ಗೋಣಿಕೊಪ್ಪಲು, ಏ. 26: ಮುಂದಿನ ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಿಂದ ಪೊನ್ನಂಪೇಟೆಯಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಕಲಾಪ ಪ್ರಾರಂಭಗೊಳ್ಳಲಿದ್ದು, ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಅಗತ್ಯವಾಗಿರುವ ಪೀಠೋಪಕರಣಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಈ ಕುರಿತಾಗಿ ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷರಾದ ಎಸ್.ಡಿ. ಕಾವೇರಪ್ಪ ಹಾಗೂ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೊನ್ನಂಪೇಟೆ ನೂತನ ತಾಲೂಕಾಗಿ ಪರಿವರ್ತನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಬೇಡಿಕೆಯಂತೆ ರಾಜ್ಯ ಉಚ್ಛ ನ್ಯಾಯಾಲಯದಿಂದ ಇದಕ್ಕೆ ಅನುಮೋದನೆ ದೊರಕಿದ್ದು, ಪ್ರಸ್ತುತ ಇರುವ ನ್ಯಾಯಾಲಯ ಸಮುಚ್ಛಯದ ದ್ವಿತೀಯ ಅಂತಸ್ತಿನಲ್ಲಿ ಪ್ರಾರಂಭಗೊಳ್ಳಲಿದೆ. ವಾರದ ಎರಡು ದಿನ ಈ ನ್ಯಾಯಾಲಯ ಕಾರ್ಯ ನಿರ್ವಹಿಸಲಿದ್ದು, ಈ ಭಾಗದ ನಾಲ್ಕು ಗೋಣಿಕೊಪ್ಪಲು, ಏ. 26: ಮುಂದಿನ ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಿಂದ ಪೊನ್ನಂಪೇಟೆಯಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಕಲಾಪ ಪ್ರಾರಂಭಗೊಳ್ಳಲಿದ್ದು, ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಅಗತ್ಯವಾಗಿರುವ ಪೀಠೋಪಕರಣಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಈ ಕುರಿತಾಗಿ ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷರಾದ ಎಸ್.ಡಿ. ಕಾವೇರಪ್ಪ ಹಾಗೂ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೊನ್ನಂಪೇಟೆ ನೂತನ ತಾಲೂಕಾಗಿ ಪರಿವರ್ತನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಬೇಡಿಕೆಯಂತೆ ರಾಜ್ಯ ಉಚ್ಛ ನ್ಯಾಯಾಲಯದಿಂದ ಇದಕ್ಕೆ ಅನುಮೋದನೆ ದೊರಕಿದ್ದು, ಪ್ರಸ್ತುತ ಇರುವ ನ್ಯಾಯಾಲಯ ಸಮುಚ್ಛಯದ ದ್ವಿತೀಯ ಅಂತಸ್ತಿನಲ್ಲಿ ಪ್ರಾರಂಭಗೊಳ್ಳಲಿದೆ. ವಾರದ ಎರಡು ದಿನ ಈ ನ್ಯಾಯಾಲಯ ಕಾರ್ಯ ನಿರ್ವಹಿಸಲಿದ್ದು, ಈ ಭಾಗದ ನಾಲ್ಕು ಧೀಶರ ಅಗತ್ಯ ಬಗ್ಗೆ ಪೆÇನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷರೂ ಹಾಗೂ ಪದಾಧಿಕಾರಿಗಳು ಈ ಹಿಂದೆ ಹಲವು ಬಾರಿ ರಾಜ್ಯ ಉಚ್ಛನ್ಯಾಯಾಲಯದ ಕೊಡಗು ಆಡಳಿತಾತ್ಮಕ ನ್ಯಾಯಾ ಧೀಶರಿಗೂ ಹಾಗೂ ಮುಖ್ಯ ನ್ಯಾಯ ಮೂರ್ತಿ ಗಳಿಗೂ ಮನವಿ ಸಲ್ಲಿಸಿದ ಮೇರೆ ಈ ಆದೇಶ ಹೊರಬಿದ್ದಿದೆ.

ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಸಂದೇಶ್ ಅವರು ಮಾರ್ಚ್ 4 ರಂದು ಪೆÇನ್ನಂಪೇಟೆ ನ್ಯಾಯಾಲಯಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ಈ ಭಾಗದ ಸಾರ್ವಜನಿಕರು ಹಾಗೂ ಕಕ್ಷಿದಾರರ ಅವಶ್ಯಕತೆ ಮನಗಂಡು ಇದೀಗ ವಾರಕ್ಕೆ ಎರಡು ದಿನ ಶುಕ್ರವಾರ ಹಾಗೂ ಶನಿವಾರ ಕಲಾಪ ನಡೆಸಲು ಸಮ್ಮತಿಸಿದ್ದಾರೆ.

ಪ್ರಮುಖವಾಗಿ ಸಿವಿಲ್ ವ್ಯಾಜ್ಯಗಳಾದ ವಾಹನ ಅಪರಾಧ, ವಿವಾಹ ವಿಚ್ಛೇದನ, ವಾಹನ ವಿಮೆ ಇತ್ಯಾದಿಗಳಿಗೆ ಸಂಬಂಧಿಸಿದ ವ್ಯಾಜ್ಯಗಳಿಗೆ ದೂರದ ವೀರಾಜಪೇಟೆಗೆ ಕುಟ್ಟ, ಬಿರುನಾಣಿ, ಬಾಳೆಲೆ, ಕಾನೂರು, ಶ್ರೀಮಂಗಲ ಇತ್ಯಾದಿ ಊರುಗಳಿಂದ ಅಲೆಯುವದರಿಂದ ಮುಕ್ತಿ ದೊರೆಯಲಿದೆ. ಮೇ 30 ಅಥವಾ ಜೂನ್ 1 ರಂದು (ಮೊದಲ ಪುಟದಿಂದ) ಉದ್ಘಾಟನಾ ಸಮಾರಂಭ ನಡೆಯಲಿದ್ದು, ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಧೀಶರಾದ ಸಂದೇಶ್, ಮಡಿಕೇರಿ ಪ್ರಧಾನ ಸತ್ರ ನ್ಯಾಯಾಧೀಶರಾದ ವಿ.ವಿ.ಮಲ್ಲಾಪೂರ, ಪೆÇನ್ನಂಪೇಟೆ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ಎಂ.ಇ.ಮೋಹನ್‍ಗೌಡ ಮುಂತಾದ ನ್ಯಾಯಾಧೀಶರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವದಾಗಿ ವಕೀಲರ ಸಂಘದ ಅಧ್ಯಕ್ಷ ಕಾವೇರಪ್ಪ ತಿಳಿಸಿದ್ದಾರೆ. ಬೆಂಗಳೂರು ವಕೀಲರು ಹಾಗೂ ಪೆÇನ್ನಂಪೇಟೆ ವಕೀಲರ ಸಂಘದ ಸದಸ್ಯ ಮಾಚಿಮಂಡ ಸುರೇಶ್ ವಿಶೇಷ ಪ್ರಯತ್ನದಿಂದಾಗಿ ಶೀಘ್ರ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಪೆÇನ್ನಂಪೇಟೆಯಲ್ಲಿ ಕಾರ್ಯಾರಂಭ ಮಾಡುವಂತಾಗಿದೆ ಎಂದು ಅಧ್ಯಕ್ಷ ಕಾವೇರಪ್ಪ ಸ್ಮರಿಸಿದರು.

ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಂದರ್ಭ ಸಂಘದ ಕಾರ್ಯದರ್ಶಿ ಎಂ.ಡಿ.ರಾಖೇಶ್, ಉಪಾಧ್ಯಕ್ಷ ಕೆ.ಡಿ.ಮುತ್ತಪ್ಪ, ಜಂಟಿ ಕಾರ್ಯದರ್ಶಿ ಬಿ.ಆರ್.ವಿನೋದ್, ಖಜಾಂಚಿ ಕೆ.ಬಿ.ಸಂಜೀವ್, ಪದಾಧಿಕಾರಿಗಳಾದ ಸಿ.ಬಿ.ಅನಿತಾ, ಎಂ.ಸಿ.ಪೂವಣ್ಣ, ಎ.ಕೆ.ಮೋನಿ ಪೆÇನ್ನಪ್ಪ, ಬಿ.ಎಂ.ಅಯ್ಯಪ್ಪ, ಬಿ.ಎನ್.ಮುತ್ತಣ್ಣ, ಕೆ.ಎಂ.ಭಾರತಿ ಹಾಗೂ ಸಂಘದ ಹಿರಿಯ ವಕೀಲರಾದ ಮನೆಯಪಂಡ ನಾಣಯ್ಯ, ಕೆ.ಎಂ.ಗಣಪತಿ, ಅಜ್ಜಿಕುಟ್ಟೀರ ಕೆ.ಪೂಣಚ್ಚ ಮುಂತಾದವರಿದ್ದರ. -ಟಿ.ಎಲ್.ಎಸ್.