ಭಾಗಮಂಡಲ, ಏ. 29: ಇಲ್ಲಿಗೆ ಸಮೀಪದ ಚೆಟ್ಟಿಮಾನಿಯಲ್ಲಿ ನಡೆಯುತ್ತಿರುವ ಗೌಡ ಕುಟುಂಬಗಳ ನಡುವಿನ ಕೆದಂಬಾಡಿ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ದಂಬೆಕೋಡಿ, ಪರ್ಲಕೋಟಿ, ಕೆದಂಬಾಡಿ ಮತ್ತು ಅಯ್ಯಂಡ್ರ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಕುದುಕುಳಿ ತಂಡವು ಚೋಂಡಿರ ತಂಡದ ವಿರುದ್ಧ ಅಡಿತು. ಮೊದಲು ಬ್ಯಾಟ್ ಮಾಡಿದ ಕುದುಕುಳಿ ತಂಡ 59 ರನ್ ಗಳಿಸಿದ್ದು ಭಾಗಮಂಡಲ, ಏ. 29: ಇಲ್ಲಿಗೆ ಸಮೀಪದ ಚೆಟ್ಟಿಮಾನಿಯಲ್ಲಿ ನಡೆಯುತ್ತಿರುವ ಗೌಡ ಕುಟುಂಬಗಳ ನಡುವಿನ ಕೆದಂಬಾಡಿ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ದಂಬೆಕೋಡಿ, ಪರ್ಲಕೋಟಿ, ಕೆದಂಬಾಡಿ ಮತ್ತು ಅಯ್ಯಂಡ್ರ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಕುದುಕುಳಿ ತಂಡವು ಚೋಂಡಿರ ತಂಡದ ವಿರುದ್ಧ ಅಡಿತು. ಮೊದಲು ಬ್ಯಾಟ್ ಮಾಡಿದ ಕುದುಕುಳಿ ತಂಡ 59 ರನ್ ಗಳಿಸಿದ್ದು ಸಾಧಿಸಿತು. ಪರ್ಲಕೋಟಿ ತಂಡವು 52 ರನ್ ಗಳಿಸಿದರೆ ಉಳುವಾರನ ತಂಡ 38 ರನ್ ಗಳಿಸಿ ಸೋಲನ್ನು ಅನುಭವಿಸಿತು. ನಾಲ್ಕನೇ ಪಂದ್ಯ ಅಯ್ಯಂಡ್ರ ಮತ್ತು ಅಮೆ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಅಯ್ಯಂಡ್ರ ತಂಡ ವಿಜಯ ಸಾಧಿಸಿತು. ದಂಬೆಕೋಡಿ ಮತ್ತು ಕಟ್ಟೆಮನೆ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಟ್ಟೆಮನೆ ತಂಡ 84 ರನ್ ಗಳಿಸಿದರೆ ದಂಬೆಕೋಡಿ ತಂಡ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಮುಂದಿನ ಪಂದ್ಯದಲ್ಲಿ ಚೋಂಡಿರ ತಂಡವು ಪರ್ಲಕೋಟಿ

(ಮೊದಲ ಪುಟದಿಂದ) ತಂಡದ ವಿರುದ್ಧ ಸೆಣಸಾಟ ನಡೆಸಿತು. ಪರ್ಲಕೋಟಿ ತಂಡವು ಚೋಂಡಿರ ತಂಡದ ವಿರುದ್ಧ 114 ರನ್ ಗಳಿಸಿ ಸೆಮಿಫೈನಲ್ ಪ್ರವೇಶಿಸಿತು. ಚೋಂಡಿರ ತಂಡವು ಕೇವಲ 23 ರನ್ ಗಳಿಸಿ 91 ರನ್‍ಗಳ ಸೋಲನ್ನು ಅನುಭವಿಸಿತು. ಕೆದಂಬಾಡಿ ಎ ತಂಡದ ವಿರುದ್ದ ಪೇರಿಯನ ತಂಡವು 8 ವಿಕೆಟ್‍ಗೆ 48 ರನ್ ಗಳಿಸಿತು. ಕೆದಂಬಾಡಿ ಎ ತಂಡವು 4 ವಿಕೆಟ್ ಕಳೆದುಕೊಂಡು ಸೆಮಿಫೈನಲ್ ಪ್ರವೇಶಿಸಿತು.

ಸಮಾರೋಪ : ಕೆದಂಬಾಡಿ ಕ್ರಿಕೆಟ್ ಕ್ಲಬ್‍ನ 26ನೇ ವರ್ಷದ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭ ಚೆಟ್ಟಿಮಾನಿ ಗ್ರಾಮದ ಕೆದಂಬಾಡಿ ಆಟದ ಮೈದಾನದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ. ಪಟ್ಟೆದಾರ ಕೆದಂಬಾಡಿ ಎಸ್. ಆನಂದ ಗೌರವಾಧ್ಯಕ್ಷರ ಉಪಸ್ಥಿತಿಯಲ್ಲಿ ಕೆದಂಬಾಡಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಕೆದಂಬಾಡಿ ಜಯಪ್ರಕಾಶ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಜಿ. ಬೋಪಯ್ಯ, ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಂ.ಕೆ. ಜಾನಕಿ ಮೋಹನ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಧರ್ಮೇಂದ್ರ, ಕುಂದಚೇರಿ ಗ್ರಾಮ ಪಂಚಾಯಿತಿ ಸದಸ್ಯ ಹ್ಯಾರೀಸ್, ಕೆದಂಬಾಡಿ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಕೆದಂಬಾಡಿ ರಾಜು, ಕೆದಂಬಾಡಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಕೆದಂಬಾಡಿ ಯು. ಪ್ರಸನ್ನಕುಮಾರ್ ಹಾಗೂ ಕುಶಾಲನಗರ ಎಪಿಸಿಎಂಎಸ್ ಅಧ್ಯಕ್ಷ ಕೆ.ಎಂ. ಪ್ರಸನ್ನ ಪಾಲ್ಗೊಳ್ಳಲಿರುವರು.