ಸುಂಟಿಕೊಪ್ಪ, ಮೇ 3: ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ 1986-87ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳ; 2ನೇ ವರ್ಷದ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿ ವಿವಿಧತೆಯಲ್ಲಿ ಏಕತೆ ಕಂಡರು.

ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ 1986-87ನೇ ಸಾಲಿನ ವಿದ್ಯಾರ್ಥಿಗಳು ಒಗ್ಗೂಡಿಕೊಂಡು ದ್ವಿತೀಯ ವರ್ಷದ ಸಮ್ಮಿಲನ ಅಂಗವಾಗಿ ವಿವಿಧ ಗ್ರಾಮೀಣ ಹಾಗೂ ಶಾಲಾ ದಿನಗಳಲ್ಲಿ ಆಟವಾಡಿದಂತಹ ಕ್ರೀಡೆಗಳನ್ನು ಆಯೋಜಿಸುವ ಮೂಲಕ ತಮ್ಮ ಹಿಂದಿನ ಸವಿನೆನಪುಗಳನ್ನು ಮೆಲುಕು ಹಾಕಿಕೊಂಡರು. ಸಂತಕ್ಲಾರ ಕನ್ಯಾಸ್ತ್ರೀ ಮಠದ ಸಿಸ್ಟರ್ ವೈಲೆಟ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳು ಜೀವನ ಮೌಲ್ಯಕ್ಕೆ ಒತ್ತು ನೀಡುತ್ತಿದ್ದರು. ಈಗಿನ ವಿದ್ಯಾರ್ಥಿಗಳ ದೃಷ್ಟಿಕೋನ ಬದಲಾಗುತ್ತಿದ್ದು; ಮೌಲ್ಯಗಳ ವಿಷಾದನೀಯ ಎಂದರು.

ಹಳೆಯ ವಿದ್ಯಾರ್ಥಿ ಸಂಘದ ಪ್ರತಿನಿಧಿಯಾಗಿ ಪ್ರದೀಪ್, ಕಾರ್ಯಕ್ರಮ ಆಯೋಜಕ ಸುರೇಶ್ ಗೋಪಿ, ಮುಸ್ತಾಫ ಮಾತನಾಡಿದರು. ಶಾಲೆಗೆ ಅವಶ್ಯಕವಾಗಿದ್ದ ಬ್ಯಾಂಡ್‍ಗಳನ್ನು ಸಂಘದ ಪ್ರತಿನಿಧಿ ಪ್ರದೀಪ್, ಕಾರ್ಯಕ್ರಮ ಆಯೋಜಕ ಸುರೇಶ್ ಗೋಪಿ, ಮುಸ್ತಾಫ ನೀಡಿದರು. ಸಮಾರಂಭದಲ್ಲಿ ಲವಿನ ಸಬಾಸ್ಟೀನ್ ಸ್ವಾಗತಿಸಿ,ವರದಿ ವಾಚಿಸಿ, ನಿರೂಪಿಸಿ, ಸುರೇಶ್ ವಂದಿಸಿದರು.