ಮಡಿಕೇರಿ, ಮೇ 3: ಆಕಸ್ಮಿಕ ಮರದಿಂದ ಬಿದ್ದು ಗಾಯಗೊಂಡಿರುವ ಶಾಲಾ ವಿದ್ಯಾರ್ಥಿಯೊಬ್ಬರ ಚಿಕಿತ್ಸೆಗಾಗಿ ಕೊಡಗು ಎಸ್‍ಸಿ, ಎಸ್‍ಟಿ ಸಂಘ ಆರ್ಥಿಕ ನೆರವು ಕಲ್ಪಿಸಿದೆ. ಸೋಮವಾರಪೇಟೆ ಬಳಿಯ ವಳಗುಂದ ನಿವಾಸಿ ರಮೇಶ್ ಪುತ್ರ, ಗೌಡಳ್ಳಿ ಶಾಲೆಯ 9ನೇ ತರಗತಿಯ ಕೀರ್ತಿ ಮರದಿಂದ ಬಿದ್ದು ಹೊಟ್ಟೆಗೆ ಗಾಯ ಉಂಟಾಗಿ ಚಿಕಿತ್ಸೆಗೆ ಒಳಗಾಗಿದ್ದು, ಈತನಿಗೆ ಸಂಘದ ಪದಾಧಿಕಾರಿಗಳಾದ ಬಿ.ಸಿ. ರಾಜು, ಕಾರ್ಯದರ್ಶಿ ಕುಮಾರ್, ಖಜಾಂಚಿ ರಾಮಚಂದ್ರಮೂರ್ತಿ ವಿದ್ಯಾರ್ಥಿಯ ಶಿಕ್ಷಕರು-ಪೋಷಕರ ಮೂಲಕ ನೆರವು ಕಲ್ಪಿಸಿದ್ದಾರೆ.