ನಾಪೆÉÇೀಕ್ಲು, ಏ. 26: ಕಕ್ಕಬ್ಬೆ ದಿ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್ ವತಿಯಿಂದ ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹೈಲ್ಯಾಂಡರ್ಸ್ ಇನ್ವಿಟೇಶನ್ ಕಪ್ ಚಾರಿಟಿ ಟೂರ್ನಮೆಂಟ್ ಪಂದ್ಯಾಟದಲ್ಲಿ ಮುಕ್ಕಾಟಿರ ಹಾಗೂ ಶಾಂತೆಯಂಡ ತಂಡಗಳು ಮುನ್ನಡೆ ಸಾಧಿಸಿವೆ.ಮೊದಲು ನಡೆದ ಪಾಸುರ ಮತ್ತು ಮುಕ್ಕಾಟಿರ ತಂಡಗಳ ನಡುವಿನ ಪಂದ್ಯಾಟವು ರೋಚಕವಾಗಿತ್ತು. ನಿಗದಿತ ಅವಧಿಯಲ್ಲಿ ಎರಡು ತಂಡಗಳು ತಲಾ ಒಂದೊಂದು ಗೋಲು ಗಳಿಸಿದವು. ಮುಕ್ಕಾಟಿರ ಪರ ರತನ್ ಒಂದು ಗೋಲುಗಳಿಸಿದರೆ, ಪಾಸುರ ತಂಡದ ಪರ ಮುತ್ತಮ್ಮ ಒಂದು ಗೋಲುಗಳಿಸಿ ಉಭಯ ತಂಡಗಳು ಸಮಬಲ ಸಾಧಿಸಿದವು. ನಂತರ ನಡೆದ ಟೈಬ್ರೇಕರ್ ಪಂದ್ಯದಲ್ಲಿಯೂ ಸಮಬಲ ಕಂಡು ಬಂದ ಕಾರಣ ಸಡನ್ ಡೆತ್ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು. ಇದರಲ್ಲಿ ಮುಕ್ಕಾಟಿರ ತಂಡವು 6-5 ಗೋಲುಗಳಿಂದ ವಿಜಯ ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿತು. ನಂತರ ನಡೆದ ಮಂಡೆಯಂಡ ಹಾಗೂ ಶಾಂತೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಂಡೆಯಂಡ ತಂಡದ ಅಯ್ಯಣ್ಣ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಆದರೆ ದೃತಿಗೆಡದ ಶಾಂತೆಯಂಡ ತಂಡ ಉತ್ತಮ ಪ್ರದರ್ಶನ ನೀಡಿದ ಪರಿಣಾಮ ಕುಶಾಲಪ್ಪ ಗೋಲು ಗಳಿಸಿ ಸಮಬಲ ಕಾಯ್ದುಕೊಂಡರು. ನಿಗದಿತ ಅವಧಿಯ ಆಟದಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದ್ದರಿಂದ ಟೈಬ್ರೇಕರ್‍ನಲ್ಲಿ ಶಾಂತೆಯಂಡ ತಂಡವು 5-4 ಗೋಲುಗಳಿಂದ ವಿಜಯ ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿತು.