ಕಾಕೋಟುಪರಂಬು (ವೀರಾಜಪೇಟೆ), ಮೇ 4: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ನಾಕೌಟ್ ಹಾಗೂ ಚಾಂಪಿಯನ್ಸ್ ಲೀಗ್ ಪಂದ್ಯಾಟದಲ್ಲಿ ಚೆಂದಂಡ, ಪರದಂಡ, ಚಂದುರ, ಕೋಟೇರ, ಪುದಿಯೊಕ್ಕಡ, ಅರೆಯಡ ತಂಡಗಳು ಮುನ್ನಡೆ ಸಾಧಿಸಿದೆ. ಪುದಿಯೊಕ್ಕಡ ಪರ ಅಂತರಾಷ್ಟ್ರೀಯ ಆಟಗಾರ ಪ್ರಧಾನ್ ಸೋಮಣ್ಣ ಹ್ಯಾಟ್ರಿಕ್ ಸಾಧನೆ ಮಾಡಿದರು.

ಚಾಂಪಿಯನ್ಸ್ ಲೀಗ್ ಪಂದ್ಯಾಟದಲ್ಲಿ ಚೇಂದಂಡ ತಂಡ 3-0 ಗೋಲುಗಳಿಂದ ಚೆಪ್ಪುಡಿರ ತಂಡವನ್ನು ಪರಾಭವ ಗೊಳಿಸಿತು. ಚೇಂದಂಡ ಪರ ಶಮ್ಮಿ (16.38ನಿ), ಮೋಕ್ಷಿತ್ (18ನಿ)ದಲ್ಲಿ ಗೋಲು ಬಾರಿಸಿದರು.

ಪರದಂಡ ತಂಡ 3-0 ಗೋಲುಗಳಿಂದ ಪಳಂಗಂಡ ತಂಡವನ್ನು ಪರಾಭವ ಗೊಳಿಸಿತು. ಪಳಂಗಂಡ ಪರ ಪ್ರಜ್ವಲ್ (32, 36ನಿ), ಅಯ್ಯಪ್ಪ (40ನಿ)ದಲ್ಲಿ ಗೋಲು ಬಾರಿಸಿದರು.

ನಾಕೌಟ್ ಪಂದ್ಯಾಟದಲ್ಲಿ ಚಂದುರ ತಂಡ 1-0 ಗೊಲಿನಿಂದ ಚೇಂದಿರ ತಂಡವನ್ನು ಮಣಿಸಿತು. ಚಂದುರ ಪರ ಪೂವಯ್ಯ (34ನಿ) ದಲ್ಲಿ ಗೋಲು ದಾಖಲಿಸಿದರು.

ಕೋಟೇರ ತಂಡ 1-0 ಗೋಲಿನಿಂದ ಕುಪ್ಪಂಡ (ಕೈಕೇರಿ) ತಂಡವನ್ನು ಪರಾಭವ ಗೊಳಿಸಿತು. ಕೋಟೇರ ಪರ ದಿಲೀಪ್ (26ನಿ) ದಲ್ಲಿ ಗೋಲು ದಾಖಲಿಸಿದರು.

ಪುದಿಯೊಕ್ಕಡ ತಂಡ 4-1 ಗೋಲುಗಳಿಂದ ಸೋಮೇಯಂಡ ತಂಡವನ್ನು ಸೋಲಿಸಿದರು. ಪುದಿಯೊಕ್ಕಡ ಪರ ಅಂತರಾಷ್ಟ್ರೀಯ ಆಟಗಾರ ಪ್ರಧಾನ್ ಸೋಮಣ್ಣ (23.33.37.40ನಿ)ದಲ್ಲಿ ಗೋಲು ದಾಖಲಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು.

ಅರೆಯಡ ತಂಡ 2-1 ಗೋಲುಗಳಿಂದ ಕಾಂಡಂಡ ತಂಡವನ್ನು ಪರಾಭವ ಗೊಳಿಸಿದರು. ಅರೆಯಡ ಪರ ಗಣೇಶ್ ಬೆಳ್ಳಿಯಪ್ಪ (19ನಿ), ಚಿಣ್ಣಪ್ಪ (38ನಿ), ಕಾಂಡಂಡ ಪರ ಅಪ್ಪಣ್ಣ (6ನಿ) ದಲ್ಲಿ ಗೋಲು ಬಾರಿಸಿ ಗೋಲಿನ ಅಂತರವನ್ನು ಕಡಿಮೆ ಗೊಳಿಸಿದರು.