ಮಡಿಕೇರಿ, ಮೇ 4: ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಗೌಡ ಜನಾಂಗದ ಗೌಡ ಕ್ರಿಕೆಟ್ ಹಬ್ಬದಲ್ಲಿ ಕೆಡಿಕೆ ಬಾಯ್ಸ್ ಹಾಗೂ ಕೋಳಿಬೈಲು ತಂಡ ಸೆಮಿಫೈನಲ್ ಪ್ರವೇಶಿಸಿವೆ.

ಈವ್ನಿಂಗ್ ಕ್ರಿಕೆಟರ್ಸ್ ಹಾಗೂ ತಳೂರು ತಂಡದ ನಡುವಿನ ಪಂದ್ಯದಲ್ಲಿ ಈವ್ನಿಂಗ್ ಕ್ರಿಕೆಟರ್ಸ್ 3 ವಿಕೆಟ್‍ಗೆ 60 ರನ್ ಬಾರಿಸಿದರೆ, ತಳೂರು 8 ವಿಕೆಟ್‍ಗೆ 45 ರನ್ ಗಳಿಸಿ ಸೋಲನುಭವಿಸಿತು. ಈವ್ನಿಂಗ್ ಕ್ರಿಕೆಟರ್ಸ್ ಪರ ಸುಬ್ರಮಣಿ 17 ರನ್ ಗಳಿಸಿದರೆ, ಪುಟ್ಟ 3 ವಿಕೆಟ್ ಕಬಳಿಸಿದರು.

ಟೀಂ ಎಸ್‍ವೈಸಿ ಗಾಳಿಬೀಡು ತಂಡ 4 ವಿಕೆಟ್‍ಗೆ 35 ರನ್ ಗಳಿಸಿದರೆ, ಮುತ್ತಾರ್ಮುಡಿ ಸ್ಮ್ಯಾಷರ್ಸ್ 2 ವಿಕೆಟ್‍ಗೆ 36 ರನ್ ಗಳಿಸಿ ಜಯಗಳಿಸಿತು. ಮುತ್ತಾರ್ಮುಡಿ ಪರ ಲೋಹಿತ್ 26 ರನ್ ಗಳಿಸಿದರೆ, ಮಂಜು 2 ವಿಕೆಟ್ ಪಡೆದರು.

ಪಾಕ ಬಾಯ್ಸ್ 7 ವಿಕೆಟ್‍ಗೆ 34 ರನ್ ಬಾರಿಸಿದರೆ, ಬಿಎಫ್‍ಎಂಎ 3 ವಿಕೆಟ್‍ಗೆ 37 ರನ್ ಗಳಿಸಿ ಜಯಗಳಿಸಿತು. ಬಿಎಫ್‍ಎಂಎ ಪರ ಪ್ರಗತ್ 17 ರನ್ ಗಳಿಸಿದರೆ, ವರುಣ್ 3 ವಿಕೆಟ್ ಕಬಳಿಸಿದರು.

ನಮೋ ಕ್ರಿಕೆಟರ್ಸ್ ಕೂರ್ಗ್ 6 ವಿಕೆಟ್‍ಗೆ 88 ರನ್ ಗಳಿಸಿದರೆ ಕೆ12 ಫಾರೆವರ್ ತಂಡ ಕೂಡ 7 ವಿಕೆಟ್‍ಗೆ 88 ರನ್ ಗಳಿಸಿತು. ಸೂಪರ್ ಓವರ್‍ನಲ್ಲಿ ನಮೋ ಕ್ರಿಕೆಟ್ ಕೂರ್ಗ್ ತಂಡ ಜಯಗಳಿಸಿತು. ನಮೋ ಕ್ರಿಕೆಟರ್ಸ್‍ನ ದಿನೇಶ್ 18 ಎಸೆತಕ್ಕೆ 42 ರನ್ ಗಳಿಸಿದರು.

ಆಲೂರು ರೈಸಿಂಗ್ ಸ್ಟಾರ್ಸ್ 7 ವಿಕೆಟ್‍ಗೆ 66 ರನ್ ಗಳಿಸಿದರೆ, ಟೀಂ ಕಾವೇರಿ 5 ವಿಕೆಟ್‍ಗೆ 67 ರನ್ ಗಳಿಸಿ ಜಯ ಸಾಧಿಸಿತು. ಟೀಂ ಕಾವೇರಿ ಪರ ಯತಿನ್ 20 ರನ್ ಗಳಿಸಿದರೆ, ಪವನ್ 3 ವಿಕೆಟ್ ಪಡೆದರು.

ಕೆಡಿಕೆ ಬಾಯ್ಸ್ 4 ವಿಕೆಟ್‍ಗೆ 91 ರನ್ ಗಳಿಸಿದರು. ಕಾಫಿ ಲವರ್ಸ್ ತಂಡ 4 ವಿಕೆಟ್‍ಗೆ ಕೇವಲ 29 ರನ್ ಗಳಿಸಿ ಸೋಲನು ಭವಿಸಿತು. ಕೆಡಿಕೆ ಬಾಯ್ಸ್ ಪರ ಅಕ್ಷಯ್ ಪುತ್ತೂರು 15 ಎಸೆತಕ್ಕೆ 52 ರನ್ ಗಳಿಸಿ ಗಮನ ಸೆಳೆದರು. ಲೋಕೇಶ್ 2 ವಿಕೆಟ್ ಪಡೆದರು.

ಈವ್ನಿಂಗ್ ಕ್ರಿಕೆಟರ್ಸ್ 7 ವಿಕೆಟ್‍ಗೆ 65 ರನ್ ಬಾರಿಸಿತು. ಮುತ್ತಾರ್ಮುಡಿ ಸ್ಮ್ಯಾಷರ್ಸ್ 2 ವಿಕೆಟ್‍ಗೆ 67 ರನ್ ಜಯಗಳಿಸಿತು. ಮುತ್ತಾರ್ಮುಡಿ ಪರ ಚಂದನ್ 25 ರನ್ ಗಳಿಸಿದರು.

ಕಾಂತೂರು ಫ್ರೆಂಡ್ಸ್ 5 ವಿಕೆಟ್‍ಗೆ 53 ರನ್ ಗಳಿಸಿತು. ಕೆಜಿವೈವಿ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ 58 ರನ್ ಗಳಿಸಿ ಜಯಗಳಿಸಿತು. ಕೆಜಿವೈವಿ ಪರ ಮಿಕ್ಕಿ 16 ಎಸೆತಕ್ಕೆ 47 ರನ್ ಗಳಿಸಿದರು.

ಬಿಎಫ್‍ಎಎಂ ತಂಡ 5 ವಿಕೆಟ್‍ಗೆ 74 ರನ್ ಬಾರಿಸಿದರೆ, ನಮೋ ಕ್ರಿಕೆಟರ್ಸ್ ತಂಡ 2 ವಿಕೆಟ್‍ಗೆ 60 ರನ್ ಗಳಿಸಿ ಸೋಲನುಭವಿಸಿತು. ಬಿಎಫ್‍ಎಂಎ ಪರ ಪ್ರಗತ್ 20 ಎಸೆತಕ್ಕೆ 41 ರನ್ ಗಳಿಸಿದರು.

ಪೆರಾತ ಫ್ರೆಂಡ್ಸ್ ತಂಡ 2 ವಿಕೆಟ್‍ಗೆ 105 ರನ್ ಗಳಿಸಿದರೆ, ಟೀಂ ಕಾವೇರಿ ತಂಡ 5 ವಿಕೆಟ್‍ಗೆ 61 ರನ್ ಗಳಿಸಿ ಸೋಲನುಭವಿಸಿತು. ಪೆರಾತ ತಂಡದ ರವಿ ಬಾಳಾಡಿ 20 ಎಸೆತಕ್ಕೆ 52 ರನ್ ಗಳಿಸಿದರು.

ಕೆಡಿಕೆ ಬಾಯ್ಸ್ ತಂಡÀ 3 ವಿಕೆಟ್‍ಗೆ 102 ರನ್ ಗಳಿಸಿದರೆ, ಶೆಕಾ ತಂಡ 6 ವಿಕೆಟ್‍ಗೆ 30 ರನ್ ಮಾತ್ರ ಗಳಿಸಿ ಸೋಲುಕಂಡಿತು. ಕೆಡಿಕೆ ಪರ ಅಕ್ಷಯ್ ಪುತ್ತೂರು 20 ಎಸೆತಕ್ಕೆ 30 ರನ್ ಗಳಿಸಿದರು.

ಪೊನ್ನಚನ ತಂಡ 4 ವಿಕೆಟ್‍ಗೆ 91 ರನ್ ಗಳಿಸಿದರೆ, ಕೋಳಿಬೈಲ್ ತಂಡ 4 ವಿಕೆಟ್‍ಗೆ 94 ರನ್ ಗಳಿಸಿ ಗೆಲವು ಸಾಧಿಸಿತು. ಕೋಳಿಬೈಲು ಪರ ಹರ್ಷ 9 ಎಸೆತಕ್ಕೆ 31 ರನ್ ಬಾರಿಸಿದರು.

ಇಂದು ಸಮಾರೋಪ

ಗೌಡ ಕ್ರಿಕೆಟ್ ಹಬ್ಬದ ಸಮಾರೋಪ ಸಮಾರಂಭ ತಾ. 5 ರಂದು (ಇಂದು) ಸಂಜೆ 4 ಗಂಟೆಗೆ ನಡೆಯಲಿದೆ.

ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಾಸಕ ಕೆ.ಜಿ. ಬೋಪಯ್ಯ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಂ, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ನಿವೃತ್ತ ಮುಖ್ಯ ಶಿಕ್ಷಕ ಮೂಟೇರ ನಂಜುಂಡ, ವಿದ್ಯಾ ಸಂಘದ ಉಪಾಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಮೈಸೂರಿನ ಏಜುಕೇಟೈನರ್ ಯಾಲದಾಳು ಕುಮುದ ಜಯ ಪ್ರಶಾಂತ್, ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಶಿಸ್ತು ಸಮಿತಿ ಅಧ್ಯಕ್ಷ ಪೊಕ್ಕುಳಂಡ್ರ ಮನೋಜ್, ನ್ಯಾಯಿಕ ಸಮಿತಿ ಅಧ್ಯಕ್ಷ ಕೊಟ್ಟಕೇರಿಯನ ದಯಾನಂದ ಉಪಸ್ಥಿತರಿರುವರು.