ಸೋಮವಾರಪೇಟೆ, ಮೇ 4: ಮನೆ ಮುಂಭಾಗದ ಚರಂಡಿಯ ಪೈಪ್‍ನೊಳಗೆ ಸೇರಿಕೊಂಡು ಮನೆಮಂದಿಗೆ ಭಯಾತಂಕ ಸೃಷ್ಟಿಸಿದ್ದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೋಮವಾರಪೇಟೆಯ ಸ್ನೇಕ್ ರಘು ಅವರು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟರು.

ಭಾಗಮಂಡಲ ಸಮೀಪದ ಸಣ್ಣಪುಲಿಕೋಟು ಗ್ರಾಮದ ಪಂದ್ಯಂಡ ಪೂವಯ್ಯ ಎಂಬವರ ಎಸ್ಟೇಟ್ ಮನೆಯ ಮುಂಭಾಗದ ಚರಂಡಿ ಯಲ್ಲಿ ಸೇರಿಕೊಂಡಿದ್ದ ಕಾಳಿಂಗ ಸರ್ಪವನ್ನು ಸೆರೆಹಿಡಿದ ಸ್ನೇಕ್ ರಘು ಅವರು, ಭಾಗಮಂಡಲ ವಲಯ ಅರಣ್ಯ ಸಿಬ್ಬಂದಿಗಳ ಸಮ್ಮುಖದಲ್ಲಿ ಹಾವನ್ನು ಸುರಕ್ಷಿತವಾಗಿ ಪಟ್ಟಿಘಾಟ್ ಮೀಸಲು ಅರಣ್ಯಕ್ಕೆ ಬಿಟ್ಟರು.

ಉರಗಗಳು ಕಂಡುಬಂದರೆ ಅವುಗಳನ್ನು ಕೊಲ್ಲದೇ ತಮಗೆ ಮಾಹಿತಿ ನೀಡಿದರೆ (ಮೊ. 9844558693) ಅವುಗಳನ್ನು ಸುರಕ್ಷಿತವಾಗಿ ಹಿಡಿದು ಸ್ಥಳಾಂತರಿಸಲಾಗುವದು ಎಂದು ಸ್ನೇಕ್ ರಘು ತಿಳಿಸಿದ್ದಾರೆ.