ಚೆಟ್ಟಳ್ಳಿ, ಏ. 28: ಕಡಂಗ ಪ್ರೌಢ ಶಾಲಾ ಮೈದಾನದಲ್ಲಿ ಅರಫಾ ಫ್ರೆಂಡ್ಸ್ ವತಿಯಿಂದ ಕಳೆದ ಒಂದು ವಾರದಿಂದ ನಡೆದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಅಂತಿಮ ಪಂದ್ಯಾಟದಲ್ಲಿ ಕೆ.ವೈ.ಸಿ.ಸಿ ಕಡಂಗ ತಂಡವು ಆಶಸ್ ಗೋಣಿಕೊಪ್ಪ ತಂಡವನ್ನು ಮಣಿಸಿ 16 ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಆಶಸ್ ಗೋಣಿಕೊಪ್ಪ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿತು.ಫೈನಲ್ ಪಂದ್ಯಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಶಸ್ ತಂಡವು 7 ಓವರುಗಳಿಗೆ 26 ಗಳಿಸಿತು.ಎದುರಾಳಿ ಕೆ.ವೈ.ಸಿ.ಸಿ ತಂಡವು ಆರಂಭಿಕ ಆಟಗಾರರಾದ ನೌಷಾದ್ ಹಾಗೂ ಅಸ್ಕರ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 3 ಓವರುಗಳಿಗೆ ಗುರಿ ತಲುಪಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ತೃತೀಯ ಸ್ಥಾನಕ್ಕಾಗಿ ನಡೆದ, ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡ ತಂಡಗಳಾದ ಬ್ಲ್ಯಾಕ್ ಕೋಬ್ರಾ ಹಾಗೂ ಕೌವ್ ಬಾಯ್ಸ್ ನಡುವಿನ ಪಂದ್ಯದಲ್ಲಿ ಕೋಬ್ರಾ ತಂಡ ಗೆಲವು ಸಾಧಿಸಿ ತೃತೀಯ ಸ್ಥಾನ ಪಡೆದರೆ, ಕೌವ್ ಬಾಯ್ಸ್ ತಂಡ ನಾಲ್ಕನೇ ಸ್ಥಾನವನ್ನು ಪಡೆಯಿತು.ಕ್ರೀಡಾಕೂಟದ ಕಮಲ್ ಕ್ಯಾಚ್ ಪ್ರಶಸ್ತಿಯನ್ನು ಆಶಸ್ ತಂಡದ ಜಂಶೀರ್, ಬೆಸ್ಟ್ ಕೀಪರ್ ಕೋಬ್ರಾ ತಂಡದ ನಾಸೀರ್, ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಕೆ.ವೈ.ಸಿ.ಸಿ ತಂಡದ ನೌಷಾದ್, ಅತ್ಯುತ್ತಮ ಧಾಳಿಕಾರ ಕೌವ್ ಬಾಯ್ಸ್ ತಂಡದ ನವಾಫ್, ಸ್ಟೈಲಿಶ್ ಪ್ಲೆಯರ್ ಆಫ್ ದಿ ಟೂರ್ನಮೆಂಟ್ ನೌಷಾದ್ ಅರಫಾ,
(ಮೊದಲ ಪುಟದಿಂದ) ಬೆಸ್ಟ್ ಬ್ಯಾಟ್ಸ್ ಮ್ಯಾನ್ ಆಶಸ್ ಗೋಣಿಕೊಪ್ಪ ತಂಡದ ಫಾಯಿಸ್, ಕ್ರೀಡಾ ಕೂಟದಲ್ಲಿ ಅರ್ಧಶತಕ ಬಾರಿಸಿದ ಆಟಗಾರ ಕೆ.ವೈ.ಸಿ.ಸಿ ತಂಡದ ನೌಷಾದ್ ಕಡಂಗ, ಬೆಸ್ಟ್ ಟೀಂ ಮಾಲ್ದಾರೆ, ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಅಸ್ಕರ್ ಹಾಗೂ ಮ್ಯಾನ್ ಆಪ್ ದಿ ಸೀರಿಯಸ್ ಪ್ರಶಸ್ತಿಯನ್ನು ಕೆ.ವೈ.ಸಿ .ಸಿ ತಂಡದ ನೌಷಾದ್ ಪಡೆದುಕೊಂಡರು.
ಕ್ರೀಡಾಕೂಟದ ವೀಕ್ಷಕ ವಿವರಣೆಗಾರರಾಗಿ ಹರ್ಷಾದ್ ಸಿ.ಎಂ, ನೌಫಲ್ , ಅಸ್ಕರ್ ದುಬೈ , ಮನಾಫ್, ಸ್ಕೋರರ್ ಆಗಿ ಜುನೈದ್ ಹಾಗೂ ತೀರ್ಪುಗಾರರಾಗಿ ಅಹ್ಮದ್, ಸತ್ತಾರ್, ಕರೀಂ ನೌವಾಫ್ ಕಾರ್ಯ ನಿರ್ವಹಿಸಿದರು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ಅರಫಾ ಫ್ರೆಂಡ್ಸ್ ಅಧ್ಯಕ್ಷ ಅಬ್ದುರಹಮಾನ್ ಅರಫಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಕೀಲರಾದ ಕುಂಞÂ ಅಬ್ದುಲ್ಲಾ ಕೊಡಗು ಮುಸ್ಲಿಂ ಕಪ್ ಸಂಸ್ಥಾಪಕ ರಶೀದ್ ಎಡಪಾಲ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ.ಸಲಾಂ, ಅರಫಾ ಫ್ರೆಂಡ್ಸ್ ಉಪಾಧ್ಯಕ್ಷರಾದ ಸಮೀರ್, ವೀರಾಜಪೇಟೆ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುರಹಮಾನ್, ಜಮಾಹತ್ ಅಧ್ಯಕ್ಷÀ ಅಬೂಬಕರ್, ಸಬೀರ್ ಪತ್ರಕರ್ತ ಇಸ್ಮಾಯಿಲ್ ಕಂಡಕರೆ, ಖಾದರ್ ಹಾಕತ್ತೂರು, ಮೊಹಿದ್ದೀನ್ ಹಾಗೂ ಛಾಯಾಗ್ರಾಹಕ ರಶೀದ್ ಕೊಳಕೇರಿ ಇದ್ದರು.
ಅರಫಾ ಕಡಂಗ ಫ್ರೆಂಡ್ಸ್ ಅಧ್ಯಕ್ಷ ಅಬ್ದುರಹಮಾನ್ ಅರಫಾ, ಕೊಡಗು ಮುಸ್ಲಿಂ ಕಪ್ ಸಂಸ್ಥಾಪಕ ರಶೀದ್ ಎಡಪಾಲ ಹಾಗೂ ಛಾಯಾಗ್ರಹಕ ರಶೀದ್ ಕೊಳಕೇರಿ ಅವರನ್ನು ಸನ್ಮಾನಿಸಲಾಯಿತು. -ಕೆ.ಎಂ ಇಸ್ಮಾಯಿಲ್ ಕಂಡಕರೆ