ಕೂಡಿಗೆ, ಏ. 29: ಕೂಡು ಮಂಗಳೂರು ಗ್ರಾ.ಪಂ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಬಡಾವಣೆಯ ಸುಂದರನಗರದಲ್ಲಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ನಿರ್ಮಿಸಿರುವ ಬೃಹತ್ ಗೋದಾಮುಗಳಲ್ಲಿ ಖಾಸಗಿ ಮತ್ತು ಸರ್ಕಾರದ ಒಡೆತನದ ಸಾವಿರಾರು ಕ್ವಿಂಟಲ್ ಆಹಾರ ಧಾನ್ಯಗಳನ್ನು ಸಂಗ್ರಹ ಮಾಡಲಾಗಿದೆ.

ರಾಗಿ, ಭತ್ತ, ಮುಸುಕಿನ ಜೋಳವನ್ನು ಸಂಗ್ರಹ ಮಾಡ ಲಾಗಿರುವ ಗೋದಾಮಿನ ಜಾಗದಲ್ಲಿ ಧಾನ್ಯದ ಚೀಲಗಳಿಗೆ ಕುಟ್ಟೆಹುಳುಗಳು ಸೇರಿಕೊಂಡಿವೆ. ಉಗ್ರಾಣದೊಳಗೆ ಗಾಳಿಯಾಡಲು ಬೆಳಗ್ಗಿನಿಂದ ಸಂಜೆಯವರೆಗೆ ಬಾಗಿಲುಗಳನ್ನು ತೆರೆಯಲಾಗುತ್ತದೆ. ಸಂಜೆ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಉಗ್ರಾಣದ ಬಾಗಿಲುಗಳನ್ನು ಮುಚ್ಚಿದ ನಂತರ ಕುಟ್ಟೆಹುಳುಗಳು ಉಗ್ರಾಣದ ಎದುರು ರಸ್ತೆಯ ಪಕ್ಕದಲ್ಲಿಯೇ ಇರುವ ಮನೆಗಳಿಗೆ ನುಗ್ಗುತ್ತಿವೆ. 30ಕ್ಕೂ ಹೆಚ್ಚು ಮನೆಗಳು ಇದ್ದು, ಈ ಕುಟ್ಟೆಹುಳುಗಳು ಸಂಜೆಯಾಗುತಿದ್ದಂತೆಯೇ ಮನೆಗಳೊಳಗೆ ಹಾರಿಹೋಗಿ ಮನೆಯಲ್ಲಿ ಆಹಾರ ಧಾನ್ಯ, ಆಹಾರ ಸಾಮಗ್ರಿಗಳು, ಕುಡಿಯುವ ನೀರು, ಬಟ್ಟೆಬರೆ, ವಿದ್ಯಾರ್ಥಿಗಳ ಪುಸ್ತಕಗಳು, ಹಾಸಿಗೆ, ನೆಲ ಎಲ್ಲಾ ಕಡೆ ಸೇರಿ ಕೊಂಡು ಮನೆಮಂದಿ ಈ ಕುಟ್ಟೆಹುಳು ಗಳಿಗೆ ಹೆದರಿ ಮನೆಯನ್ನು ತೊರೆಯುವ ಪ್ರಸಂಗ ಎದುರಾಗಿದೆ.

ಅಧಿಕಾರಿಗಳು ಉಗ್ರಾಣದೊಳಗೆ ಹುಳು ನಿವಾರಣಾ ಔಷಧಿಗಳನ್ನು ಸಿಂಪಡಿಸಿದ್ದು, ಆ ಹುಳುಗಳು ಕಳೆದ ಒಂದು ವಾರದಿಂದ ಸಾಗರೋಪಾ ದಿಯಲ್ಲಿ ಸಂಜೆಯಾಗುತ್ತಿದ್ದಂತೆ ಉಗ್ರಾಣಗಳಿಂದ (ಮೊದಲ ಪುಟದಿಂದ) ಗುಂಯ್ ಗುಟ್ಟುತ್ತಾ ಮನೆಗಳಗೆ ನುಗ್ಗುವದರ ಜೊತೆಗೆ ಸಣ್ಣ ಮಕ್ಕಳಿಗೆ ಕಚ್ಚಿ ಮುಖ, ಕೈ-ಕಾಲುಗಳು ಊದಿ, ಆಸ್ಪತ್ರೆ ಸೇರಿರುವ ಘಟನೆಗಳು ನಡೆದಿವೆ. ಅಲ್ಲದೆ, ದೊಡ್ಡವರಿಗೂ ಸಹ ಕಚ್ಚ್ಚಿ ಸ್ಥಳೀಯ ಆಸ್ಪತ್ರೆಗಳಲ್ಲಿ ಹುಳುಗಳ ಕಡಿತಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಣ್ಣ ಮಕ್ಕಳಾದ ದೀಕ್ಷಿತ್, ಕಾವ್ಯ, ಚಂದು, ರಕ್ಷಿ ಇವರಿಗೆ ಮುಖ, ಕೈ-ಕಾಲುಗಳಿಗೆ ಈ ಹುಳುಗಳು ಕಚ್ಚಿ, ಕಚ್ಚಿರುವ ಜಾಗಗಳೆಲ್ಲಾ ಕೆಂಪು ಕಜ್ಜಿಗಳಾಗಿ ತುರಿಕೆ ಬಂದು ಅಲರ್ಜಿಯಾಗಿದೆ. ಇದೇ ರೀತಿಯ ದೊಡ್ಡವರಿಗೂ ಕಚ್ಚಿ ವೆಂಕಟೇಶ್, ಅಣ್ಣಯ್ಯ, ಶಂಕರಪ್ಪ, ಬಾಲರಾಜು, ಸಣ್ಣಮ್ಮ, ಅಯ್ಯಣ್ಣ ಸೇರಿದಂತೆ ಅನೇಕರು ಚಿಕಿತ್ಸೆಯನ್ನು ಪಡೆದುಕೊಂಡಿದ್ದು, ದಿನವೂ (ಮೊದಲ ಪುಟದಿಂದ) ಗುಂಯ್ ಗುಟ್ಟುತ್ತಾ ಮನೆಗಳಗೆ ನುಗ್ಗುವದರ ಜೊತೆಗೆ ಸಣ್ಣ ಮಕ್ಕಳಿಗೆ ಕಚ್ಚಿ ಮುಖ, ಕೈ-ಕಾಲುಗಳು ಊದಿ, ಆಸ್ಪತ್ರೆ ಸೇರಿರುವ ಘಟನೆಗಳು ನಡೆದಿವೆ. ಅಲ್ಲದೆ, ದೊಡ್ಡವರಿಗೂ ಸಹ ಕಚ್ಚ್ಚಿ ಸ್ಥಳೀಯ ಆಸ್ಪತ್ರೆಗಳಲ್ಲಿ ಹುಳುಗಳ ಕಡಿತಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಣ್ಣ ಮಕ್ಕಳಾದ ದೀಕ್ಷಿತ್, ಕಾವ್ಯ, ಚಂದು, ರಕ್ಷಿ ಇವರಿಗೆ ಮುಖ, ಕೈ-ಕಾಲುಗಳಿಗೆ ಈ ಹುಳುಗಳು ಕಚ್ಚಿ, ಕಚ್ಚಿರುವ ಜಾಗಗಳೆಲ್ಲಾ ಕೆಂಪು ಕಜ್ಜಿಗಳಾಗಿ ತುರಿಕೆ ಬಂದು ಅಲರ್ಜಿಯಾಗಿದೆ. ಇದೇ ರೀತಿಯ ದೊಡ್ಡವರಿಗೂ ಕಚ್ಚಿ ವೆಂಕಟೇಶ್, ಅಣ್ಣಯ್ಯ, ಶಂಕರಪ್ಪ, ಬಾಲರಾಜು, ಸಣ್ಣಮ್ಮ, ಅಯ್ಯಣ್ಣ ಸೇರಿದಂತೆ ಅನೇಕರು ಚಿಕಿತ್ಸೆಯನ್ನು ಪಡೆದುಕೊಂಡಿದ್ದು, ದಿನವೂ (ಮೊದಲ ಪುಟದಿಂದ) ಗುಂಯ್ ಗುಟ್ಟುತ್ತಾ ಮನೆಗಳಗೆ ನುಗ್ಗುವದರ ಜೊತೆಗೆ ಸಣ್ಣ ಮಕ್ಕಳಿಗೆ ಕಚ್ಚಿ ಮುಖ, ಕೈ-ಕಾಲುಗಳು ಊದಿ, ಆಸ್ಪತ್ರೆ ಸೇರಿರುವ ಘಟನೆಗಳು ನಡೆದಿವೆ. ಅಲ್ಲದೆ, ದೊಡ್ಡವರಿಗೂ ಸಹ ಕಚ್ಚ್ಚಿ ಸ್ಥಳೀಯ ಆಸ್ಪತ್ರೆಗಳಲ್ಲಿ ಹುಳುಗಳ ಕಡಿತಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಣ್ಣ ಮಕ್ಕಳಾದ ದೀಕ್ಷಿತ್, ಕಾವ್ಯ, ಚಂದು, ರಕ್ಷಿ ಇವರಿಗೆ ಮುಖ, ಕೈ-ಕಾಲುಗಳಿಗೆ ಈ ಹುಳುಗಳು ಕಚ್ಚಿ, ಕಚ್ಚಿರುವ ಜಾಗಗಳೆಲ್ಲಾ ಕೆಂಪು ಕಜ್ಜಿಗಳಾಗಿ ತುರಿಕೆ ಬಂದು ಅಲರ್ಜಿಯಾಗಿದೆ. ಇದೇ ರೀತಿಯ ದೊಡ್ಡವರಿಗೂ ಕಚ್ಚಿ ವೆಂಕಟೇಶ್, ಅಣ್ಣಯ್ಯ, ಶಂಕರಪ್ಪ, ಬಾಲರಾಜು, ಸಣ್ಣಮ್ಮ, ಅಯ್ಯಣ್ಣ ಸೇರಿದಂತೆ ಅನೇಕರು ಚಿಕಿತ್ಸೆಯನ್ನು ಪಡೆದುಕೊಂಡಿದ್ದು, ದಿನವೂ ರೀತಿಯಲ್ಲಿಯೂ ಸ್ಪಂದಿಸದೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿ ದ್ದಾರೆ. ಹುಳುಗಳಿಂದ ಆಗುತ್ತಿರುವ ತೊಂದರೆಗೂ ನಮಗೂ ಯಾವದೇ ರೀತಿಯ ಸಂಬಂಧ ವಿಲ್ಲದಂತೆ ಕಂಡು ಕಾಣದಂತೆ ಇದ್ದಾರೆ. ಈ ಸಣ್ಣ ಹುಳುಗಳಾದರೂ ಅವುಗಳಿಂದ ಆಗುತ್ತಿರುವ ತೊಂದರೆ ಮಾತ್ರ ದೊಡ್ಡದು. ಈ ವಿಚಾರ ಸಣ್ಣದಾದರೂ ಇಡೀ ಕುಟುಂಬಗಳೇ ಈ ಹುಳುಗಳಿಂದ ನರಕ ಯಾತನೆ ಪಡುತ್ತಿದ್ದಾರೆ.

ಹುಳುಗಳಿಂದ ಜನರಿಗೆ ಆಗುತ್ತಿರುವ ಭಾರಿ ತೊಂದರೆಯ ಬಗ್ಗೆ ಉಗ್ರಾಣದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಆ ಅಧಿಕಾರಿಗಳು ಬೇಜವಬ್ದಾರಿತ&divound; Àದಿಂದ ವರ್ತಿಸುತ್ತಿ ದ್ದಾರೆ. ಹುಳುಗಳು ಹೊರಗಡೆ ಹೋದರೆ ನಾವೇನು ಮಾಡುವದು ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಹುಳುಗಳು ಧಾನ್ಯದೊಳಗೆ ಬರುವ ಮುಂಚೆಯೇ ಎಚ್ಚೆತ್ತುಕೊಂಡು ಔಷಧಿ ಸಿಂಪಡಿಸ ಬೇಕಾದ ಅಧಿಕಾರಿ ಗಳು ಹುಳುಗಳು ಹೆಚ್ಚಾದಾಗ ಔಷಧಿ ಸಿಂಪಡಿಸಿ, ಅವು ರಸ್ತೆಯ ಬದಿಯ ಮನೆ ಗಳೊಳಗೆ ಬರುವ ಸ್ಥಿತಿ ನಿರ್ಮಾಣಕ್ಕೆ ಉಗ್ರಾಣದ ಅಧಿಕಾರಿಗಳು ಕಾರಣ ರಾಗಿದ್ದಾರೆ ಎಂದು ಹುಳುಗಳಿಂದ ನರಕಯಾತನೆ ಪಡುತ್ತಿರುವ ಗ್ರಾಮಸ್ಥರು ಆಕ್ರೋಶ ವ್ಯಪ್ತಪಡಿಸಿದ್ದಾರೆ.

ಸಮೀಪದ ಕೂಡುಮಂಗ ಳೂರು ಗ್ರಾಮ ಪಂಚಾಯ್ತಿಗೆ ಅರ್ಜಿ ಸಲ್ಲಿಸಿ, ಈ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಮನವಿ ಪತ್ರ ಸಲ್ಲಿಸಿದ್ದಾರೆ. ನಂತರ ಜಿಲ್ಲಾಧಿಕಾರಿ ಗಳಿಗೂ ಈ ಸಂಬಂಧ ಅರ್ಜಿ ಸಲ್ಲಿಸಲು ಇಲ್ಲಿನ ಗ್ರಾಮಸ್ಥರು ಮುಂದಾಗಿದ್ದಾರೆ.

ತುರ್ತು ಕ್ರಮ: ಇದಕ್ಕೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಯನ್ನು ವಿಚಾರಿಸಿದಾಗ ಇಂದು ಈ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಕುಟುಂಬದವರು ಮನೆಯನ್ನು ಬಿಟ್ಟು ಹೋಗದ ಹಾಗೆ ತಿಳುವಳಿಕೆ ನೀಡಿ, ಹುಳುಗಳ ಸಮಸ್ಯೆಯನ್ನು ಬಗೆಹರಿಸುವ ಹಾಗೂ ಅವು ಗಳನ್ನು ನಾಶ ಪಡಿಸುವ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳ ಲಾಗುತ್ತದೆ ಎಂದು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಆಯೆಷಾ ತಿಳಿಸಿದ್ದಾರೆ.

-ಕೆ.ಕೆ. ನಾಗರಾಜಶೆಟ್ಟಿ