ಚೆಟ್ಟಳ್ಳಿ, ಮೇ 3: ಕೊಂಡಂಗೇರಿ ಯುವಕ ಸಂಘದ ವತಿಯಿಂದ ಇಲ್ಲಿನ ಪ್ರೌಢ ಶಾಲಾ ಮೈದಾನದಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿರುವ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟದಲ್ಲಿ ಸಹರಾ ಎಫ್.ಸಿ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ ಸುಂಟಿಕೊಪ್ಪ ಯೂತ್‍ಫಾರ್ ಜಸ್ಟೀಸ್ ದ್ವಿತೀಯ ಸ್ಥಾನ ಗಳಿಸಿದೆ.ಸಹರಾ ಎಫ್.ಸಿ ಹೊಳಮಾಳ ಹಾಗೂ ಯೂತ್ ಫಾರ್ ಜಸ್ಟೀಸ್ ಸುಂಟಿಕೊಪ್ಪ ನಡುವಿನ ರೋಚಕವಾದ ಫೈನಲ್ ಹಣಾಹಣಿಯಲ್ಲಿ ಮೊದಲಾರ್ಧದಲ್ಲಿ ಹಮೀದ್ ಅವರ ಗೋಲಿನ ನೆರವಿನಿಂದ ಮುನ್ನಡೆ ಸಾಧಿಸಿತು.ದ್ವಿತೀಯಾರ್ಧದಲ್ಲಿ ಸಹರಾ ಎಫ್.ಸಿ ತಂಡದ ನಾಯಕ ಜುನೈದ್ ಅವರ ಗೋಲಿನ ನೆರವಿನಿಂದ ಸಮಬಲ ಸಾಧಿಸಿತು.ಪೆನಾಲ್ಟಿ ಶೂಟೌಟ್‍ನಲ್ಲಿ ಸಹಾರ ಎಫ್.ಸಿ ತಂಡವು 4-3 ಗೋಲುಗಳ ಅಂತರದಿಂದ ಸುಂಟಿಕೊಪ್ಪ ತಂಡವನ್ನು ಮಣಿಸಿ ಎರಡನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟದ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಹರಾ ಎಫ್.ಸಿ ತಂಡವು 2-0 ಗೋಲುಗಳ ಅಂತರದಿಂದ ಗೋಣಿಕೊಪ್ಪ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಸುಂಟಿಕೊಪ್ಪ ತಂಡವು ಪಾಲಿಪೆಟ್ಟ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಗೋಣಿಕೊಪ್ಪ ತಂಡವನ್ನು ಮಣಿಸಿ (ಮೊದಲ ಪುಟದಿಂದ) ಪಾಲಿಪೆಟ್ಟ ತಂಡವು ಪ್ರಶಸ್ತಿ ಪಡೆಯಿತು. ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರ ಸಹರಾ ಎಫ್.ಸಿ ತಂಡದ ಜುನೈದ್, ಅತ್ಯುತ್ತಮ ಗೋಲ್

ಕೀಪರ್ ಪ್ರಶಸ್ತಿಯನ್ನು ಸುಂಟಿಕೊಪ್ಪದ ತಂಡದ ನಾಸೀರ್, ಮ್ಯಾನ್ ಆಫ್ ದಿ ಟೂರ್ನಮೆಂಟ್ ಜುನೈದ್ ಹೊಳಮಾಳ, ಬೆಸ್ಟ್ ಪ್ಲೆಯರ್ ಚಿನ್ನು ಗೋಣಿಕೊಪ್ಪ, ಬೆಸ್ಟ್ ಟೀಂ ಕೆ.ಎಫ್.ಸಿ ಕುಶಾಲನಗರ , ಎಮರ್ಜಿಂಗ್ ಪ್ಲೆಯರ್ ಕುಂಜಿಲ ತಂಡದ ನಿಸಾಮ್, ಬೆಸ್ಟ್ ಗೋಲ್ ಬಾರಿಸಿದ ಆಟಗಾರ ಅಬು ಸುಂಟಿಕೊಪ್ಪ, ಬೆಸ್ಟ್ ಡಿಫೆಂಡರ್ ಶಾಕಿರ್ ಪಾಲಿಪೆಟ್ಟ, ಬೆಸ್ಟ್ ಯೂತ್ ಟೀಂ ಪಡಿಯಾನಿ,

ಸನ್ಮಾನ: ಕೊಂಡಂಗೇರಿ ಪ್ರೌಢ ಶಾಲೆಯಲ್ಲಿ ಕಳೆದ 19 ವರ್ಷ ಕನ್ನಡ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ಕಣ್ಣು ಟೀಚರ್, ಕ್ರೀಡಾಕೂಟದ ಟ್ರೋಫಿ ದಾನಿಗಳಾದ ಮೀನು ವ್ಯಾಪಾರಿ ಉಂಬಾಯಿ ಗೋಣಿಕೊಪ್ಪ, ಟಿ.ಎಸ್.ಕೆ ಕೊಂಡಂಗೇರಿ, ಕೊಂಡಂಗೇರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮಹೇಂದ್ರ ಹಾಗೂ ರಾಜ್ಯ ಮಟ್ಟದ ಫುಟ್ಬಾಲ್ ಆಟಗಾರ ಕುಂಜಿಲ ನಿವಾಸಿ ಬಿಲಾಲ್, ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟ ಸಂಸ್ಥಾಪಕ ಆಶಿಫ್ ಹಾಗೂ ತಯ್ಯೂಬ್ ಅವರನ್ನು ಸನ್ಮಾನಿಸಲಾಯಿತು. ಸಮಾರೋಪ : ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟದ ಸಂಸ್ಥಾಪಕ ಆಶಿಫ್ ವಹಿಸಿದ್ದರು. ವೇದಿಕೆಯಲ್ಲಿ ಪ್ರಗತಿ ಪರ ಚಿಂತಕ ಕುಂಞÂ ಅಬ್ದುಲ್ಲಾ, ಹಾಲುಗುಂದ ಗ್ರಾಮ ಪಂಚಾಯತಿ ಅಧ್ಯಕ್ಷ ಶಾದುಲಿ, ಸದಸ್ಯರಾದ ಯೂಸುಫ್, ಟಿ.ಎಸ್.ಕೆ, ಉಂಬಾಯಿ ಗೋಣಿಕೊಪ್ಪ, ಶಿಕ್ಷಕಿಯಾದ ಕಣ್ಣು ಟೀಚರ್, ಖಲೀಲ್, ಸೈಫ್ ಅಲಿ, ಜಾಸೀರ್, ಮಜೀದ್, ನಾಸೀರ್ ಇದ್ದರು. -ಕೆ.ಎಂ. ಇಸ್ಮಾಯಿಲ್ ಕಂಡಕರೆ