ಸುಂಟಿಕೊಪ್ಪ, ಏ. 25: ಇಲ್ಲಿಗೆ ಸಮೀಪದ ಗುಡ್ಡೆಹೊಸೂರು ಐಶ್ವರ್ಯ ಕಾಲೇಜಿನಲ್ಲಿ ಟೆನ್ನಿಸ್ ಕ್ರೀಡಾಂಗಣವನ್ನು ಸಂಸ್ಥಾಪಕ ರಾಮ್ ದೇವಯ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಹಲವಾರು ಕ್ರೀಡಾಪಟುಗಳು ಕ್ರೀಡಾಂಗಣದ ಕೊರತೆಯಿಂದ ತಮ್ಮ ಪ್ರತಿಭೆಯನ್ನು ಹೊರ ತರಲು ವಂಚಿತರಾಗುತ್ತಾರೆ. ಆಸಕ್ತಿ ಇರುವವರು ಈ ಕ್ರೀಡಾಂಗಣದ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಈ ಸಂದರ್ಭ ಸುಂಟಿಕೊಪ್ಪ ಬ್ಲೂ ಬಾಯ್ಸ್ ಯುವಕ ಸಂಘದ ಅಧ್ಯಕ್ಷ ಎನ್.ಎಸ್. ಆದಿಶೇಷ, ತರಬೇತುದಾರ ರಾಘವೇಂದ್ರ ಕ್ರೀಡಾಪಟುಗಳು ಹಾಜರಿದ್ದರು.