ಮಡಿಕೇರಿ, ಏ. 30: ಮರಗೋಡುವಿನ ಹೂಗುಚ್ಚ ಪೈಸಾರಿ ಎಂಬಲ್ಲಿನ ನಿವಾಸಿ, ಭವಾನಿ ಎಂಬ ಮಹಿಳೆಗೆ ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ನಡೆಸಿ, ಜೀವಭಯ ಉಂಟು ಮಾಡಿದ್ದಲ್ಲದೆ ಕೊಲೆ ಯತ್ನ ಎಸಗಿರುವ ಆರೋಪ ಮೇರೆಗೆ, ಅಲ್ಲಿನ ಮುತ್ತಪ್ಪ ಹಾಗೂ ಮಂಜುನಾಥ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಘಟನೆ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚೇತನ್ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು 15 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.