ಶ್ರೀಮಂಗಲ, ಏ. 28: ಕೊಡವ ತಕ್ಕ್ ಎಳ್ತ್‍ಕಾರಡ ಕೂಟ, ಮೈಸೂರು ಕೊಡವ ಸಮಾಜ ಹಾಗೂ ಲೋಪಮುದ್ರೆ ಕೊಡವ ಸಂಘ, ಮೈಸೂರು. ಈ ಮೂರು ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ತಾ. 30 ರಂದು (ನಾಳೆ) ಪೂರ್ವಾಹ್ನ 10.30 ಗಂಟೆಗೆ ವಿಶೇಷ ಕೊಡವ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ಈ ಸಂದರ್ಭ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆಯ 158ನೇ ಹೆಜ್ಜೆಯ ಪುಸ್ತಕವಾಗಿ ಲೇಖಕಿ ಪೆಮ್ಮಂಡ ಮೀರಾ ಬಿದ್ದಪ್ಪ ಬರೆದ ನೂತನ ಪುಸ್ತಕ ಹಾಗೂ 159ನೇ ಹೆಜ್ಜೆಯಾಗಿ ಲೇಖಕಿ ಜಮ್ಮಡ ಬಬಿತಾ ಪೂವಣ್ಣ ಅವರ ಪುಸ್ತಕ ಬಿಡುಗಡೆಯಾಗಲಿದೆ. ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜು ಹಾಗೂ ಸಾರ್ವಜನಿಕವೆಂಬ ಮೂರು ವಿಭಾಗದಲ್ಲಿ ಕೊಡವ ಭಾಷೆಯ ಹಾಡುಗಾರಿಕೆ, ಓದುವದು ಹಾಗೂ ಆಶುಭಾಷಣ ಸ್ಪರ್ಧೆಯು ನಡೆಯಲಿದ್ದು, ಪ್ರತಿ ವಿಭಾಗವಾರು ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುವದು. ಕೊಡವ ತಕ್ಕ್ ಎಳ್ತ್‍ಕಾರಡ ಕೂಟ ಇದುವರೆಗೆ ಬಿಡುಗಡೆ ಮಾಡಿದ ಪುಸ್ತಕಗಳು, ಧ್ವನಿಸುರುಳಿ ಹಾಗೂ ಸಿ.ಡಿ.ಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಇರುತ್ತದೆ.

ಕೂಟದ ಅಧ್ಯಕ್ಷೆ ಚೆಟ್ಟಂಗಡ ರವಿ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೈಸೂರು ಕೊಡವ ಸಮಾಜದ ಅಧ್ಯಕ್ಷ ಬಲ್ಯಮಂಡ ಎಂ. ನಾಣಯ್ಯ, ಲೋಪಮುದ್ರೆ ಕೊಡವ ಸಂಘದ ಅಧ್ಯಕ್ಷ ಮಚ್ಚಮಾಡ ಕೆ. ದೇವಯ್ಯ, ಪುಸ್ತಕ ಪ್ರಯೋಜಕರಾದ ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ, ವಲ್ಲಂಡ ಪ್ರಶಾಂತ್ ಮುತ್ತಣ್ಣ, ಲೇಖಕಿಯರಾದ ಪೆಮ್ಮಂಡ ಮೀರಾ ಬಿದ್ದಪ್ಪ ಹಾಗೂ ಜಮ್ಮಡ ಬಬಿತಾ ಪೂವಣ್ಣ ಭಾಗವಹಿಸಲಿದ್ದಾರೆ.

ಬೆಳ್ಳಿ ಹಬ್ಬದ ಲಾಂಛನ ಬಿಡುಗಡೆ: ಕೊಡವ ತಕ್ಕ್ ಎಳ್ತ್‍ಕಾರಡ ಕೂಟ ಸ್ಥಾಪನೆಯಾಗಿ ಏಪ್ರಿಲ್ 30ನೇ ತಾರೀಖಿಗೆ 25 ವರ್ಷ ತುಂಬುವ ಈ ಸಂದರ್ಭದಲ್ಲಿ ಬೆಳ್ಳಿ ಹಬ್ಬ ಆಚರಿಸುವ ಸಲುವಾಗಿ ಬೆಳ್ಳಿ ಹಬ್ಬದ ನೂತನ ಲಾಂಛನವನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗುವದು.

ಕಾರ್ಯಕ್ರಮಕ್ಕೆ ಯಾವದೇ ಜಾತಿ, ಧರ್ಮದ ನಿರ್ಬಂಧವಿಲ್ಲದೆ ಪ್ರತಿಯೊಬ್ಬರು ಭಾಗವಹಿಸಬೇಕೆಂದು, ಹೆಚ್ಚಿನ ಮಾಹಿತಿಗೆ 9880584732, 9448326014, 9008782852 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ‘ಕೂಟ’ದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ತಿಳಿಸಿದ್ದಾರೆ.