ಚೆಟ್ಟಳ್ಳಿ, ಏ. 29: ಕೆ.ವೈ.ಸಿ ಯುವ ಸಂಘ ವತಿಯಿಂದ ಕೊಂಡಂಗೇರಿಯ ಪ್ರೌಢ ಶಾಲಾ ಮೈದಾನದಲ್ಲಿ ಎರಡನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ವಕೀಲ ಕುಂಞÂ ಅಬ್ದುಲ್ಲಾ, ಕೊಂಡಂಗೇರಿ ಆಶಿಫ್ ಆಪು ಅವರ ಸಾರಥ್ಯದಲ್ಲಿ ಕಳೆದ ವರ್ಷ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟವನ್ನು ಚೆಟ್ಟಳ್ಳಿ, ಏ. 29: ಕೆ.ವೈ.ಸಿ ಯುವ ಸಂಘ ವತಿಯಿಂದ ಕೊಂಡಂಗೇರಿಯ ಪ್ರೌಢ ಶಾಲಾ ಮೈದಾನದಲ್ಲಿ ಎರಡನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ವಕೀಲ ಕುಂಞÂ ಅಬ್ದುಲ್ಲಾ, ಕೊಂಡಂಗೇರಿ ಆಶಿಫ್ ಆಪು ಅವರ ಸಾರಥ್ಯದಲ್ಲಿ ಕಳೆದ ವರ್ಷ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟವನ್ನು ಬೆಳೆಸಲು ಸಾಧ್ಯ.ಶೈಕ್ಷಣಿಕ ರಂಗದಲ್ಲಿ ಮುಸ್ಲಿಂ ಸಮುದಾಯ ಪ್ರಗತಿ ಕಾಣಬೇಕಾಗಿದೆ ಎಂದರು.
ಅಲ್ಲದೇ ಕೆ.ವೈ.ಸಿ ಕೊಂಡಂಗೇರಿ ಯುವಕ ಸಂಘದ ಸಾರಥ್ಯದಲ್ಲಿ ಜಿಲ್ಲೆಯ ಶೈಕ್ಷಣಿಕ ಸಾಮಾಜಿಕ ರಂಗದಲ್ಲಿ ಸಾಧನೆಗೈದವರನ್ನು ಗುರುತಿಸಿ (ಮೊದಲ ಪುಟದಿಂದ) ಪ್ರೋತ್ಸಾಹಿಸಿರುವದು ಹೆಮ್ಮೆಯ ವಿಷಯವಾಗಿದೆ.
ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಸಹಕಾರವಿರಲಿದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯ ಯೂಸುಫ್ ಮಾತನಾಡಿ, ಕೊಂಡಂಗೇರಿಯ ಯುವಕ ಆಶಿಫ್ ಪ್ರಾರಂಭಿಸಿದ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟ ಮುಂದಿನ ದಿನಗಳಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸುವಂತೆ ಆಗಲಿ ಎಂದು ಶುಭ ಹಾರೈಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡವರು, ಪುಲ್ವಾಮ ಧಾಳಿಯಲ್ಲಿ ಮಡಿದ ಸೈನಿಕರಿಗೆ, ನ್ಯೂಜಿಲ್ಯಾಂಡ್ ಮಸೀದಿ ಧಾಳಿಯಲ್ಲಿ ಮಡಿದವರಿಗೆ ಹಾಗೂ ಶ್ರೀಲಂಕಾ ಚರ್ಚ್ ಮೇಲೆ ನಡೆದ ಧಾಳಿಯಲ್ಲಿ ಮಡಿದವರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟದ ಸಂಸ್ಥಾಪಕ ಆಶಿಫ್ ವಹಿಸಿದ್ದರು. ಪಂದ್ಯಾಟದ ಪ್ರಾಯೋಜಕರಾದ ಉಂಬಾಯಿ ಗೋಣಿಕೊಪ್ಪ, ಟಿ.ಎಸ್.ಕೆ. ಕೊಂಡಂಗೇರಿ, ವೀರಾಜಪೇಟೆ ಗ್ರಾಮ ಪಂಚಾಯತಿ ಸದಸ್ಯ ರಾಫಿ, ಪಿ.ಎಫ್.ಐ. ಜಿಲ್ಲಾಧ್ಯಕ್ಷ ಹಾರಿಸ್, ರಶೀದ್ ಎಡಪಾಲ, ಶಾದುಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಲುಗುಂದ, ಕೆ.ವೈ.ಸಿ. ಅಧ್ಯಕ್ಷ ನಾಸೀರ್, ಕ್ರಿಯೇಟಿವ್ ಖಲೀಲ್ ಮತ್ತಿತ್ತರರು ಇದ್ದರು.
ಚಾಮಿಯಾಲ್ ಹಾಗೂ ನಾಪೋಕ್ಲು ನಡುವಿನ ಪಂದ್ಯಾಟದಲ್ಲಿ ಟೈಬ್ರೇಕರ್ನಲ್ಲಿ 4-3 ಗೋಲುಗಳ ಅಂತರದಿಂದ ನಾಪೋಕ್ಲು ತಂಡವನ್ನು ಮಣಿಸಿ ಚಾಮಿಯಾಲ್ ತಂಡವು ಗೆದ್ದಿತು.
- ಕೆ.ಎಂ. ಇಸ್ಮಾಯಿಲ್ ಕಂಡಕರೆ