ಕಾಕೋಟುಪರಂಬು (ವೀರಾಜಪೇಟೆ), ಏ. 26: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಕಂಬೇಯಂಡ, ನೆಲ್ಲಮಕ್ಕಡ, ಕೋಂಡಿರ, ಚೆಕ್ಕೆರ, ಇಟ್ಟಿರ, ಚೋಯಮಾಡಂಡ, ಸೋಮೇಯಂಡ, ಮುರುವಂಡ, ಮುಕ್ಕಾಟ್ಟಿರ (ಕಡಗದಾಳ್), ಕಂಬೀರಂಡ, ತೀತಿಮಾಡ, ಪೆಮ್ಮಂಡ ತಂಡಗಳು ಮುನ್ನಡೆ ಸಾಧಿಸಿವೆ. ನೆಲ್ಲಮಕ್ಕಡ ಸೋಮಯ್ಯ, ಇಟ್ಟಿರ ಕುಟ್ಟಪ್ಪ ಹ್ಯಾಟ್ರಿಕ್ ಪೆಮ್ಮಂಡ ಸೋಮಣ್ಣ ಸಾಧನೆ ಮಾಡಿದರು.
ಮೈದಾನ 1 ರಲ್ಲಿ ನಡೆದ ಪಂದ್ಯದಲ್ಲಿ ಕಂಬೆಯಂಡ ತಂಡ 1-0 ಗೋಲಿನಿಂದ ಚ್ಯೆಯ್ಯಂಡ ತಂಡವನ್ನು ಪರಾಭವಗೋಳಿಸಿತು. ಕಂಬೆಯಂಡ ಪರ ಕಾರ್ಯಪ್ಪ (23ನಿ) ದಲ್ಲಿ ಗೋಲು ದಾಖಲಿಸಿದರು.
ನೆಲ್ಲಮಕ್ಕಡ ತಂಡ 4-0 ಗೋಲುಗಳಿಂದ ನೆರ್ಪಂಡ ತಂಡವನ್ನು ಸೋಲಿಸಿತು. ನೆಲ್ಲಮಕ್ಕಡ ಪರ ಸೋಮಯ್ಯ (11, 29, 30, 31ನಿ)ದಲ್ಲಿ 4 ಗೋಲು ಬಾರಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು.
ಕೊಂಡಿರ ತಂಡವು 1-0 ಗೋಲಿನಿಂದ ಐಚೇಟ್ಟಿರ ತಂಡವನ್ನು ಮಣಿಸಿದರು. ಕೊಂಡಿರ ಪರ ಸೋಮಯ್ಯ(4ನಿ)ದಲ್ಲಿ ಗೋಲು ದಾಖಲಿಸುವದರ ಮೂಲಕ ತಂಡದ ಮುನ್ನಡೆಗೆ ಕಾರಣರಾದರು.
ಚೆಕ್ಕೆರ ತಂಡ 2-0 ಗೋಲಿನಿಂದ ಮುಕ್ಕಾಟ್ಟಿರ (ಹರಿಹರ) ತಂಡವನ್ನು ಮಣಿಸಿತು. ಚೆಕ್ಕೆರ ಪರ ಆದರ್ಶ್ (11ನಿ), ಶ್ಯಾನ್ ಬೋಪಣ್ಣ (15ನಿ)ದಲ್ಲಿ ಗೋಲು ದಾಖಲಿಸಿದರು.
ಇಟ್ಟಿರ ತಂಡ 5-3 ಗೋಲುಗಳಿಂದ ಪೊನ್ನಚೆಟ್ಟಿರ ತಂಡವನ್ನು ಪರಾಭವ ಗೊಳಿಸಿತು. ಇಟ್ಟಿರ ಪರ ಕುಟ್ಟಪ್ಪ (20, 26, 30, 36ನಿ)ದಲ್ಲಿ 4 ಗೋಲು ಬಾರಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಬಿವಿನ್ (32ನಿ), ಪೊನ್ನಚೆಟ್ಟಿರ ಪರ ಮುತ್ತಣ್ಣ (10ನಿ), ವಿನೋದ್ (32ನಿ)ದಲ್ಲಿ ಗೋಲು ಬಾರಿಸಿ ಗೋಲಿನ ಅಂತರವನ್ನು ಕಡಿಮೆ ಗೊಳಿಸಿತು.
ಚೋಯಮಾಡಂಡ ತಂಡ ಕಂಗಾಂಡ ತಂಡವನ್ನು 2-1 ಗೋಲುಗಳಿಂದ ಪರಾಬವಗೊಳಿಸಿತು., ಚೋಯಮಾಡಂಡ ಪರ ಮಂದಣ್ಣ (96ನಿ), ಸನ್ನು (16ನಿ), ಕಂಗಾಂಡ ಪರ ಪುನಿತ್ (36ನಿ)ದಲ್ಲಿ ಗೋಲು ಬಾರಿಸಿದರು.
ಮೈದಾನ 2 ರಲ್ಲಿ ನಡೆದ ಪಂದ್ಯದಲ್ಲಿ ಸೋಮೆಯಂಡ ತಂಡ 2-0 ಗೋಲಿನಿಂದ ಮುಕ್ಕಾಟ್ಟಿರ(ಬೇತ್ರಿ) ತಂಡವನ್ನು ಪರಾಭವಗೊಳಿಸಿದರು. ಸೋಮೆಯಂಡ ಪರ ಅಪ್ಪಚ್ಚು (9ನಿ), ಪುನೀತ್ (10ನಿ)ದಲ್ಲಿ ಗೋಲು ಬಾರಿಸಿದರು.
ಮುರುವಂಡ ತಂಡ 3-1 ಗೋಲುಗಳಿಂದ ಬೊಟ್ಟೊಳಂಡ ತಂಡವನ್ನು ಮಣಿಸಿತು. ಮುರುವಂಡ ಪರ ಅಕೀಲ್(4ನಿ), ಚರಣ್(5ನಿ), ಮಿಥುನ್(39ನಿ) ಬೊಟ್ಟೋಳಂಡ ಪರ ಚೇತನ್(18ನಿ)ದಲ್ಲಿ ಗೋಲು ದಾಖಲಿಸಿದರು.
ಕಂಬಿರಂಡ ತಂಡ ಮಚ್ಚಾರಂಡ ತಂಡವನ್ನು 3-1 ಗೊಲುಗಳಿಂದ ಸೋಲಿಸಿತು. ಕಂಬೀರಂಡ ಪರ ಯೋಗೇಶ್(9ನಿ), ಬೊಪಣ್ಣ2(27,36ನಿ), ಮಚ್ಚಾರಂಡ ಪರ ಪ್ರಧಾನ್(35ನಿ)ದಲ್ಲಿ ಗೋಲು ಬಾರಿಸಿದರು.
ತೀತಿಮಾಡ ತಂಡವು 1-0 ಗೋಲಿನಿಂದ ಮೇರಿಯಂಡ ತಂಡವನ್ನು ಪರಾಭವ ಗೊಳಿಸಿತು. ತೀತಿಮಾಡ ಬೋಪಣ್ಣ (29ನಿ) ದಲ್ಲಿ ಗೋಲು ಬಾರಿಸಿದರು.
ಪೆಮ್ಮಂಡ ತಂಡ ಪಟ್ಟಡ ತಂಡವನ್ನು 7-1 ಗೋಲುಗಳಿಂದ ಪರಾಭವ ಗೊಳಿಸಿತು. ಪೆಮ್ಮಂಡ ಪರ ಸೋಮಣ್ಣ 5 (4, 11, 13, 21 36ನಿ) ದಲ್ಲಿ ಹ್ಯಾಟ್ರೀಕ್ ಸಾಧನೆ ಮಾಡಿದರು. ಶಕಿಲ್ (23ನಿ), ಪೊನ್ನಣ ್ಣ (32ನಿ), ಪಟ್ಟಡ ಪರ ಅಪ್ಪಚ್ಚು (17ನಿ) ದಲ್ಲಿ ಗೋಲು ಬಾರಿಸಿ ಗೋಲಿನ ಅಂತರವನ್ನು ಕಡಿಮೆ ಮಾಡಿಕೊಂಡು ಪಂದ್ಯಾವಳಿಯಿಂದ ನಿರ್ಗಮಿಸಿದರು.
ಸಂತಾಪ: ಮಾಜಿ ಅಂತರ್ರಾಷ್ಟ್ರೀಯ ಹಾಕಿ ಆಟಗಾರ ಕೂತಂಡ ಚಂಗಪ್ಪ ಅವರ ನಿಧನಕ್ಕೆ ಹಾಕಿ ಕೂರ್ಗ್ ಸಂಸ್ಥೆ ಹಾಗೂ ಆಟಗಾರರು ಮೈದಾನದಲ್ಲಿ ಒಂದು ನಿಮಿಷ ಮೌನಾಚರಿಸಿ ಸಂತಾಪ ವ್ಯಕ್ತಪಡಿಸಿದರು.
ಸ್ಪಷ್ಟನೆ: ಹಾಕಿ ಕೂರ್ಗ್ ಸಂಸ್ಥೆ ವತಿಯಿಂದ ಮ್ಯೆದಾನ 1 ರಲ್ಲಿ ನಡೆಯುತ್ತಿರುವ ಚಾಂಪಿಯನ್ ಟ್ರೋಫಿ ಲೀಗ್ ಪಂದ್ಯಾವಳಿಗೆ ಅಪಸ್ವರ ವ್ಯಕ್ತವಾಗುತ್ತಿದ್ದು ಕಳೆದ ಮೂರು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡಿದ 10 ತಂಡಗಳನ್ನು ಲೀಗ್ ಪಂದ್ಯಾಟಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ನೆಲ್ಲಮಕ್ಕಡ ತಂಡವು ಕೊಡವ ಹಾಕಿ ಪಂದ್ಯಾವಳಿಯಲ್ಲಿ ಆಡುತ್ತಿರುವದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಠೀಕರಣ ನೀಡುತ್ತಿದ್ದೇವೆ ಎಂದು ಹಾಕಿ ಕೂರ್ಗ್ ಸಂಸ್ಥೆ ಕಾರ್ಯದರ್ಶಿ ಬುಟ್ಟಿಯಂಡ ಚಂಗಪ್ಪ ಹೇಳಿದ್ದಾರೆ.