ಸಿದ್ದಾಪುರ, ಮೇ 4: ಬಾವಿಯಲ್ಲಿ ಅಳವಡಿಸಲಾಗಿದ್ದ ಮೋಟರ್ ಕಳ್ಳತನವಾಗಿರುವ ಪ್ರಕರಣ ಗುಹ್ಯ ಗ್ರಾಮದಲ್ಲಿ ನಡೆದಿದೆ. ಗುಹ್ಯ ಗ್ರಾಮದ ಕಾಫಿ ತೋಟದ ಒಳಬಾಗದ ಬಾವಿಯಲ್ಲಿ ಕಾರ್ಮಿಕರ ಲೈನ್‍ಮನೆಗೆ ನೀರು ಸರಬರಾಜು ಮಾಡಲು ಅಳವಡಿಸಿದ್ದ 1 ಹೆಚ್.ಪಿ ಮೋಟರ್‍ನ ಕೇಬಲ್ ಕತ್ತರಿಸಿ ಕಳ್ಳತನ ಮಾಡಲಾ ಗಿದೆ. ಈ ಬಗ್ಗೆ ತೋಟದ ರೈಟರ್ ಪಿ.ಸಿ ನಾಗೇಶ್ ಪುಕಾರು ನೀಡಿದ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.