ಗೋಣಿಕೊಪ್ಪ ವರದಿ, ಮೇ 4: ಬಾಳೆಲೆ ಅಂಗನವಾಡಿ ಕೇಂದ್ರದ ಮಕ್ಕಳ ಚಟುವಟಿಕೆಗಳಿಗೆ ಬಳಕೆಯಾಗುವಂತ ವಸ್ತುಗಳನ್ನು ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ನೀಡಲಾಯಿತು. ಕಾರ್ಪೆಟ್, ಮಕ್ಕಳ ಚೇರ್, ಹೊದಿಕೆ, ಕುಡಿಯುವ ನೀರಿನ ಫಿಲ್ಟರ್ ವಿತರಣೆ ಮಾಡಲಾಯಿತು.

ವಿತರಣೆ ಕಾರ್ಯಕ್ರಮದಲ್ಲಿ ಬಾಳೆಲೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಾಂಡೇರ ಕುಸುಮ, ಉಪಾಧ್ಯಕ್ಷ ಕೊಕ್ಕೇಂಗಡ ರಂಜನ್, ಸದಸ್ಯರುಗಳಾದ ಅಚ್ಚುತ್ತಾ, ಸುಶೀಲ, ಗಿರಿಜಾ, ರೋಟರಿಕ್ಲಬ್ ಅಧ್ಯಕ್ಷ ದಿಲನ್ ಚೆಂಗಪ್ಪ, ಸದಸ್ಯರುಗಳಾದ ಚಿಮ್ಮಣಮಾಡ ವಾಸು, ಪ್ರಮೋದ್ ಕಾಮತ್ ಉಪಸ್ಥಿತರಿದ್ದರು.