ಗೋಣಿಕೊಪ್ಪ ವರದಿ, ಏ. 26 : ತಿತಿಮತಿ ಪ್ರೌಢಶಾಲಾ ಮೈದಾನದಲ್ಲಿ ಯರವ ಸಮಾಜದ ವತಿಯಿಂದ ನಡೆಯುತ್ತಿರುವ ಇಡೆಮಲೆಲಾತ್ಲೇರಂಡ ಕ್ರಿಕೆಟ್ ಟೂರ್ನಿಯಲ್ಲಿ ಕುಟ್ಟ ಸಿಐಸಿ ತಂಡ ಸೆಮಿಫೈನಲ್‍ಗೆ ಪ್ರವೇಶ ಪಡೆಯಿತು.
ಕ್ವಾರ್ಟರ್ ಫೈನಲ್‍ನಲ್ಲಿ ಗದ್ದೆಮನೆ ವಿರುದ್ಧ 1 ರನ್‍ಗಳ ರೋಚಕ ಗೆಲವು ದಾಖಲಿಸಿ ಸೆಮಿಫೈನಲ್‍ಗೆ ಪ್ರವೇಶ ಪಡೆಯಿತು. ಕುಟ್ಟ ಸಿಐಸಿ ತಂಡ 3 ವಿಕೆಟ್‍ಗೆ 30 ರನ್ ಗಳಿಸಿತು. ಗದ್ದೆಮನೆ ತಂಡ 29 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.
ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಗದ್ದೆಮನೆ ತಂಡವು ಶ್ರೀಮಂಗಲ ವಿರುದ್ಧ 3 ವಿಕೆಟ್ ಗೆಲವು ಪಡೆಯಿತು. ಗದ್ದೆಮನೆ 3 ವಿಕೆಟ್‍ಗೆ 40 ರನ್ ಗಳಿಸಿತು. ಶ್ರೀಮಂಗಲ 5 ವಿಕೆಟ್‍ಗೆ 39 ರನ್ ಗಳಿಸಲಷ್ಟೆ ಶಕ್ತವಾಯಿತು.
ಕುಟ್ಟ ಸಿಐಸಿ ಬಿ ತಂಡವು ಬ್ಲೂಬಾಯ್ಸ್ ವಿರುದ್ಧ1 ರನ್‍ಗಳ ಗೆಲವು ಪಡೆಯಿತು. ಕುಟ್ಟ ತಂಡವು 3 ವಿಕೆಟ್‍ಗೆ 39 ರನ್ ದಾಖಲಿಸಿತು. ಬ್ಲೂಬಾಯ್ಸ್ ತಂಡವು 2 ವಿಕೆಟ್‍ಗೆ 38 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಶ್ರೀಮಂಗಲ ತಂಡ ಸಿಲಿಕಾನ್ ವಿರುದ್ಧ 10 ವಿಕೆಟ್ ಗೆಲವು ಪಡೆಯಿತು. ಸಿಲಿಕಾನ್ ಸಿಟಿ ತಂಡವು ಮೊದಲು ಬ್ಯಾಟ್ ಮಾಡಿ 6 ವಿಕೆಟ್‍ಗೆ 24 ರನ್ ಗಳಿಸಿತು. ಶ್ರೀಮಂಗಲ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟಿತು.
ಸಿಲಿಕಾನ್ ತಂಡವು ಅಫಿಶಿಯಲ್ ಕ್ರಿಕೆಟರ್ಸ್ ವಿರುದ್ಧ23 ರನ್‍ಗಳ ಜಯ ಪಡೆಯಿತು. ಸಿಲಿಕಾನ್ 3 ವಿಕೆಟ್‍ಗೆ 59 ರನ್, ಅಫಿಶಿಯಲ್ ತಂಡವು 8 ವಿಕೆಟ್ ಕಳೆದುಕೊಂಡು 36 ರನ್‍ಗಳಿಸಿ ಸೋಲನುಭವಿಸಿತು. ಶ್ರೀಮಂಗಲ ತಂಡ ನೊಕ್ಯಾ ಡಾಲ್ಫಿನ್ಸ್ ವಿರುದ್ಧ 24 ರನ್‍ಗಳ ಗೆಲುವು ಸಾಧಿಸಿತು. ಶ್ರೀಮಂಗಲ 6 ವಿಕೆಟ್‍ಗೆ 53 ರನ್, ಡಾಲ್ಫಿನ್ಸ್ 8 ವಿಕೆಟ್‍ಗೆ 31 ರನ್ ಗಳಿಸಿತು.
ಗದ್ದೆಮನೆ ತಂಡವು ಶ್ರೀರಾಮ್ ವಿರುದ್ಧ 10 ವಿಕೆಟ್ ಗೆಲವು ಪಡೆಯಿತು. ಶ್ರೀರಾಮ್ 4 ವಿಕೆಟ್‍ಗೆ 53 ರನ್, ಗದ್ದೆಮನೆ ವಿಕೆಟ್ ನಷ್ಟವಿಲ್ಲದೆ 54 ರನ್ ಗಳಿಸಿ ಗೆದ್ದು ಬೀಗಿತು. ಸಿವೈಸಿ ತಂಡವು ಕರೆಕಂಡಿ ಬಿ. ವಿರುದ್ಧ 6 ರನ್‍ಗಳ ಗೆಲುವು ಪಡೆಯಿತು. ಕರೆಕಂಡಿ 8 ವಿಕೆಟ್‍ಗೆ 34 ರನ್, ಸಿವೈಸಿ ತಂಡವು 5 ವಿಕೆಟ್ ಕಳೆದುಕೊಂಡು 39 ರನ್ ಸಿಡಿಸಿ, ಗೆಲುವು ದಕ್ಕಿಸಿಕೊಂಡಿತು. ದೇವಮಚ್ಚಿ ತಂಡದ ವಿರುದ್ಧ ಬ್ಲೂ ಬಾಯ್ಸ್ ತಂಡವು 90 ರನ್‍ಗಳ ಜಯ ಪಡೆಯಿತು. ಬ್ಲೂಬಾಯ್ಸ್ ತಂಡ 1 ವಿಕೆಟ್ ಕಳೆದುಕೊಂಡು 114 ರನ್ ಪೇರಿಸಿತು. ದೇವಮಚ್ಚಿ 24 ರನ್ ಗಳಿಸಿ ಹೀನಾಯ ಸೋಲು ಕಂಡಿತು. - ಸುದ್ದಿಪುತ್ರ