ಸೋಮವಾರಪೇಟೆ,ಏ.30: ಚಾಲಕನ ನಿಯಂತ್ರಣದ ತಪ್ಪಿದ ಮಾರುತಿ ಓಮ್ನಿ ಕಾರು ರಸ್ತೆ ಬದಿಯ ದಿಬ್ಬಕ್ಕೆ ಗುದ್ದಿ, ಮಗುಚಿ ಬಿದ್ದ ಘಟನೆ ಮಾದಾಪುರ ಸಮೀಪದ ಇಗ್ಗೋಡ್ಲು ಗ್ರಾಮದಲ್ಲಿ ನಡೆದಿದ್ದು, ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಇಂದು ಮಧ್ಯಾಹ್ನ 2.30ರ ಸುಮಾರಿಗೆ ಬಿಳಿಗೇರಿ ಗ್ರಾಮದ ರಾಜಣ್ಣ ಅವರು ಚಾಲಿಸುತ್ತಿದ್ದ ಮಾರುತಿ ಓಮ್ನಿ ಕಾರು ಇಗ್ಗೋಡ್ಲು ಗ್ರಾಮದ ಪಾಸುರ ಗಣೇಶ್ ಅವರ ಮನೆಯ ಮುಂಭಾಗ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿಯ ದಿಬ್ಬಕ್ಕೆ ಗುದ್ದಿ, ಮಗುಚಿ ಬಿದ್ದಿದೆ. ಪರಿಣಾಮ ಕಾರು ನಜ್ಜುಗುಜ್ಜಾಗಿದ್ದು, ಯಾವದೇ ಅಪಾಯವಿಲ್ಲದೇ ಚಾಲಕ ಪಾರಾಗಿದ್ದಾರೆ. ಸ್ಥಳಕ್ಕೆ ಮಾದಾಪುರ ಉಪ ಠಾಣೆಯ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.