ಮಡಿಕೇರಿ, ಏ. 29: ಇಲ್ಲಿನ ವಾಂಡರರ್ಸ್ ಸ್ಪೋಟ್ಸ್ ಕ್ಲಬ್ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 25ನೇ ವರ್ಷದ ಉಚಿತ ಶಿಬಿರದ ಅಂಗವಾಗಿ ಜಿಲ್ಲೆಯ ವಿವಿಧೆಡೆಯ ಶಿಬಿರಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಹಾಕಿ ಪಂದ್ಯಾವಳಿಯಲ್ಲಿ ಬಾಲಕಿಯರ ವಿಭಾಗದ ಸಿ.ವಿ. ಶಂಕರ್ ಹಾಕಿ ಪ್ರಶಸ್ತಿಯನ್ನು ವಾಂಡರರ್ಸ್ ತಂಡ ಪಡೆದುಕೊಂಡಿತು. ಬಾಲಕ ವಿಭಾಗದ ಬಿ.ಕೆ. ಸುಬ್ಬಯ್ಯ ಹಾಕಿ ಪ್ರಶಸ್ತಿಯನ್ನು ಪೊನ್ನಂಪೇಟೆ ತಂಡ ಪಡೆದುಕೊಂಡಿತು.