ಗೋಣಿಕೊಪ್ಪಲು, ಏ. 28: ಇತಿಹಾಸ ಪ್ರಸಿದ್ಧ ವೀರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮದ ಶ್ರೀ ಭಗವತಿ ದೇವರ ಉತ್ಸವ ವಿಜೃಂಭಣೆಯಿಂದ ಜರುಗಿತು. 8 ದಿನಗಳ ಕಾಲ ನಡೆದ ದೇವರ ಉತ್ಸವದಲ್ಲಿ ಗ್ರಾಮದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರಿಗೆ ವಿವಿಧ ಪೂಜಾ ಕೈಂಕರ್ಯ ನೆರವೇರಿಸಿದರು.ಉತ್ಸವದ ಅಂಗವಾಗಿ ದೇವರ ಬೇಡು ಹಬ್ಬ, ಪರಿಕೆ ಬೊಳಕ್, ನೆರಪು ಎತ್ತುಪೋರಾಟಗಳು ನಡೆಯಿತು. ಅಂತಿಮ ದಿನದಂದು ದೇವರ ಪ್ರದಕ್ಷಿಣೆ, ದೇವರ ನೃತ್ಯ ಬಲ, ಕುದುರೆ ಆನೆಯನ್ನು ಹೊತ್ತು ದೇವಾಲಯದ ಪ್ರದಕ್ಷಿಣೆ, ವಸಂತ ಪೂಜೆ, ಅಲಂಕಾರ ಪೂಜೆ ನಡೆಯಿತು.