರ್ಷ ಸಮಿತಿಯ ನಗರ ಸಮಿತಿಯ ವತಿಯಿಂದ ಕಾರ್ಯಕ್ರಮ ಆಚರಿಸಲಾಯಿತು. ಪ್ರಾಸ್ತಾವಿಕವಾಗಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಹೆಚ್. ರಜನಿಕಾಂತ್ ಅವರು ಶೋಷಿತ ವರ್ಗಗಳ ಏಳಿಗೆಯನ್ನು ಬಯಸಿದ ಬಾಬಾ ಸಾಹೇಬ್ ಅವರ ಕುರಿತು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಅಗಮಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಸದಸ್ಯರಾದ ಜಲೀಲ್, ಸಂವಿದಾನ ವನ್ನು ರಚನೆ ಮಾಡುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಾತ್ರ ಅನನ್ಯವಾಗಿದೆ ಎಂದರು.

ಜಿಲ್ಲಾ ದಲಿತ ಸಂಘರ್ಷ ಸಮಿತಿಯ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಹೆಚ್. ಸತೀಶ್ ಮಾತನಾಡಿ, ಕಾಂತ್ರಿಕಾರಕ ಬದಲಾವಣೆಗಳನ್ನು ಕೇವಲ ಕ್ರಾಂತಿಯ ಮೂಲಕವೇ ತರಬಲ್ಲೆವು ಮತ್ತು ಕ್ರಾಂತಿ ಎಂದರೆ ರಕ್ತಪಾತ ಅನ್ನುವದು ಸಾಮಾನ್ಯ ತಿಳುವಳಿಕೆ ಎಂಬದನ್ನು ಡಾ. ಬಿ.ಆರ್. ಅಂಬೇಡ್ಕರ್ ಮನಗಂಡು ಪ್ರಜಾಪ್ರಭುತ್ವದ ಕಲ್ಪನೆಗೆ ನಾಂದಿಯಾಗಿತ್ತು ಎಂದು ಹೇಳಿದರು.

ವೇದಿಕೆಯಲ್ಲಿ ಸಮಾಜ ಸೇವಕ ಯೋಗೇಶ್ ನಾಯ್ಡು, ಊರಿನ ಹಿರಿಯರಾದ ಹೆಚ್.ಎಸ್. ಕೃಷ್ಣ ಉಪಸ್ಥಿತರಿದ್ದರು. ದಲಿತ ಸಂಘರ್ಷ ನಗರ ಸಮಿತಿಯ ಸದಸ್ಯರಾದ ಕಿಶೋರ್ ಹೆಚ್.ಆರ್, ಹೆಚ್.ಎ. ಗಿರೀಶ್, ಈಶನ್, ಪವನ್, ಪೃಥ್ವಿ, ರಾಕೇಶ್ ಮತ್ತು ಇತರ ಊರಿನ ನಾಗರಿಕರು ಹಾಜರಿದ್ದರು.

- ಕೆ.ಕೆ.ಎಸ್.