ಮಡಿಕೇರಿ, ಏ.26 : ಕೊಡವ ಮಕ್ಕಡ ಕೂಟ ಮತ್ತು ಕೊಡಗು ಪ್ರೆಸ್‍ಕ್ಲಬ್ ಸಹಯೋಗದಲ್ಲಿ ತಾ. 28ರಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಪತ್ರಿಕಾಭವನ ಸಭಾಂಗಣದಲ್ಲಿ ಕೊಡವ ಮಕ್ಕಡ ಕೂಟದ 25ನೇ ಪ್ರಕಟಣೆಯಾಗಿ ಆಂಗ್ಲ ಭಾಷೆಯಲ್ಲಿ ‘ದಿ ಮೇಜರ್ ಹೂ ಕೆಪ್ಟ್ ಹಿಸ್ ಕೂಲ್’ ಕೃತಿ ಲೋಕಾರ್ಪಣೆಗೊಳ್ಳಲಿದೆ.
ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ನಿವೃತ್ತ ಅಧಿಕಾರಿಗಳಾದ ಏರ್‍ಮಾರ್ಷಲ್ ಕೊಡಂದೇರ ಸಿ.ಕಾರ್ಯಪ್ಪ ಪಿವಿಎಸ್‍ಎಂ, ವಿಎಂ ಅವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಲೆಫ್ಟಿನೆಂಟ್ ಜನರಲ್ ಡಾ.ಬಿಎನ್‍ಬಿಎಂ ಪ್ರಸಾದ್ ಎಸ್‍ಎಂ, ವಿಎಸ್‍ಎಂ, ಕೊಡಗು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಾಚಮಂಡ ಎ.ಕಾರ್ಯಪ್ಪ, ಮೇಜರ್ ಜನರಲ್ ಕೊಡಂದೇರ ಅರ್ಜುನ್ ಮುತ್ತಣ್ಣ, ಎಸ್‍ಎಂ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷÀ ಕರ್ನಲ್ ಕಂಡ್ರತಂಡ ಸಿ.ಸುಬ್ಬಯ್ಯ, ವಿಎಸ್‍ಎಂ ಪುಸ್ತಕದ ಕೇಂದ್ರ ಬಿಂದು ಆಗಿರುವ ಮಹಾವೀರ ಚಕ್ರ ಪುರಸ್ಕøತ ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಎಸ್.ಗಣಪತಿ, ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪುಸ್ತಕ ಸಮಿತಿ ಸಂಚಾಲಕÀ ಬಿ.ಸಿ.ದಿನೇಶ್, ಪುಸ್ತಕದ ಲೇಖಕÀ ಮೂಕೊಂಡ ನಿತಿನ್ ಕುಶಾಲಪ್ಪ ಪಾಲ್ಗೊಳ್ಳಲಿದ್ದಾರೆ.
ಮಹಾವೀರ ಚಕ್ರ ಪುರಸ್ಕøತ ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಎಸ್.ಗಣಪತಿ ಹಾಗೂ ಲೇಖಕÀ ಮೂಕೊಂಡ ನಿತಿನ್ ಕುಶಾಲಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವದು ಎಂದು ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದ್ದಾರೆ.