ಗೋಣಿಕೊಪ್ಪ ವರದಿ, ಮೇ 4 : ಮಾಯಮುಡಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮೈದಾನದಲ್ಲಿ ಅಖಿಲ ಅಮ್ಮಕೊಡವ ಸಮಾಜ ಹಾಗೂ ಬಾನಂಡ ಕುಟುಂಬ ಸಹಯೋಗದಲ್ಲಿ ಆಯೋಜಿಸಿರುವ ಬಾನಂಡ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಲಾಯಿತು.ಮಾಯಮುಡಿ ರಾಮಮಂದಿರ ದಿಂದ ಮೆರವಣಿಗೆ ಮೂಲಕ ಮೈದಾನಕ್ಕೆ ಆಗಮಿಸಲಾಯಿತು. ಕೊಡವ ಸಾಂಪ್ರದಾಯಿಕ ವಾಲಗ, ಮಹಿಳೆಯರು ತಳಿಯತಕ್ಕಿ ಬೊಳ್‍ಚ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡರು. ಡೊಳ್ಳು ಕುಣಿತದಲ್ಲಿ ಕನ್ನಡ ಕಲೆ ಅನಾವರಣಗೊಂಡಿತು. ಪುರುಷರು ಹಾಗೂ ಮಹಿಳೆಯರು ಸಾಂಪ್ರದಾಯಿಕ ಉಡುಪು ತೊಟ್ಟು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ದುಡಿಕೊಟ್ಟ್ ಮೂಲಕ ಪುರುಷರು ಪಾಲ್ಗೊಂಡರು.ಸಭಾ ಕಾರ್ಯಕ್ರಮವನ್ನು ಬೆಂಗಳೂರು ಗೋಕರ್ಣ ಶ್ರೀ ರಾಮಚಂದ್ರಪುರ ಮಠ ಮಹಾಸ್ವಾಮೀಜಿ

(ಮೊದಲ ಪುಟದಿಂದ) ರಾಘವೇಶ್ವರ ಭಾರತೀ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ, ಅಮ್ಮಕೊಡವರ ಪೂರ್ವ ಪರಂಪರೆ ಮೆಚ್ಚುವಂತಹದ್ದು, ಅವರ ಆಚಾರ-ವಿಚಾರ ಹೆಚ್ಚು ವಿಶೇಷತೆಯಿಂದ ಕೂಡಿದೆ ಎಂದರು.

ಬೆಂಗಳೂರು ಗೋಕರ್ಣ ಶ್ರೀ ರಾಮಚಂದ್ರಪುರ ಮಠಕ್ಕೂ ಅಮ್ಮಕೊಡವರಿಗೂ ಗುರು-ಶಿಷ್ಯರ ಸಂಬಂಧವಿದೆ. ಇದನ್ನು ಮುಂದುವರಿಸಿಕೊಂಡು ಹೋಗುವ ಅವಶ್ಯಕತೆ ಇದೆ ಎಂದರು.

ಅಖಿಲ ಅಮ್ಮಕೊಡವ ಸಮಾಜ ಉಪಾಧ್ಯಕ್ಷ ಪಡಿಯಮ್ಮಂಡ ಮುರುಳಿ ಮಾತನಾಡಿ, ನಮ್ಮವರು ಕೊಡವ ಭಾಷೆಗೆ ಹೆಚ್ಚು ಒತ್ತು ನೀಡುವ ಅನಿವಾರ್ಯತೆ ಇದೆ. ವ್ಯಾವಹಾರಿಕವಾಗಿ ಅನ್ಯ ಭಾಷೆ ಬಳಕೆ ಸಾಮಾನ್ಯ. ಅದರೆ, ಇದರೊಂದಿಗೆ ಕೊಡವ ಭಾಷೆ ಕಡೆಗಣನೆ ಸರಿಯಲ್ಲ ಎಂದರು.

ಅಖಿಲ ಅಮ್ಮ ಕೊಡವ ಸಮಾಜ ಗೌರವ ಅಧ್ಯಕ್ಷ ಬಾನಂಡ ಪ್ರಥ್ಯು ಮಾತನಾಡಿ, ಬಾನಂಡ ಕುಟುಂಬದಲ್ಲಿ ಕೇವಲ 105 ಜನಸಂಖ್ಯೆ ಇದೆ. ಆದರು ಎಲ್ಲಾರು ಸಹಕಾರದಲ್ಲಿ ನಾವು ಕ್ರೀಡೆಯ ಮೂಲಕ ಒಂದಾಗಲು ಅಮ್ಮಕೊಡವರು ಮುಂದಾಗಿದ್ದೇವೆ. ಇಂತಹ ಬದ್ಧತೆ, ಅಭಿಮಾನ ಬೇಕು ಎಂದರು.

21 ಕುಟುಂಬಗಳು ಭಾಗಿ : ಬಾನಂಡ ಕ್ರಿಕೆಟ್ ಟೂರ್ನಿಯಲ್ಲಿ 21 ಕುಟುಂಬ ತಂಡಗಳು ಸೆಣೆಸಾಟ ನಡೆಸಲಿವೆ. ಚಿಲ್ಲಜಮ್ಮಂಡ, ಅಣ್ಣೀರ, ಚೊಟ್ಟೆಕೊರಿಯಂಡ, ಬಾಚಮಾಡ, ಗುಂಭೀರ, ಹೆಮ್ಮಚ್ಚಿಮನೆ, ಪಾಡಿಯಮ್ಮಂಡ, ಚೊಟ್ಟೊಳಿ ಯಮ್ಮಂಡ, ಬಾನಂಡ, ಆಂಡಮಾಡ, ಕೊಂಡಿಜಮ್ಮಂಡ, ಚಮ್ಮಣಮಾಡ, ಬಾಚಮಂಡ, ಪುತ್ತಮನೆ, ಅಮ್ಮತ್ತೀರ, ನೆರಿಯಂಡಮ್ಮಂಡ, ಮಂಜುವಡ, ಪಡಿಙರಮ್ಮಂಡ, ನಾಯಮ್ಮಂಡ, ಮನ್ನಕಮನೆ ಹಾಗೂ ಬಲ್ಯಂಡ ತಂಡಗಳು ಪಾಲ್ಗೊಂಡಿವೆ.

ಈ ಸಂದರ್ಭ ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಅಚ್ಚಿಯಂಡ ವೇಣುಗೋಪಾಲ್, ಮಾಯಮುಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಬಲ್ಯಂಡ ಭವಾನಿ ಮೋಹನ್, ಸದಸ್ಯ ಕಾಳಪಂಡ ಟಿಪ್ಪು ಬಿದ್ದಪ್ಪ, ಅಮ್ಮಕೊಡವ ಮಹಿಳಾ ಸಂಘ ಅಧ್ಯಕ್ಷೆ ಅಮ್ಮತ್ತೀರ ರೇವತಿ ಪರಮೇಶ್ವರ್, ಕೋತೂರು ಶ್ರೀಕೃಷ್ಣ ಅಮ್ಮಕೊಡವ ಸಂಘ ಅಧ್ಯಕ್ಷ ಮ್ನನಕಮನೆ ರಾಜು, ದಾನಿ ಅಚ್ಚಿಯಂಡ ಸುನಿಲ್, ನಿವೃತ್ತ ಬ್ಯಾಂಕ್ ಅಧಿಕಾರಿ ಪುತ್ತಮನೆ ಗಣೇಶ್ ಕುಮಾರ್, ಅಮ್ಮಕೊಡವ ಸಮಾಜ ಕಾರ್ಯದರ್ಶಿ ಪುತ್ತಮನೆ ಅನಿಲ್ ಬಾನಂಡ ಕುಟುಂಬ ಅಧ್ಯಕ್ಷ ಬಾನಂಡ ಅಪ್ಪಣಮಯ್ಯ, ಉಪಾಧ್ಯಕ್ಷ ನಂಜುವಮಯ್ಯ, ಕಾರ್ಯದರ್ಶಿ ಪ್ರಕಾಶ್, ಖಜಾಂಜಿ ಸುದನ್ ಉಪಸ್ಥಿತರಿದ್ದರು. ಬಾನಂಡ ಆಶಾ ಸುದನ್, ಬಾನಂಡ ಮಾಲಾಪ್ರಥ್ಯು ಹಾಗೂ ಅನಿತಾ ಶಿವು ನಿರೂಪಿಸಿದರು. -ಸುದ್ದಿಪುತ್ರ