ವೀರಾಜಪೇಟೆ: ವೀರಾಜಪೇಟೆ ಶಿವಕೇರಿಯಲ್ಲಿರುವ ಆದಿ ದಂಡಿನ ಮಾರಿಯಮ್ಮ ಮತ್ತು ಚಾಮುಂಡಿ (ಚೌಂಡಿ) ದೇವರ ವಾರ್ಷಿಕ ಮಹೋತ್ಸವ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ದೇವರ ಪಲ್ಲಕ್ಕಿಯನ್ನಿರಿಸಿ ಅಲಂಕೃತ ಮಂಟಪದ ಮೆರವಣಿಗೆಯು ಶಿವಕೇರಿಯಿಂದ ಹೊರಟು ಅಪ್ಪಯ್ಯ ಸ್ವಾಮಿ ರಸ್ತೆಯ ಮಾರ್ಗವಾಗಿ ತೆಲುಗರ ಬೀದಿಯಲ್ಲಿರುವ ಮಾರಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಜೈನರ ಬೀದಿ, ದೊಡ್ಡಟ್ಟಿ ಚೌಕಿ ಮುಖ್ಯ ರಸ್ತೆಗಾಗಿ ಮುರ್ನಾಡು ರಸ್ತೆಯಿಂದ ಛತ್ರಕೆರೆ, ಚಿಕ್ಕಪೇಟೆ ಮಾರ್ಗವಾಗಿ ಶಿವಕೇರಿಯಲ್ಲಿ ಮೆರವಣಿಗೆ ನಡೆಸಿದ ಬಳಿಕ ಹಿಂತಿರುಗಿ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಆದಿ ದಂಡಿನ ಮಾರಿಯಮ್ಮ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು. ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಸುಂಟಿಕೊಪ್ಪ: ಮಾದಾಪುರ ರಸ್ತೆಯ ಬಳಿಯಿರುವ ವೃಕ್ಷೋದ್ಭವ ಶ್ರೀ ಶಕ್ತಿ ಮಹಾ ಗಣಪತಿ ದೇವಸ್ಥಾನದ 14ನೇ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.

ಮಾದಾಪುರ ರಸ್ತೆಯ ಬಳಿಯಿರುವ ವೃಕ್ಷೋದ್ಭವ ಶ್ರೀ ಶಕ್ತಿ ಮಹಾ ಗಣಪತಿ ದೇವಸ್ಥಾನದ 14ನೇ ವಾರ್ಷಿಕೋತ್ಸವ ಅಂಗವಾಗಿ ತಳಿರು-ತೋರಣ, ಹೂ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ 8 ಗಂಟೆಗೆ ಪ್ರಾರ್ಥನೆ 8.15 ರಿಂದ 9.30 ರವರೆಗೆ ಗಣಹೋಮ, ಬೆಳಿಗ್ಗೆ 9.30 ರಿಂದ 11.30 ರವರೆಗೆ ನವಗ್ರಹ ಹೋಮ, 11.30 ರಿಂದ ಫಲಪಂಚಾಮೃತಾಭಿಷೇಕ, ನವಕ ಕಲಶಾಭಿಷೇಕ ಮಹಾಪೂಜೆ, ಮಹಾ ಮಂಗಳಾರತಿ, ಅಷ್ಟಾವಧಾನ ಸೇವೆ, ಮಧ್ಯಾಹ್ನ 1.45 ಕ್ಕೆ ಅನ್ನಸಂತರ್ಪಣೆ, ರಾತ್ರಿ 7.30 ಗಂಟೆಗೆ ಮಹಾ ಮಂಗಳಾರತಿಯೊಂದಿಗೆ ವಾರ್ಷಿಕ ಪೂಜೆಗೆ ಸಂಪನ್ನಗೊಂಡಿತು.

ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು. ಸುಂಟಿಕೊಪ್ಪ ಹಿರಿಯ ಪುರೋಹಿತರಾದ ಗಣೇಶ ಶರ್ಮ ಮತ್ತು ಕೃಷ್ಣಮೂರ್ತಿ ಭಟ್ ಪೂಜಾ ಕೈಂಕರ್ಯ ನಡೆಸಿಕೊಟ್ಟರು.

ದೇವಸ್ಥಾನ ಟ್ರಸ್ಟಿ ಸಮಿತಿ ಸದಸ್ಯರಾದ ಎ. ಲೋಕೇಶ್‍ಕುಮಾರ್, ಸಮಿತಿ ಅಧ್ಯಕ್ಷ ಬಿ.ಎಸ್. ಸದಾಶಿವ ರೈ, ಉಪಾಧ್ಯಕ್ಷರುಗಳಾದ ಮಂಜುನಾಥ್, ಕೆ.ಪಿ. ವಿನೋದ್, ದಿವಾಕರ ಪೂಜಾರಿ, ಅಯ್ಯಪ್ಪನ್, ಪ್ರಧಾನ ಕಾರ್ಯದರ್ಶಿ ಶಿವರಾಮನ್ (ಶಿವಮಣಿ), ಸಹ ಕಾರ್ಯದರ್ಶಿ ವಿ. ಶಿವಕುಮಾರ್, ಖಜಾಂಚಿ ಬಿ.ಎಸ್. ರಮೇಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ.ಬಿ. ಚಂದ್ರಶೇಖರ್, ಎ. ಶ್ರೀಧರ್ ಕುಮಾರ್, ಎಂ. ಹರೀಶ್, ಟಿ.ಕೆ. ವಿನೋದ್, ಎಂ. ವಿಘ್ನೇಶ್, ಮನು ಅಚ್ಚಮಯ್ಯ, ಎಂ. ಮುರುಗ, ಪಿ. ಕಿಶೋರ್ ರಾಮಯ್ಯ, ಯಶೋಧರ ಪೂಜಾರಿ, ಸುರೇಶ್ ಚಂದು, ಆರ್. ನಿರಂಜನ್ ಡಿ.ಕೆ. ರಜಿನೀಶ್ ಮತ್ತಿತರರು ಇದ್ದರು.

ನಾಪೋಕ್ಲು: ಅಮ್ಮನೂರು ದೇವಿಯ ಪೂಜೆಯು ಇಲ್ಲಿನ ಬೇತು ಗ್ರಾಮದಲ್ಲಿ ತಾ. 10 ರಂದು ನಡೆಯಲಿದೆ.

ಸಿದ್ದಾಪುರ: ಚೆನ್ನಂಗಿ ಗುಡ್ಲೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವ ತಾ. 8 ಹಾಗೂ 9 ರಂದು ಬಿಳಿಗಿರಿಯ ಶ್ರೀ ಉದಯಕುಮಾರ್ ತಂತ್ರಿ ನೇತೃತ್ವದಲ್ಲಿ ನಡೆಯಲಿದೆ.

ತಾ. 8 ರಂದು ಸಂಜೆ 6 ಗಂಟೆಗೆ ಗಣಪತಿ ಪೂಜೆ, ವಾಸ್ತುಪೂಜೆ, ಮಹಾಪೂಜೆ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.

ತಾ. 9 ರಂದು ಬೆಳಿಗ್ಗೆ 9 ಗಂಟೆಗೆ ಗಣಪತಿ ಹೋಮ, ನವಕ ಕಲಶ, ರುದ್ರಾಭಿಷೇಕ, ನಾಗ ತಂಬಿಲ, 11 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ.