ನಾಪೆÇೀಕ್ಲು, ಏ. 28: ಕಕ್ಕಬ್ಬೆ ದಿ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್ ವತಿಯಿಂದ ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ತಾ. 23 ರಿಂದ ನಡೆದ ಹೈಲ್ಯಾಂಡರ್ಸ್ ಇನ್ವಿಟೇಶನ್ ಕಪ್ ಮತ್ತು ಚಾರಿಟಿ ಟೂರ್ನಮೆಂಟ್‍ನ ಫೈನಲ್ ಪಂದ್ಯಾಟವು ಕೊಡವ ಹಾಕಿ ನಮ್ಮೆಯನ್ನು ಪ್ರೇಕ್ಷಕರಿಗೆ ನೆನಪಿಸುವಲ್ಲಿ ಯಶಸ್ವಿಯಾಯಿತು.2018ರಲ್ಲಿ ಜಿಲ್ಲೆಯಲ್ಲಿ ನಡೆದ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಕೊಡವ ಹಾಕಿ ನಮ್ಮೆಯನ್ನು ಒಂದು ವರ್ಷಗಳ ಕಾಲ ಮುಂದೂಡಲಾಗಿತ್ತು. ಆದರೆ ಪ್ರಕೃತಿ ವಿಕೋಪದಲ್ಲಿ ಸಿಲುಕಿದ ಕೊಡವ ಕುಟುಂಬಗಳನ್ನು ಸಂತೈಸಲು ಮತ್ತು ಅವರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ದಿ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್ ವಿಕೋಪಕ್ಕೆ ಒಳಗಾದ 14 ಕೊಡವ ಕುಟುಂಬಗಳ ನಡುವೆ ಇನ್ವಿಟೇಶನ್ ಕಪ್ ಹಾಗೂ ಇತರÀ 6 ಕುಟುಂಬ ತಂಡಗಳ ನಡುವೆ ಚಾರಿಟಿ ಕಪ್ ಪಂದ್ಯಾಟವನ್ನು ನಾಪೆÇೀಕ್ಲು ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿತ್ತು. ಇಂದು ನಡೆದ ಫೈನಲ್ ಪಂದ್ಯಾಟದಲ್ಲಿ ಇನ್ವಿಟೇಶನ್ ಕಪ್‍ನಲ್ಲಿ ಮುಕ್ಕಾಟಿರ ಮತ್ತು ತಂಬುಕುತ್ತಿರ ತಂಡಗಳ ನಡುವೆ ನಡೆದು ತಂಬುಕುತ್ತಿರ ತಂಡವು ಮುಕ್ಕಾಟಿರ ತಂಡವನ್ನು 2-0 ಗೋಲುಗಳಿಂದ ಪರಾಭವಗೊಳಿಸಿ ವಿಜಯಪತಾಕೆ ಹಾರಿಸಿತು. ತಂಬುಕುತ್ತಿರ ತಂಡದ ಪರ ಸುಖೇಶ್ 9 ಮತ್ತು ದೀಪು 10ನೇ ನಿಮಿಷದಲ್ಲಿ ತಲಾ ಒಂದೊಂದು ಗೋಲು ದಾಖಲಿಸಿ ವಿಜಯದ ನಗೆ ಬೀರಿದರು. ಮುಕ್ಕಾಟಿರ ತಂಡಕ್ಕೆ 6 ಪೆನಾಲ್ಟಿ ಕಾರ್ನರ್ ದೊರೆತರೂ ಯಾವದೇ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.

ಚಾಂಪಿಯನ್‍ಗಳ ಸೆಣಸಾಟ: ಕೊಡವ ಕೌಟುಂಬಿಕ ಹಾಕಿ ನಮ್ಮೆಯಲ್ಲಿ ಚಾಂಪಿಯನ್ ಪಟ್ಟ ಪಡೆದ ಕಲಿಯಂಡ ಮತ್ತು ಚೆಪ್ಪುಡಿರ ತಂಡ ಗಳು ಚಾರಿಟಿ ವಾರಿಯರ್ಸ್ ಕಪ್‍ನ ಫೈನಲ್ ಪಂದ್ಯದಲ್ಲಿ ಮದಗಜಗಳಂತೆ ಸೆಣಸಾಡಿದವು. (ಮೊದಲ ಪುಟದಿಂದ) ಉಭಯ ತಂಡಗಳು ಕೊನೆಯವರೆಗೂ ಗೋಲು ದಾಖಲಿಸುವಲ್ಲಿ ವಿಫಲವಾದವು. ಕಲಿಯಂಡ ತಂಡಕ್ಕೆ 4 ಹಾಗೂ ಚೆಪ್ಪುಡಿರ ತಂಡಕ್ಕೆ 3 ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತಾದರೂ ಯಾವದೇ ಫಲ ದೊರೆಯಲಿಲ್ಲ. ಆಟ ಕೊನೆಗೊಂಡರೂ ಯಾವದೇ ತಂಡ ಗೋಲು ದಾಖಲಿಸದ ಕಾರಣ ಟೈಬ್ರೇಕರ್ ನಿಯಮವನ್ನು ಅಳವಡಿಸಲಾಯಿತು. ಟೈಬ್ರೇಕರ್‍ನಲ್ಲಿ 4-3 ಗೋಲಿನ ಅಂತರದಿಂದ ಕಲಿಯಂಡ ತಂಡವು ಚೆಪ್ಪುಡಿರ ತಂಡವನ್ನು ಸೋಲಿಸಿ ಗೆಲುವಿನ ನಗೆ ಬೀರಿತು.

ಇನ್ವಿಟೇಶನ್ ಕಪ್‍ನಲ್ಲಿ ಓಡಿಯಂಡ ತಿಮ್ಮಯ್ಯ ಬೆಸ್ಟ್ ಗೋಲ್ ಕೀಪರ್, ಮುಕ್ಕಾಟಿರ ಬೋಪಣ್ಣ ಬೆಸ್ಟ್ ಪ್ಲೇಯರ್, ಮುಕ್ಕಾಟಿರ ಕಾರ್ಯಪ್ಪ ಬೆಸ್ಟ್ ಬ್ಯಾಕ್, ತಂಬುಕುತ್ತಿರ ಉದಯ ಬೆಸ್ಟ್ ಫಾರ್ವರ್ಡ್ ಪ್ರಶಸ್ತಿ ಪಡೆದರೆ, ವಾರಿಯರ್ಸ್ ಕಪ್‍ನಲ್ಲಿ ಚೆಪ್ಪುಡಿರ ಚೇತನ್ ಚಿಣ್ಣಪ್ಪ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದರು.

ಪ್ರಕೃತಿ ಮುನಿದರೆ ಉಳಿಗಾಲವಿಲ್ಲ: ನಾಣಯ್ಯ

ಪ್ರಕೃತಿಗೆ ನಾವು ತೊಂದರೆ ನೀಡಿದರೆ ಪ್ರಕೃತಿ ಎಂದಿಗೂ ನಮ್ಮನ್ನು ಕ್ಷಮಿಸುವದಿಲ್ಲ. ಇದಕ್ಕೆ ಕಳೆದ ವರ್ಷ ಕೊಡಗಿನಲ್ಲಿ ನಡೆದ ಪ್ರಕೃತಿ ವಿಕೋಪವೇ ಸಾಕ್ಷಿ ಎಂದು ಪಂದ್ಯಾಟದ ಮುಖ್ಯ ಅತಿಥಿ ಬೆಂಗಳೂರಿನ ಉದ್ಯಮಿ ಮಾಳೆಯಂಡ ಸಿ.ನಾಣಯ್ಯ ಅಭಿಪ್ರಾಯಪಟ್ಟರು.

ಕೊಡವರು ಮದುವೆ ಸಮಾರಂಭಗಳಲ್ಲಿ ಮದ್ಯ ಮೊದಲಾದವುಗಳಿಗೆ ಹೆಚ್ಚಿನ ವೆಚ್ಚ ಮಾಡುತ್ತಾರೆ. ಅದನ್ನು ಕಡಿಮೆಗೊಳಿಸಿ ಕಷ್ಟದಲ್ಲಿದ್ದವರಿಗೆ ಸಹಕಾರ ನೀಡಬೇಕು. ಮಕ್ಕಳನ್ನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪೆÇ್ರೀತ್ಸಾಹಿಸಬೇಕು ಎಂದರು.

ಬೆಂಗಳೂರಿನ ಎ.ಸಿ.ಪಿ ಕೆ.ಎಂ.ರಮೇಶ್ ಮಾತನಾಡಿ ಹಾಕಿ ರಾಷ್ಟ್ರೀಯ ಕ್ರೀಡೆ. ಕೊಡಗಿನಲ್ಲಿ ಕೊಡವರು ಇದನ್ನು ಕ್ರೀಡಾ ಹಬ್ಬವಾಗಿ ಆಚರಿಸುವದರ ಮೂಲಕ ಇಡೀ ವಿಶ್ವದಲ್ಲಿಯೇ ಖ್ಯಾತಿ ಪಡೆದಿದ್ದಾರೆ. ಟ್ರೋಫಿ ಗೆಲ್ಲುವದಕ್ಕಿಂತ ಇವರು ವಿಶ್ವದ ಮನ್ನಣೆಯನ್ನು ಗೆದ್ದಿದ್ದಾರೆ ಎಂದರು. ಕೊಡಗಿನ ಸೈನಿಕರ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಇದೆ. ಸಂಸ್ಕಾರದ ಟ್ರೋಫಿಯ ಮುಂದೆ ಯಾವ ಟ್ರೋಫಿಗೂ ಬೆಲೆಯಿಲ್ಲ ಎಂದು ಹೇಳಿದರು.

ಆಕರ್ಷಕ ಬಹುಮಾನ: ಪಂದ್ಯಾಟದಲ್ಲಿ ವಿಜೇತರಾದ ತಂಬುಕುತ್ತಿರ ಮತ್ತು ಕಲಿಯಂಡ ತಂಡವರಿಗೆ ತಲಾ 50,000 ರೂ. ನಗದು ಹಾಗೂ ಟ್ರೋಫಿಯನ್ನು ನೀಡಿದರೆ, ದ್ವಿತೀಯ ಸ್ಥಾನ ಪಡೆದ ಮುಕ್ಕಾಟಿರ ಮತ್ತು ಚೆಪ್ಪುಡಿರ ತಂಡಕ್ಕೆ ತಲಾ 25,000 ರೂ. ನಗದು ಮತ್ತು ಟ್ರೋಫಿಯನ್ನು ನೀಡಲಾಯಿತು.

ತಾಂತ್ರಿಕ ವಿಭಾಗ: ಪಂದ್ಯಾಟದ ತಾಂತ್ರಿಕ ನಿರ್ದೇಶಕರಾಗಿ ಬಡಕಡ ಸುರೇಶ್ ಬೆಳ್ಯಪ್ಪ ನಿರ್ವಹಿಸಿದರೆ, ತೀರ್ಪುಗಾರರಾಗಿ ಬಡಕಡ ದೀನಾ ಪೂವಯ್ಯ, ಅಂಜಪರವಂಡ ಶರಣ್ ಕಾರ್ಯಪ್ಪ, ಕುಶಾಲಪ್ಪ, ಅರೆಯಡ ಬೇಬಿ ಚಿಣ್ಣಪ್ಪ, ಅರೆಯಡ ಗಿರೀಶ್, ಕಲಿಯಂಡ ಬಿದ್ದಪ್ಪ, ಪಳೆಯಂಡ ಕೃಪನ್ ಈರಪ್ಪ, ಬಡಕಡ ಗಣಪತಿ ನಿರ್ವಹಿಸಿದರು. ವೀಕ್ಷಕ ವಿವರಣೆಗಾರರಾಗಿ ಚೆಪ್ಪುಡಿರ ಕಾರ್ಯಪ್ಪ, ಮೂಡೆರ ಹರೀಶ್ ಕಾಳಯ್ಯ, ಕುಲ್ಲೇಟಿರ ಅರುಣ್ ಬೇಬ ಕರ್ತವ್ಯ ನಿರ್ವಹಿಸಿದರು. ಮೈದಾನದ ನಿರ್ವಹಣೆಯನ್ನು ಟಾಟಾ ಕಾಫಿ ಸಂಸ್ಥೆಯ ರಾಜು, ಕೋಟೆರ ಸುರೇಶ್ ಚಂಗಪ್ಪ, ಕುಂಡ್ಯೋಳಂಡ ಜಯ ಪೂವಯ್ಯ, ಚೆಯ್ಯಂಡ ರಘು ತಿಮ್ಮಯ್ಯ ವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಕ್ಕಬ್ಬೆ ದಿ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್ ಅಧ್ಯಕ್ಷ ಅಪ್ಪಾರಂಡ ಸಾಗರ್ ಗಣಪತಿ ವಹಿಸಿದ್ದರು.

ವೇದಿಕೆಯಲ್ಲಿ ಮೈಸೂರಿನ ವಿದ್ಯಾಶ್ರಮದ ಪ್ರಾಂಶುಪಾಲೆ ಖುಷಿ, ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಪೆÇರುಕೊವಂಡ ಬೋಪಣ್ಣ, ಕಲಿಯಂಡ ಸಿ.ನಾಣಯ್ಯ, ನಾಯಡ ವಾಸು ನಂಜಪ್ಪ, ಚೆಪ್ಪುಡಿರ ಸುಭಾಶ್ ಮುತ್ತಣ್ಣ, ನಾಪೆÇೀಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಇದ್ದರು.

ಕಲಿಯಂಡ ಬೀನಾ ನವೀನ್ ಪ್ರಾರ್ಥನೆ, ಬೊಳಿಯಾಡಿರ ಸಂತು ಸುಬ್ರಮಣಿ ಸ್ವಾಗತ, ಅಪ್ಪಾರಂಡ ಸುಮನ್ ಗಣಪತಿ, ಅರೆಯಡ ಬಬಿತಾ ಜೀವನ್, ಕಂಬೆಯಂಡ ಡೀನಾ ಬೋಜಮ್ಮ ನಿರೂಪಿಸಿ, ವಂದಿಸಿದರು.

-ಪಿ.ವಿ.ಪ್ರಭಾಕರ್