ಮಡಿಕೇರಿ, ಏ. 27: ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಸಿ.ವಿ. ಶಂಕರ್ ಹಾಗೂ ಬಿ.ಕೆ. ಸುಬ್ಬಯ್ಯ ಹೆಸರಿನಲ್ಲಿ ಉಚಿತ ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಂಡಿರುವವರಿಗಾಗಿ ಏರ್ಪಡಿಸ ಲಾಗಿದ್ದ ಹಾಕಿ ಪಂದ್ಯಾವಳಿಯಲ್ಲಿ ಬಾಲಕಿಯರ ವಿಭಾಗದಲ್ಲಿ ವಾಂಡರರ್ಸ್ ತಂಡ ಗೆಲವು ಸಾಧಿಸಿದರೆ, ಬಾಲಕರ ವಿಭಾಗದಲ್ಲಿ ಪೊನ್ನಂಪೇಟೆ ತಂಡ ಜಯಗಳಿಸಿದೆ. ಇಲ್ಲಿನ ಸಾಯಿ ಟರ್ಫ್ ಮೈದಾನದಲ್ಲಿ ನಡೆದ ಪಂದ್ಯಾವಳಿ ಯಲ್ಲಿ ಬಾಲಕಿಯರ ವಿಭಾಗದ ಅಂತಿಮ ಪಂದ್ಯಾಟದಲ್ಲಿ ವಾಂಡರರ್ಸ್ ತಂಡ ಕುಶಾಲನಗರ ತಂಡವನ್ನು 3-2 ಗೋಲುಗಳ ಅಂತರದಿಂದ ಸೋಲಿಸಿ ರೋಲಿಂಗ್ ಟ್ರೋಫಿಯನ್ನು ಮಡಿಕೇರಿ, ಏ. 27: ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಸಿ.ವಿ. ಶಂಕರ್ ಹಾಗೂ ಬಿ.ಕೆ. ಸುಬ್ಬಯ್ಯ ಹೆಸರಿನಲ್ಲಿ ಉಚಿತ ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಂಡಿರುವವರಿಗಾಗಿ ಏರ್ಪಡಿಸ ಲಾಗಿದ್ದ ಹಾಕಿ ಪಂದ್ಯಾವಳಿಯಲ್ಲಿ ಬಾಲಕಿಯರ ವಿಭಾಗದಲ್ಲಿ ವಾಂಡರರ್ಸ್ ತಂಡ ಗೆಲವು ಸಾಧಿಸಿದರೆ, ಬಾಲಕರ ವಿಭಾಗದಲ್ಲಿ ಪೊನ್ನಂಪೇಟೆ ತಂಡ ಜಯಗಳಿಸಿದೆ.
ಇಲ್ಲಿನ ಸಾಯಿ ಟರ್ಫ್ ಮೈದಾನದಲ್ಲಿ ನಡೆದ ಪಂದ್ಯಾವಳಿ ಯಲ್ಲಿ ಬಾಲಕಿಯರ ವಿಭಾಗದ ಅಂತಿಮ ಪಂದ್ಯಾಟದಲ್ಲಿ ವಾಂಡರರ್ಸ್ ತಂಡ ಕುಶಾಲನಗರ ತಂಡವನ್ನು 3-2 ಗೋಲುಗಳ ಅಂತರದಿಂದ ಸೋಲಿಸಿ ರೋಲಿಂಗ್ ಟ್ರೋಫಿಯನ್ನು ಇದಕ್ಕೂ ಮುನ್ನ ನಡೆದ ಪಂದ್ಯಾವಳಿ ಯಲ್ಲಿ ಕೊಡಗು ವಿದ್ಯಾಲಯ ತಂಡ ವಾಂಡರರ್ಸ್ ತಂಡವನ್ನು ಸೋಲಿಸಿ ದರೆ, ಪೊನ್ನಂಪೇಟೆ ತಂಡ ಕುಶಾಲನಗರ ತಂಡವನ್ನು ಮಣಿಸಿ ಫೈನಲ್ ತಲಪಿತ್ತು.
ಶಿಸ್ತು, ಸಂಯಮ ಕಾಯ್ದುಕೊಳ್ಳಿ
ಸಮಾರೋಪ ಸಮಾರಂಭದಲ್ಲಿ ಬಾಲಕರ ವಿಭಾಗದಲ್ಲಿ ವಿಜೇತರಾ ದವರಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ‘ಶಕ್ತಿ’ಯ ಉಪ ಸಂಪಾದಕ ಕುಡೆಕಲ್ ಸಂತೋಷ್ ಅವರು ಕ್ರೀಡೆಯನ್ನು ಕ್ರೀಡಾ ಸ್ಪೂರ್ತಿ ಯೊಂದಿಗೆ ಪರಿಗಣಿಸಬೇಕು. ಶಿಸ್ತು, ಸಂಯಮ ಕಾಯ್ದುಕೊಳ್ಳುವ ದರೊಂದಿಗೆ ಆಟಗಾರರಲ್ಲಿ ವೈಮನಸ್ಸು ಉಂಟಾಗದಂತೆ ಆಡಬೇಕು; ಕ್ರೀಡಾಪಟುಗಳಲ್ಲಿ ಚಕಮಕಿ ಯುಂಟಾದರೆ ಸಾವಧಾನದಿಂದ ಬಗೆಹರಿಸಿಕೊಳ್ಳಬೇಕು.
ಪೋಷಕರು, ತಂಡದ ಮೇಲ್ವಿಚಾರಕರು ಸಹನೆ ಯಿಂದ ವರ್ತನೆ ಮಾಡಬೇಕೆಂದು ಹೇಳಿದರು.
ಹಿರಿಯ ತರಬೇತುದಾರ ಮುದ್ದಯ್ಯ ಅವರು ಮಾತನಾಡಿ, ಶಿಬಿರಗಳಲ್ಲಿ ಕಲಿತದ್ದನ್ನು ಮರೆತುಬಿಡದೆ, ನಿರಂತರವಾಗಿ ಅಭ್ಯಿಸಿಸುತ್ತಿರಬೇಕು, ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂದರು. ಬಾಲಕಿಯರ ವಿಭಾಗದ ವಿಜೇತರಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ.ಎಸ್. ಮಚ್ಚಾಡೊ ಬಹುಮಾನ ವಿತರಣೆ ಮಾಡಿ ಶುಭ ಹಾರೈಸಿದರು.
ಅತಿಥಿಗಳಾಗಿ ವಾಂಡರರ್ಸ್ ಕ್ಲಬ್ನ ಪ್ರಮುಖರಾದ ಬಾಬು ಸೋಮಯ್ಯ, ಲಕ್ಷ್ಮಣಸಿಂಗ್, ಲೋಕೇಶ್ ನಾಯ್ಡು, ತೀರ್ಪುಗಾರರಾದ ಪೂರ್ಣೇಶ್, ರತೀಶ್, ಚೆಲುವಾಂಬ, ಇನ್ನಿತರರಿದ್ದರು. ವಾಂಡರ್ಸ್ ಕ್ಲಬ್ನ ವೆಂಕಟೇಶ್ ಸ್ವಾಗತಿಸಿ, ನಿರೂಪಿಸಿದರು.