ಗೋಣಿಕೊಪ್ಪ ವರದಿ, ಏ. 26 : ಅಂಬೇಡ್ಕರ್ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ಅಮ್ಮತ್ತಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆರಂಭಗೊಂಡಿರುವ ರಾಜ್ಯಮಟ್ಟದ ಸೆವೆನ್ ಸೈಡ್ ಮುಕ್ತ ಕಾಲ್ಚೆಂಡು ಪಂದ್ಯಾವಳಿಯ ಮೊದಲ ದಿನದ ಪಂದ್ಯಗಳಲ್ಲಿ 3 ತಂಡಗಳು ಗೆಲವು ದಾಖಲಿಸಿದವು.
ಒಂಟಿಯಂಗಡಿ ಸಿವೈಸಿ ತಂಡವು ವಿರಾಜಪೇಟೆ ಸಿಸಿಬಿ ತಂಡದ ವಿರುದ್ಧ 5-1 ಗೋಲುಗಳ ಮೂಲಕ ಜಯ ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಚೌಡೇಶ್ವರಿ ತಂಡವು ಸನ್‍ರೈಸಸ್ ವಿರುದ್ದ 4-0 ಗೋಲುಗಳ ಜಯ ಪಡೆಯಿತು. ಒಂಟಿಯಂಗಡಿ ಸಿವೈಸಿ ತಂಡವು ಅಮ್ಮತ್ತಿ ಎಎಸ್‍ಆರ್‍ಸಿ ವಿರುದ್ಧ 1-0 ಗೋಲುಗಳ ಗೆಲವು ಪಡೆಯಿತು.
ಉದ್ಘಾಟನೆ : ಕ್ರೀಡಾಕೂಟವನ್ನು ಅಮ್ಮತ್ತಿ ಶ್ರೀ ಗಣಪತಿ ಸೇವಾ ಸಮಿತಿ ಗೌರವ ಅಧ್ಯಕ್ಷ ಐನಂಡ ಕೆ. ಪೂಣಚ್ಚ ಹಾಗೂ ಅತಿಥಿಗಳು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂ ಸಮರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಚೆನ್ನಯ್ಯನಕೋಟೆ ಶ್ರೀ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಎಚ್. ಆರ್. ಪವಿತ್ರ, ದಾನಿ ವಿ. ಎಸ್. ಚಂದ್ರ, ಶ್ರೀ ಗಣಪತಿ ಸೇವಾ ಸಮಿತಿ ಗೌರವ ಅಧ್ಯಕ್ಷ ಗೋವಿಂದ, ಚೌಡೇಶ್ವರಿ ಜೀಣೋಧ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಅಂಬೇಡ್ಕರ್ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಅರುಣ್, ಉಪಾಧ್ಯಕ್ಷ ಸತೀಶ್, ಕಾರ್ಯದರ್ಶಿ ಮಧು, ಖಜಾಂಜಿ ಬೋಜಪ್ಪ ಇದ್ದರು. ಪುಲ್ವಾಮಾದಲ್ಲಿ ಉಗ್ರರ ಕೃತ್ಯಕ್ಕೆ ಜೀವದಾನ ಮಾಡಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. -ಸುದ್ದಿಪುತ್ರ